ಕನ್ನಡಪ್ರಭ.ಕಾಮ್ ವರದಿ ಫಲಶೃತಿ: ಲಾಕ್ ಡೌನ್ ಸಂತ್ರಸ್ಥರಿಗೆ ಸೇವಾ ಫೌಂಡೇಶನ್ ರಾಯಬಾಗ ವತಿಯಿಂದ ಆಹಾರ ವಿತರಣೆ‌

ಲಾಕ್ ಡೌನ್ ನಲ್ಲಿ‌ ಸಿಲುಕಿ ಹಾಕಿಕೊಂಡಿದ್ದ ಸುಮಾರು 30ಕ್ಕಿಂತ ಹೆಚ್ಚು ಜನರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕನ್ನಡಪ್ರಭ.ಕಾಮ್ ನಲ್ಲಿ ವರದಿ ಮಾಡಿದ ಬೆನ್ನಲ್ಲೆ ಸೇವಾ ಫೌಂಡೇಶನ್ ರಾಯಬಾಗ ವತಿಯಿಂದ ಆಹಾರ ವಿತರಣೆ‌ ಮಾಡಲಾಗಿದೆ.
ಲಾಕ್ ಡೌನ್ ಸಂತ್ರಸ್ಥರಿಗೆ ನೆರವು
ಲಾಕ್ ಡೌನ್ ಸಂತ್ರಸ್ಥರಿಗೆ ನೆರವು

ರಾಯಬಾಗ: ಲಾಕ್ ಡೌನ್ ನಲ್ಲಿ‌ ಸಿಲುಕಿ ಹಾಕಿಕೊಂಡಿದ್ದ ಸುಮಾರು 30ಕ್ಕಿಂತ ಹೆಚ್ಚು ಜನರು ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಕನ್ನಡಪ್ರಭ.ಕಾಮ್ ನಲ್ಲಿ ವರದಿ ಮಾಡಿದ ಬೆನ್ನಲ್ಲೆ ಸೇವಾ ಫೌಂಡೇಶನ್ ರಾಯಬಾಗ ವತಿಯಿಂದ ಆಹಾರ ವಿತರಣೆ‌ ಮಾಡಲಾಗಿದೆ.

ತಾಲೂಕಿನ ಬಾವನಸೌಂದತ್ತಿ ಗ್ರಾಮ ದೇವತೆಯಾಗಿರುವ ಶ್ರೀ ಸುಗಂಧಾ ದೇವಿ ಜಾತ್ರಾ ಮಹೋತ್ಸವಕ್ಕೆ ಮಹಾರಾಷ್ಟ್ರದಿಂದ ಜನ ವ್ಯಾಪಾರಕ್ಕೆ ಆಗಮಿಸಿದ್ದರು. ಲಾಕ್ ಡೌನ್ ನಲ್ಲಿ‌ ಸಿಲುಕಿ ಹಾಕಿಕೊಂಡವರು ಸುಮಾರು ೩೦ಕ್ಕಿಂತ ಹೆಚ್ಚು ಜನ ಈಗ ಇವರು ಊಟಕ್ಕೂ ಪರದಾಡುವ ಸ್ಥಿತಿ  ನಿರ್ಮಾಣವಾಗಿದೆ ಎಂದು ಕನ್ನಡಪ್ರಭ.ಕಾಮ್ ನಲ್ಲಿ ವರದಿ ಮಾಡಿದ ಬೆನ್ನಲ್ಲೆ ಸೇವಾ ಫೌಂಡೇಶನ್ ರಾಯಬಾಗ ವತಿಯಿಂದ ಆಹಾರ ವಿತರಣೆ‌ ಮಾಡಿತು.

ಹೌದು ರಾಯಬಾಗ ತಾಲೂಕಿನ ಬಾವನಸೌಂದತ್ತಿ ಗ್ರಾಮದಲ್ಲಿ ರಂಗ ಪಂಚಮಿ ಸಂದರ್ಭದಲ್ಲಿ ಸುಗಂಧಾ‌ದೇವಿ ಜಾತ್ರಾ‌ ಮಹೋತ್ಸವಕ್ಕೆ ಸುಮಾರು ಜನ ಆಗಮಿಸಿದ್ದು..‌ಜಾತ್ರಾ ಸಮಯದಲ್ಲಿಯೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರು ತಮ್ಮ ಗ್ರಾಮಗಳತ್ತ  ಮುಖ ಮಾಡಿದರು. ಆದರೆ ದೂರದ‌ ಗ್ರಾಮಗಳಿಂದ ಬಂದಂತಹ ಜನರು ಸಿಲುಕಿಕೊಂಡಿದ್ದರು.

ಜಾತ್ರೆಯಲ್ಲಿ ವ್ಯಾಪಾರಕ್ಕೆ ಎಂದು ಬಂದಂತಹ ಮಹಾರಾಷ್ಟ್ರದ ಜನ ಸುಮಾರು ಜನರಲ್ಲಿ ೩೦ ಕ್ಕಿಂತ ಹೆಚ್ಚು ಜನ ಇಂದು ಮುಗಿಯುತ್ತೋ ನಾಳೆ ಮುಗಿಯುತ್ತೋ ಎಂದು ಗ್ರಾಮದಲ್ಲಿ ಹಾಗೇ ಕಾಲ ಕಳೆಯುತ್ತ ಬಂದರೂ‌ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದರಿಂದ ಬೇಸತ್ತ ಜನರಿಗೆ  ತೀವ್ರ ತೊಂದರೆಯಾಯಿತು.. ಒಂದು ಹೊತ್ತು ಊಟಕ್ಕೂ ಪರದಾಡುವಂತೆ ಸ್ಥಿತಿ ನಿರ್ಮಾಣವಾಗಿದೆ. ಇದನ್ನರಿತ ನಿಮ್ಮ ಕನ್ನಡಪ್ರಭ ಆನ್ ಲೈನ್ ನಲ್ಲಿ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಬೆನ್ನಲೆ ಸುಮಾರು ಮೂವತ್ತಕ್ಕಿಂತ ಹೆಚ್ಚು ಜನರಿಗೆ ಆಹಾರ ಧಾನ್ಯ ವಿತರಿಸಿದರು 

ಇವರಿಗೆ 50 ಕೆಜಿ ಅಕ್ಕಿ 10 ಕೆಜಿ ಟೊಮೇಟೊ 10 ಕೆಜಿ ಉಳ್ಳಾಗಡ್ಡಿ, 5 ಕೆಜಿ ಬೆಳೆಕಾಳು ಎಲ್ಲರಿಗೂ ತರಕಾರಿಗಳು ಅವರಿಗೆ ಅಡುಗೆ ಸಾಮಗ್ರಿಯ ಜೊತೆಗೆ ಅವರ ಆರೋಗ್ಯ ದೃಷ್ಟಿಕೋನವನ್ನು ನೋಡಿ ಉಚಿತ ಔಷಧಿ ನೀಡಿದರು.

ಅಧ್ಯಕ್ಷ ಸತ್ಯಪ್ಪ ಬಾನೆ ಮಾತನಾಡಿ ನಮ್ಮೂರಾಗ ಇದ್ದ ಜನರಿಗೆ ನಮ್ಮ ಗಮನಕ್ಕೆ ಬರಲಿಲ್ಲ. ಕನ್ನಡಪ್ರಭ ಆನ್ ಲೈನ್ ನಲ್ಲಿ ವರದಿ ಕಂಡು ನಾವು ಅಲ್ಪ ಸಹಾಯ ಮಾಡಿದ್ದೇವೆ ಎಂದು ಹೇಳಿದರು. ಅಲ್ಲದೆ ಕನ್ನಡಪ್ರಭ ಆನ್ ಲೈನ್ ಸಿಬ್ಬಂದಿಗಳಿಗೆ ಅಭಿನಂದನೆ ಸಲ್ಲಿಸಿದರು. ನಿರಾಶ್ರಿತ  ಸಂತೋಷ ಮಾತನಾಡಿ, ನಾವು ಹಸಿವಿನಿಂದ ಬಳಲುತ್ತಿದ್ದೇವು. ಆದರೆ ಇಷ್ಟು ಆಹಾರ ನೀಡಿದ್ದು ನಮಗ ಬಾಳ ಸಂತೋಷವಾಗಿತಿ.. ತಾಲೂಕಾಡಳಿತ ನಮಗ ಹೋಗುವ ಪಾಸ್ ಕೊಟ್ಟರೆ ಅನುಕೂಲವಾಗುತ್ತದೆ ಎಂದರು. ಅಲ್ಲದೇ ಕನ್ನಡಪ್ರಭ ಆನ್ ಲೈನ್ ಗೆ ಧನ್ಯವಾದಗಳನ್ನು  ಸಲ್ಲಿಸಿದರು. ಈ ಸಂದರ್ಭದಲ್ಲಿ ಫೌಂಡೇಶನ್ ಉಪಾಧ್ಯಕ್ಷ ಶಿವರಾಜ್ ಡೋಣವಾಡಿ. ಕಾರ್ಯದರ್ಶಿ ಮಲ್ಲಪ್ಪ ಅಂಬಿ, ಹಿರಿಯ ಮಾರ್ಗದರ್ಶಕ ಅಲೋಕ್ ಚೌಗಲಾ, ಸದಸ್ಯರಾದ ರಾಯಪ್ಪ ಚೌಗಲಾ, ಸರ್ವ ಸದಸ್ಯರು ಹಾಗೂ ಸವದತ್ತಿ ಗ್ರಾಮದೇವತೆಯಾದ ಇದರ ಪೂಜಾರಿಗಳಾದ  ಸುನಿಲ್ ಗುರವ. ಗ್ರಾಮಸ್ಥರಾದ ವಿನೋದ್ ಪರಿಟ್. ಜಿಗನೋ ಪರಿಟ್. ಎಲ್ಲ ಯುವಕರು ಸರ್ವ ಸದಸ್ಯರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com