ಹೈಕೋರ್ಟ್‌
ಹೈಕೋರ್ಟ್‌

ಖುಲಾಸೆ ಪ್ರಕರಣಗಳಲ್ಲಿ 2,245 ಅಧಿಕಾರಿಗಳ ವಿರುದ್ಧ ಕ್ರಮ: ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮಾಹಿತಿ

2015 ರಿಂದ 2019 ರ ಮಾರ್ಚ್ ವರೆಗೆ ವಿವಿಧ ಪ್ರಕರಣಗಳಲ್ಲಿ 1,73,366 ಖುಲಾಸೆ ಪ್ರಕರಣಗಳನ್ನು ಪರಿಶೀಲಿಸಿದ ನಂತರ 2,245 ತನಿಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. 

ಬೆಂಗಳೂರು: 2015 ರಿಂದ 2019 ರ ಮಾರ್ಚ್ ವರೆಗೆ ವಿವಿಧ ಪ್ರಕರಣಗಳಲ್ಲಿ 1,73,366 ಖುಲಾಸೆ ಪ್ರಕರಣಗಳನ್ನು ಪರಿಶೀಲಿಸಿದ ನಂತರ 2,245 ತನಿಖಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಶುಕ್ರವಾರ ತಿಳಿಸಿದೆ. ಈ ಅಂಕಿಅಂಶಗಳ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ವಿಭಾಗೀಯ ಪೀಠದ ಮುಂದೆ ಸಲ್ಲಿಸಲಾಗಿದ್ದು, ಸುಪ್ರೀಂಕೋರ್ಟ್‌ನ ನಿರ್ದೇಶನಗಳನ್ನು ಜಾರಿಗೆ ತರಲು ಕೋರಿ ವಕೀಲ ಎಸ್ ಉಮಪತಿ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ವೇಳೆ ಸರ್ಕಾರ ಈ ಮಾಹಿತಿ ನೀಡಿದೆ.

ರಾಜ್ಯದಲ್ಲಿ ಸರ್ಕಾರದ ಆದೇಶದಂತೆ  ಮೂರು ಹಂತದ ಖುಲಾಸೆ ಪರಿಶೀಲನಾ ಸಮಿತಿಗಳುಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅದು ವಿವರಿಸಿದೆ. ವಿಶೇಷ ಕಾಯಿದೆಗಳ ಅಡಿಯಲ್ಲಿರುವ ಎಲ್ಲಾ ಖುಲಾಸೆ ಪ್ರಕರಣಗಳ ಪರಿಶೀಲನೆಯನ್ನು ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್  ರಾಜ್ಯಕ್ಕೆ ನಿರ್ದೇಶನ ನೀಡಿತ್ತು, ಇದರಲ್ಲಿ ವಿಚಾರಣೆ ಗೆ ಸಂಬಂಧಿಸಿದಂತೆ ಸ್ಪಷ್ಟವಾದ ಲೋಪಗಳನ್ನು ಗಮನಿಸಲಾಗಿದೆ.

ರಾಜ್ಯದ ಆದೇಶದ ಪ್ರಕಾರ, ಮೂರು ಹಂತದ ಸಮಿತಿಗಳಿಗೆ ಸಂಬಂಧಿಸಿದಂತೆ, ಡೈರೆಕ್ಟರ್ ಜನರಲ್ ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಅವರು ಎಲ್ಲಾ ಘಟಕ ಅಧಿಕಾರಿಗಳಿಗೆ 2014 ರ ನವೆಂಬರ್ 12 ರ ಜ್ಞಾಪಕ ಪತ್ರವನ್ನು ನೀಡುವ ಮೂಲಕ ಸಂವಹನ ನಡೆಸಲಾಗಿದೆ.ಅಲ್ಲದೆ ಫೆಬ್ರವರಿ 5, 2015ರಂದು ಸಹ ತಮ್ಮ ಘಟಕಗಳಲ್ಲಿ ಸಮಿತಿಗಳನ್ನು ರಚಿಸಲು ವಿವರವಾದ ಜ್ಞಾಪಕ ಪತ್ರವನ್ನು ಹೊರಡಿಸಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

Related Stories

No stories found.

Advertisement

X
Kannada Prabha
www.kannadaprabha.com