ಬೆಟ್ಟದಿಂದ ಧರೆಗುರುಳಿದ ಬೃಹದಾಕಾರದ ಬಂಡೆ: ಅಂಗನವಾಡಿ, ದೇಗುಲದ ಉಗ್ರಾಣ ಜಖಂ, ತಪ್ಪಿದ ಅನಾಹುತ

ಗ್ರಾಮದ ಸಮೀಪದಲ್ಲಿದ್ದ ಬೆಟ್ಟದಿಂದ ದೊಡ್ಡ ಗಾತ್ರದ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ ಅಂಗನವಾಡಿ ಕಟ್ಟಡ ಹಾಗೂ ದೇವಾಲಯ ಆವರಣದ ಉಗ್ರಾಣ ಕಟ್ಟಡಕ್ಕೆ ಹಾನಿಯಾಗಿರುವ ಘಟನೆ ಗದಗ ಜಿಲ್ಲೆ ಬೊಮ್ಮೆಸಾಗರದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.
ಬೆಟ್ಟದಿಂದ ಧರೆಗುರುಳಿದ ಬೃಹದಾಕಾರದ ಬಂಡೆ
ಬೆಟ್ಟದಿಂದ ಧರೆಗುರುಳಿದ ಬೃಹದಾಕಾರದ ಬಂಡೆ

ಗದಗ: ಗ್ರಾಮದ ಸಮೀಪದಲ್ಲಿದ್ದ ಬೆಟ್ಟದಿಂದ ದೊಡ್ಡ ಗಾತ್ರದ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ ಅಂಗನವಾಡಿ ಕಟ್ಟಡ ಹಾಗೂ ದೇವಾಲಯ ಆವರಣದ ಉಗ್ರಾಣ ಕಟ್ಟಡಕ್ಕೆ ಹಾನಿಯಾಗಿರುವ ಘಟನೆ ಗದಗ ಜಿಲ್ಲೆ ಬೊಮ್ಮೆಸಾಗರದಲ್ಲಿ ನಡೆದಿದೆ. ಘಟನೆಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ.

ಗಜೇಂದ್ರಗಡ ತಾಲೂಕು ಬೊಮ್ಮಸಾಗರದಲ್ಲಿ ನಡೆದ ಘಟನೆಯಿಂದ ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಇಂದಾಗಿ ಗ್ರಾಮಕ್ಕೆ ಹೊಂದಿಕೊಂಡಂತಿರುವ ಗುಡ್ಡದಿಂದ ಬಂಡೆಗಳು ಉರುಳಿ ಬರುತ್ತಿವೆ. ಅದರಂತೆ ಗುರುವಾರ ಸಂಜೆ 4.30ರ ಸುಮಾರು ಬಂಡೆಯೊಂದು ಉರುಳಿ ಬಿದ್ದು ಅಂಗನವಾಡಿ ಕಟ್ಟಡ ಹಾಗೂ ದುರ್ಗಾದೇವಿ ದೇವಾಲಯದ ಉಗ್ರಾಣ ಹಾನಿಯಾಗಿದೆ. ಆದರೆ ಆ ಸಮಯ ಕಟ್ಟಡದಲ್ಲಿ ಯಾರೂ ಇರದ ಕಾರಣ ಪ್ರಾಣಾಪಾಯ ಆಗುವುದು ತಪ್ಪಿದೆ.

 ಬೃಹತ್ ಬಂಡೆಯು ಸುಮಾರು 15 X 20 ಅಡಿ ಗಾತ್ರದಲ್ಲಿತ್ತು. ಬಂಡೆ ಬೀಳುತ್ತಿರುವುದನ್ನು ನೋಡಿದ ಹುಡುಗ ಶಬ್ಬೀರ್ ಬಾದಾಮಿ, "ನಾನು ದೇವಾಲಯದ ಬಳಿಯ ಹೊಲವೊಂದರಲ್ಲಿ ಆಡುತ್ತಿದ್ದೆ. ದೊಡ್ಡ ಶಬ್ದ ಕೇಳಿದೆ ಮತ್ತು ದೊಡ್ಡ ಗಾತ್ರದ ಕಲ್ಲುಬಂಡೆ  ಬೆಟ್ಟದಿಂದ ಉರುಳುತ್ತಿರುವುದನ್ನು ನಾನು ನೋಡಿ ಜೋರಾಗಿ ಕಿರುಚಿದೆ. ಬಂಡೆಯು ಅಂಗನವಾಡಿ ಮೇಲೆ ಬಿದ್ದಿದೆ.ಅಲ್ಲದೆ ದೇವಾಲಯ ಕಡೆಯಲ್ಲಿದ್ದ ಉಗ್ರಾಣದ ಕೊಠಡಿ ಮೇಲೆ ಉರುಳಿದೆ. ಆ ವೇಳೆ ದೇವಾಲಯದ ಹೊರಗಿದ್ದವರಿಗೆ ಗಾಯವಾಗಿದೆ, ಇಲ್ಲವೇ ಕೆಲವರು ಸತ್ತರೆಂದು ಣಾನು ಭಾವಿಸಿದೆ. ಆದರೆ ಅವರೆಲ್ಲರೂ ಅದೃಷ್ಟವಂತರು ಮತ್ತು ದುರ್ಗಾ ದೇವತೆ ಎಲ್ಲರನ್ನೂ ಉಳಿಸಿದ್ದಾರೆ ”.ಎಂದಿದ್ದಾನೆ.

ಗಜೇಂದ್ರಗಡ  ತಹಶೀಲ್ದಾರ್ ಗುರುಸಿದ್ದಯ್ಯ  ಹಿರೆಮಥ್, “ಅತಿಯಾದ ಮಳೆಯಿಂದಾಗಿ, ಬಂಡೆಯ ಕೆಳಗಿರುವ ಮಣ್ಣು ಸವಕಲಾಗಿದೆ.ದ್ದರಿಂದ ಅದು ಗುಡ್ಡದಿಂದ ಬೇರ್ಪಟ್ಟಿದೆ. ಘಟನೆ ಕುರಿತಂತೆ ಕೂಲಂಕುಷ ಪರಿಶೀಲನೆಗೆ ಆದೇಶಿಸಿದ್ದೇವೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com