ಕೊರೋನಾ ವೈರಸ್: ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ

ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ.. ಧರ್ಮವನ್ನು ಪಕ್ಕಕ್ಕಿಟ್ಟು ಪರೀಕ್ಷೆಗೆ ಒಳಗಾಗಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ.. ಧರ್ಮವನ್ನು ಪಕ್ಕಕ್ಕಿಟ್ಟು ಪರೀಕ್ಷೆಗೆ ಒಳಗಾಗಿ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು, 'ದೆಹಲಿಯ ನಿಜಾಮುದ್ದೀನ್ ಧಾರ್ಮಿಕ ಸಭೆಯಲ್ಲಿ  ಭಾಗವಹಿಸಿದವರೆಲ್ಲರೂ ಕಡ್ಡಾಯವಾಗಿ ಸ್ವಯಂಪ್ರೇರಿತರಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು. ಜೀವಕ್ಕಿಂತ ಯಾವ ಧರ್ಮವೂ ದೊಡ್ಡದಲ್ಲ. ತಪಾಸಣೆ ಮಾಡಲು ಬಂದ  ವೈದ್ಯಕೀಯ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುವುದು, ತಿರುಗಿ ಬೀಳುವುದು ಖಂಡನೀಯ. ದೇಶದ ಸ್ವಾಸ್ಥ್ಯ ಮತ್ತು ಸಂವಿಧಾನಕ್ಕಿಂತ ಯಾರೂ ದೊಡ್ಡವರಲ್ಲ ಎಂದು ಹೇಳಿದ್ದಾರೆ. 

ಬೆಂಗಳೂರಿನ ಹೆಗಡೆ‌ನಗರದ ಬಳಿ ಬರುವ ಸಾಧಿಕ್‌ನಗರದಲ್ಲಿ ಆಶಾ ಕಾರ್ಯಕರ್ತೆಯರು ತಪಾಸಣೆ ಮಾಡುವ ವೇಳೆ‌ ಯುವಕರು ಗುಂಪಾಗಿ ಸೇರಿ ಅಸಭ್ಯವಾಗಿ ವರ್ತಿಸಿ ಹಲ್ಲೆ ಮಾಡಿದ್ದು, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ರಾಷ್ಟ್ರದ ಹಿತಾಸಕ್ತಿ ವಿರುದ್ಧ ಯಾರೂ ಧ್ವನಿ  ಎತ್ತಬಾರದು. ಅತಿರೇಕದ ವರ್ತನೆಗಳಿಗೆ ಖಂಡಿತಾ ನನ್ನ ಬೆಂಬಲವಿಲ್ಲ. ಇದು ಜಾತಿ-ಧರ್ಮಗಳ ಪ್ರಶ್ನೆಯಲ್ಲ. ರಾಷ್ಟ್ರದ ಭವಿಷ್ಯದ ಪ್ರಶ್ನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com