ಬೆಂಗಳೂರು: ಕೊರೋನಾ ವೈರಸ್ ಹಾವಳಿಯಿಂದ ಎಲ್ಲಾ ಕ್ಷೇತ್ರಗಳಿಗೂ ಆರ್ಥಿಕ ಬಿಸಿ ತಟ್ಟಿದೆ, ರೈತರು ಕೂಡ ಇದಕ್ಕೆ ಹೊರತಲ್ಲ, ಆದರೆ ಅರಶಿನ ಬೆಳೆಯುವ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕೊರೋನಾ ವೈರಸ್ ಸೋಂಕಿನ ವಿರುದ್ಧ ಹೋರಾಡಲು ದೇಹದಲ್ಲಿ ರೋಗನಿರೋಧಕ ಶಕ್ತಿ ವೃದ್ಧಿಸಲು, ರೋಗಾಣು ತಡೆಗಟ್ಟುವ ಗುಣ ಹಸಿ ಅರಶಿನದಲ್ಲಿದೆ ಎಂಬ ಸುದ್ದಿ ಸಾಕಷ್ಟು ಹರಿದಾಡುತ್ತಿದೆ. ಇದರಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಅರಶಿನಕ್ಕೆ ಬೇಡಿಕೆ ಹೆಚ್ಚಿರುವುದೇ ಇದನ್ನು ಬೆಳೆಯುವ ರೈತರ ಪಾಲಿಗೆ ವರದಾನವಾಗಿದೆ.ಔಷಧ ಕಂಪೆನಿಗಳಿಂದಲೂ ಅರಶಿನಕ್ಕೆ ಬೇಡಿಕೆ ಬರುತ್ತಿವೆಯಂತೆ.
ಆಂಧ್ರಪ್ರದೇಶ ಸರ್ಕಾರ ಚಿಂತಪಳ್ಳಿಯಲ್ಲಿ ರೈತರೊಂದಿಗೆ ಒಪ್ಪಂದ ಮಾಡಿಕೊಂಡು ಜೈವಿಕವಾಗಿ ಅರಶಿನ ಬೆಳೆಸಿ ಔಷಧ ತಯಾರಿಕಾ ಉದ್ಯಮಗಳಿಗೆ ಪೂರೈಸುವಂತೆ ಕೇಳಿಕೊಂಡಿದೆ. ಕರ್ನಾಟಕದಲ್ಲಿ ಇಂತಹ ಕ್ರಮಗಳೇನಾದರೂ ಆಗಿವೆಯೇ ಎಂದು ಕೃಷಿ ಇಲಾಖೆ ಆಯುಕ್ತ ಬ್ರಿಜೇಶ್ ಕುಮಾರ್ ದೀಕ್ಷಿತ್ ಅವರನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಮಾತನಾಡಿಸಿದಾಗ, ಆಂಧ್ರ ಪ್ರದೇಶ ಸರ್ಕಾರದ್ದು ಉತ್ತಮ ಯೋಜನೆ, ಕರ್ನಾಟಕ ಸರ್ಕಾರದಿಂದ ಇಂತಹ ಕ್ರಮಗಳ ಬಗ್ಗೆ ಇದುವರೆಗೆ ಯಾವುದೇ ಪ್ರಕಟಣೆ ಹೊರಬಂದಿಲ್ಲ, ಕರ್ನಾಟಕದ ಬೀದರ್, ಚಾಮರಾಜನಗರ, ಬಾಗಲಕೋಟೆ, ಮೈಸೂರು, ಕಲಬುರಗಿ ಮತ್ತು ಮಂಡ್ಯ ಜಿಲ್ಲೆಗಳಲ್ಲಿ ಹೆಚ್ಚಾಗಿ ಅರಶಿನ ಬೆಳೆಯುತ್ತಾರೆ. ಅರಶಿನಕ್ಕೆ ಬೇಡಿಕೆ ಹೆಚ್ಚಾದರೆ ಒಳ್ಳೆಯದೆ ಎಂದರು.
Advertisement