ವಿವಾದಗಳ ರಾಜ ಟಿಪ್ಪು ಇತಿಹಾಸ ಮಕ್ಕಳು ಓದುವ ಅಗತ್ಯವಿಲ್ಲ: ಬಸವರಾಜ ಬೊಮ್ಮಾಯಿ  

ಹಲವು ವಿವಾದಗಳನ್ನು ಸೃಷ್ಟಿಸಿ ರಾಜನಾಗಿದ್ದ ಟಿಪ್ಪು ಸುಲ್ತಾನ್ ಬಗೆಗಿನ ಇತಿಹಾಸವನ್ನು ಮಕ್ಕಳು ಓದುವ ಅವಶ್ಯಕತೆಯಿಲ್ಲ ಎಂದು ಗೃಹ ಸಚಿವ ಬಸವರಾಜ‌ ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

Published: 31st October 2019 11:26 AM  |   Last Updated: 31st October 2019 11:26 AM   |  A+A-


basavaraja bommai

ಬಸವರಾಜ ಬೊಮ್ಮಾಯಿ

Posted By : Shilpa D
Source : UNI

ಬೆಂಗಳೂರು: ಹಲವು ವಿವಾದಗಳನ್ನು ಸೃಷ್ಟಿಸಿ ರಾಜನಾಗಿದ್ದ ಟಿಪ್ಪು ಸುಲ್ತಾನ್ ಬಗೆಗಿನ ಇತಿಹಾಸವನ್ನು ಮಕ್ಕಳು ಓದುವ ಅವಶ್ಯಕತೆಯಿಲ್ಲ ಎಂದು ಗೃಹ ಸಚಿವ ಬಸವರಾಜ‌ ಬೊಮ್ಮಾಯಿ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿವಾದ ಸೃಷ್ಟಿಸಿ ಇತಿಹಾಸ ಸೇರಿದ ಟಿಪ್ಪು ಬಗ್ಗೆ ಮಕ್ಕಳು ಇತಿಹಾಸವನ್ನು ಓದುವ ಅಗತ್ಯವಿಲ್ಲದೇ ಇರುವುದರಿಂದ ಶಾಲಾ ಪಠ್ಯದಿಂದ ಟಿಪ್ಪುವನ್ನು ಕೈಬಿಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

ಟಿಪ್ಪು ವಿವಾದವನ್ನು ‌ಉಪಚುನಾವಣೆಯ ‌ಅಸ್ತ್ರವಾಗಿ ಬಳಸಿಕೊಳ್ಳುವ ಪ್ರಶ್ನೆ ಇಲ್ಲ. ಪ್ರವಾಹ ಸಂತ್ರಸ್ತರಿಗೆ ಸೂಕ್ತ ನೆರವು ನೀಡದಿರುವ ರಾಜ್ಯ ಸರ್ಕಾರ ಸತ್ತಿದೆ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಹತಾಶೆಯಿಂದ ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರವಾಹ ಸಂತ್ರಸ್ತರಿಗೆ ಎಲ್ಲ ನೆರವು‌ ನೀಡುವ ಪ್ರಾಮಾಣಿಕ ಪ್ರಯತ್ನ ಮಾಡಿದೆ ಎಂದು ಹೇಳಿದ್ದಾರೆ.

ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಸುಳ್ಳು‌ಆರೋಪಗಳನ್ನು ಮಾಡುವುದನ್ನು‌ ನಿಲ್ಲಿಸಬೇಕು ಎಂದು ಹೇಳಿದ ಬೊಮ್ಮಾಯಿ, ನೆರೆ ಪೀಡಿತ ಪ್ರದೇಶಗಳಲ್ಲಿ ಸಚಿವರು ಭೇಟಿ‌ ನೀಡಿ ಪರಿಸ್ಥಿತಿ ಖುದ್ದು ಅವಲೋಕಿಸುತ್ತಿದ್ದಾರೆ. ರಾಜ್ಯ ಸರ್ಕಾರ ಸಂತ್ರಸ್ತರಿಗೆ ತುರ್ತು ನೆರವು ಕಲ್ಪಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡಿದೆ ಎಂದರು.

Stay up to date on all the latest ರಾಜ್ಯ news with The Kannadaprabha App. Download now
Poll
Priyanka gandhi

ಪ್ರಿಯಾಂಕಾ ಗಾಂಧಿಯನ್ನು ಉತ್ತರ ಪ್ರದೇಶದಲ್ಲಿ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಕಾಂಗ್ರೆಸ್ ಘೋಷಿಸಬೇಕೇ?


Result
ಹೌದು
ಬೇಡ
ಗೊತ್ತಿಲ್ಲ
flipboard facebook twitter whatsapp