ಮೈಸೂರು: ವರುಣಾ ನಾಲೆಯಲ್ಲಿ ಮೂರು ಮೃತ ದೇಹಗಳು ಪತ್ತೆ

ಮೈಸೂರು ನಗರ ಹೊರ ವಲಯದ ವರುಣಾ ನಾಲೆಯಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಯುವತಿಯ ಮೃತ ದೇಹಗಳು ಪತ್ತೆಯಾಗಿದೆ.

Published: 03rd September 2019 01:42 PM  |   Last Updated: 03rd September 2019 01:42 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Shilpa D
Source : UNI

ಮೈಸೂರು: ಮೈಸೂರು ನಗರ ಹೊರ ವಲಯದ ವರುಣಾ ನಾಲೆಯಲ್ಲಿ ಇಬ್ಬರು ಪುರುಷರು ಹಾಗೂ ಓರ್ವ ಯುವತಿಯ ಮೃತ ದೇಹಗಳು ಪತ್ತೆಯಾಗಿದೆ.

ಸುಮಾರು 55 ವರ್ಷದ, 22 ವರ್ಷದ ಇಬ್ಬರು ಪುರುಷರ ಹಾಗೂ ಸುಮಾರು 20 ವರ್ಷದ ಯುವತಿಯ ಮೃತ ದೇಹಗಳು ನಾಲೆಯಲ್ಲಿ ತೆಲಿಕೊಂಡು ಬಂದಿವೆ ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ಸೋಮವಾರ ಸಂಜೆ ನಾಲೆಯಲ್ಲಿ ಮೃತದೇಹಗಳು ತೇಲುತ್ತಿರುವುದನ್ನು ಕಂಡಕೂಡಲೇ ಸ್ಥಳೀಯ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತ ದೇಹಗಳ ಮರಣೋತ್ತರ ಪರೀಕ್ಷೆಗಾಗಿ ಕೆ.ಆರ್. ಆಸ್ಪತ್ರೆಗೆ ಸ್ಥಳಾಂತರಿಸಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp