ಅ.17ರಿಂದ ಹಾಸನಾಂಬೆ ದೇವರ ದರುಶನ ಭಾಗ್ಯ 

ಇಲ್ಲಿನ ಪ್ರಖ್ಯಾತ ಹಾಸನಾಂಬ ದೇವಸ್ಥಾನದ ಬಾಗಿಲು ಅಕ್ಟೋಬರ್ 17ರಿಂದ 13 ದಿನಗಳ ಕಾಲ ತೆರೆಯಲಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ. 
 

Published: 20th September 2019 08:34 AM  |   Last Updated: 20th September 2019 08:34 AM   |  A+A-


Hasanamba

ಹಾಸನಾಂಬ

Posted By : Sumana Upadhyaya
Source : The New Indian Express

ಹಾಸನ: ಇಲ್ಲಿನ ಪ್ರಖ್ಯಾತ ಹಾಸನಾಂಬ ದೇವಸ್ಥಾನದ ಬಾಗಿಲು ಅಕ್ಟೋಬರ್ 17ರಿಂದ 13 ದಿನಗಳ ಕಾಲ ತೆರೆಯಲಿದೆ ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ. 


ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು, ಭಕ್ತಾದಿಗಳಿಗೆ ಸೌಕರ್ಯ ಹೆಚ್ಚಿಸಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಲಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದ್ದು ವಿಕಲಾಂಗರಿಗೆ ಮತ್ತು ಹಿರಿಯ ನಾಗರಿಕರಿಗೆ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಬಡವರ ಊಟಿ ಎಂದೇ ಕರೆಯಲಾಗುವ ಹಾಸಕ್ಕೆ, ಆ ಹೆಸರು ಬಂದದ್ದೇ ಹಾಸನಾಂಬೆ ದೇವಾಲಯದಿಂದ. ಈ ಐತಿಹಾಸಿಕ ದೇವಾಲಯದಲ್ಲಿ ಒರ್ಷಕ್ಕೆ ಒಮ್ಮೆ ಮಾತ್ರ ದೇವಿಯ ದರ್ಶನಕ್ಕೆ ಬಾಗಿಲು ತೆರೆಯಲಾಗುತ್ತದೆ. 

Stay up to date on all the latest ರಾಜ್ಯ news with The Kannadaprabha App. Download now
facebook twitter whatsapp