ಐಎಂಎ ವಂಚನೆ: ಪ್ರಭಾವಿ ರಾಜಕಾರಣಿ, ಅಧಿಕಾರಿಗಳಿಂದ ಸಾಕ್ಷ್ಯ ನಾಶಕ್ಕೆ ಯತ್ನ-ಮನ್ಸೂರ್ ಖಾನ್

ಪ್ರಭಾವಿ ರಾಜಕಾರಣಿ ಹಾಗೂ ಐಎಎಸ್ ಅಧಿಕಾರಿಗಳು ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಟ್ಟಿದ್ದ ದಾಖಲೆಗಳನ್ನು ನಾಶಪಡಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದ ರೂವಾರಿ ಮೊಹ್ಮದ್ ಮನ್ಸೂರ್ ಖಾನ್ ಸಿಬಿಐ ವಿಚಾರಣೆ ವೇಳೆ ಗಂಭೀರ ಆರೋಪ ಮಾಡಿದ್ದಾರೆ
ಮನ್ಸೂರ್ ಖಾನ್
ಮನ್ಸೂರ್ ಖಾನ್

ಬೆಂಗಳೂರು:  ಪ್ರಭಾವಿ ರಾಜಕಾರಣಿ ಹಾಗೂ ಐಎಎಸ್ ಅಧಿಕಾರಿಗಳು ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಟ್ಟಿದ್ದ ದಾಖಲೆಗಳನ್ನು ನಾಶಪಡಿಸುವ ಮೂಲಕ ಸಾಕ್ಷ್ಯ ನಾಶಕ್ಕೆ ಯತ್ನಿಸಿದ್ದಾರೆ ಎಂದು ಐಎಂಎ (ಐ ಮಾನಿಟರಿ ಅಡ್ವೈಸರಿ) ಬಹುಕೋಟಿ ವಂಚನೆ ಪ್ರಕರಣದ ರೂವಾರಿ ಮೊಹ್ಮದ್ ಮನ್ಸೂರ್ ಖಾನ್ ಸಿಬಿಐ ವಿಚಾರಣೆ ವೇಳೆ ಗಂಭೀರ ಆರೋಪ ಮಾಡಿದ್ದಾರೆ

ತಾನು ಪ್ರಭಾವಿ ರಾಜಕಾರಣಿ ಹಾಗೂ ಐಎಎಸ್ ಅಧಿಕಾರಿಗಳಿಗೆ ಯಾವಾಗ, ಎಷ್ಟು ಲಂಚ ನೀಡಿದ್ದೇನೆ ಎಂಬುದರ ಕುರಿತು ವಿಡಿಯೋ ಸಹಿತ ಹಲವು ದಾಖಲೆಗಳನ್ನು ಕಂಪ್ಯೂಟರ್ ನಲ್ಲಿ ಸಂಗ್ರಹಿಸಿಟಿದ್ದೆ. ಆದರೆ, ಆ ದಾಖಲೆಗಳನ್ನೀಗ ವ್ಯವಸ್ಥಿತವಾಗಿ ನಾಶ ಮಾಡಲಾಗಿದೆ ಎಂದು ಮನ್ಸೂರ್ ಖಾನ್ ಸಿಬಿಐ ವಿಚಾರಣೆ ವೇಳೆ ಆರೋಪಿಸಿದ್ದಾರೆ 

ಈ ಹಿನ್ನೆಲೆಯಲ್ಲಿ ಸಿಬಿಐ ಅಧಿಕಾರಿಗಳು ಸತ್ಯಾಂಶವನ್ನು ಕಲೆ ಹಾಕಲು 12 ಜನರ ಮಲ್ಟಿ ಡಿಸಿಪ್ಲೇನರಿ ತನಿಖಾ ತಂಡ  ರಚಿಸಿದ್ದು, ಇದರಲ್ಲಿ ಚಾರ್ಟರ್ಡ್ ಅಕೌಂಟೆಂಟ್, ವಿಧಿ ವಿಜ್ಞಾನ ಅಧಿಕಾರಿ, ಕಂಪ್ಯೂಟರ್ ವಿಧಿ ವಿಜ್ಞಾನ ತಜ್ಞರು ಹಾಗೂ ಬ್ಯಾಂಕಿಂಗ್ ಸಂಬಂಧಿಸಿದ ಚಾಣಾಕ್ಷ ಅಧಿಕಾರಿಗಳು ಇದ್ದಾರೆ. 

ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಮನ್ಸೂರ್ ಖಾನ್ ಸೇರಿ ಹದಿನೈದು ಆರೋಪಿಗಳು ಮತ್ತು ಐದು ಕಂಪನಿಗಳ ವಿರುದ್ಧ ಸಿಬಿಐ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com