ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 110 ಕ್ಕೆ ಏರಿಕೆ: ಪ್ರಕರಣಗಳ ವಿವರ ಹೀಗಿದೆ

ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, 24 ಗಂಟೆಗಳಲ್ಲಿ 9 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 110 ಕ್ಕೆ ಏರಿಕೆಯಾಗಿದೆ. 
ಕೊರೋನಾ
ಕೊರೋನಾ

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಮಹಾಮಾರಿಯ ಆರ್ಭಟ ಮುಂದುವರೆದಿದ್ದು, 24 ಗಂಟೆಗಳಲ್ಲಿ 9 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 110 ಕ್ಕೆ ಏರಿಕೆಯಾಗಿದೆ. 

110 ರ ಪೈಕಿ 9 ಜನರು ಗುಣಮುಖರಾಗಿದ್ದು, 3 ಜನರು ಸಾವನ್ನಪ್ಪಿದ್ದಾರೆ. ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ ಚಿಕಿತ್ಸೆ ಪಡೆಯುತ್ತಿರುವ ಒಟ್ಟಾರೆ 98 ಮಂದಿಗಳ ಪೈಕಿ ಓರ್ವ ಗರ್ಭಿಣಿ ಸೇರಿ 95 ಜನರು ಐಸೋಲೇಷನ್ ವಾರ್ಡ್ ಗಳಲ್ಲಿದ್ದರೆ, ಮೂವರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಹೊಸದಾಗಿ ಪತ್ತೆಯಾಗಿರುವ 9 ಪ್ರಕರಣಗಳ ಪೈಕಿ ನಾಲ್ವರು ಬೆಂಗಳೂರಿನ ನಿವಾಸಿಗಳಾಗಿದ್ದು ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ, ಮೈಸೂರಿನ ಇಬ್ಬರು ನಿವಾಸಿಗಳು ಹಾಗೂ ಇಬ್ಬರು ನಂಜನಗೂಡಿನ ನಿವಾಸಿಗಳು ಮೈಸೂರಿನಲ್ಲಿ, ದುಬೈ ಪ್ರಯಾಣ ಹಿನ್ನೆಲೆ ಹೊಂದಿರುವ ದಕ್ಷಿಣ ಕನ್ನಡದ ಓರ್ವ ವ್ಯಕ್ತಿ ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಮತ್ತೋರ್ವ ಕೇರಳದ ಮೂಲದ ವ್ಯಕ್ತಿ ಜರ್ಮನಿಯಿಂದ ಅಬುಧಾಬಿಯ ಮೂಲಕ 21.03-2020 ರಂದು ಬೆಂಗಳೂರಿಗೆ ಆಗಮಿಸಿದ್ದು, ಆತನಿಗೆ ಬೆಂಗಳೂರಿನಲ್ಲೇ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com