ಖಾಸಗಿ ಕ್ಲಿನಿಕ್ ನಡೆಸುವ ಸರ್ಕಾರಿ ವೈದ್ಯರಿಗೆ ಆರೋಗ್ಯ ಸಚಿವ ಶ್ರೀರಾಮಲು ವಾರ್ನಿಂಗ್

ಸರ್ಕಾರಿ ವೃತ್ತಿಯಲ್ಲಿರುವ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಆರೋಗ್ಯ ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ
ಶ್ರೀರಾಮುಲು
ಶ್ರೀರಾಮುಲು

ಚಾಮರಾಜನಗರ: ಸರ್ಕಾರಿ ವೃತ್ತಿಯಲ್ಲಿರುವ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿದ್ದರೆ ಅಂತವರ ಮೇಲೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದೆಂದು ಆರೋಗ್ಯ ಸಚಿವ ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ. ಅವರು ಚಾಮರಾಜನಗರ ಜಿಲ್ಲಾಸ್ಪತ್ರೆ ವಾಸ್ತವ್ಯದ ನಂತರ, ಮುಂಜಾನೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಔಷಧ ಕೊರತೆ ಇಲ್ಲದಿದ್ದರೂ ಕೆಲವೆಡೆ ಕೃತಕ ಅಭಾವ ಸೃಷ್ಠಿ ಮಾಡಲಾಗುತ್ತಿದೆ. ಇಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದರ ಜೊತೆಗೆ ಖಾಸಗಿ ಕ್ಲಿನಿಕ್‍ನಲ್ಲಿ ಸರ್ಕಾರ ವೈದ್ಯರು ಕೆಲಸ ನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಅಂತಹವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎಲ್ಲಾ ಜಿಲ್ಲೆಯ ಡಿಎಚ್‍ಓಗಳ ಸಭೆ ಕರೆದು ವರದಿ ಪಡೆಯಲಾಗುವುದು ಎಂದು ಹೇಳಿದ್ದಾರೆ. ಮೆಡಿಕಲ್ ಎಜುಕೇಷನ್ ಬೋರ್ಡ್ ಬೇರೆ, ಆರೋಗ್ಯ ಇಲಾಖೆ ಬೇರೆ ಎಂದು ಕೆಲಸ ಮಾಡಬೇಡಿ. ಎಲ್ಲವೂ ನಿಯಂತ್ರಣ ನಮ್ಮಲ್ಲೆ ಇದೆ. ಈಗಾಗಲೇ ಬೇರೆ ಬೇರೆ ರಾಜ್ಯದಲ್ಲಿ ಖಾಸಗೀ ಕ್ಲಿನಿಕ್ ನಡೆಸುವವರ ವಿರುದ್ಧ ಕ್ರಮದ ಆದೇಶ ಜಾರಿ ತಂದಿದ್ದು ಶೀಘ್ರದಲ್ಲೆ ರಾಜ್ಯದಲ್ಲೂ ಆದೇಶ ಮಾಡಲಾಗುವುದು. ಅಂತಹ ವೈದ್ಯರು ನಮಗೆ ಅಗತ್ಯವಿಲ್ಲ. ಸ್ವಯಂ ನಿವೃತ್ತಿ ಕೊಟ್ಟು ಮನೆಗೆ ಹೋಗಲಿ. ಇಲ್ಲ ರಾಜೀನಾಮೆ ಕೊಡಲಿ ಎಂದು ತಿಳಿಸಿದ್ದಾರೆ.

ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನೂ ಕೆಲಸ ಮಾಡಲು ವೈದ್ಯರು ಸಿದ್ದರಿದ್ದಾರೆ. ಹಾಗೊಂದು ವೇಳೆ ಇಂತಹ ಚಟುವಟಿಕೆ ಮಾಡಿದರೆ ನಾವು ತೆಗೆದುಕೊಳ್ಳುವ ಕ್ರಮ ಹೇಗಿರುತ್ತದೆಯೆಂದರೆ ಅವರ ಕುಟುಂಬದವರೂ ಸರ್ಕಾರಿ ಕೆಲಸ ಬೇಕು ಎನ್ನಬಾರದು ಆ ತರಹ ಕ್ರಮವಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com