ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದ ತಬ್ಲೀಘಿಗಳ ವಿರುದ್ಧ ಎಫ್‌‌ಐಆರ್: ಬೊಮ್ಮಾಯಿ

ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದ ತಬ್ಲೀಘಿಗಳ ವಿರುದ್ಧ ಎಫ್‌‌ಐಆರ್ ದಾಖಲಿಸಲಾಗಿದೆ ಎಂದು ಗೃಹಸಚಿವ ಬಸವರಾಜ  ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ತಬ್ಲೀಘಿಗಳು
ತಬ್ಲೀಘಿಗಳು
Updated on

ಬೆಂಗಳೂರು: ದೆಹಲಿಯ ನಿಜಾಮುದ್ದೀನ್ ಜಮಾತ್ ಗೆ ಹೋಗಿ ಬಂದು ಮಾಹಿತಿ ಕೊಡದ ತಬ್ಲೀಘಿಗಳ ವಿರುದ್ಧ ಎಫ್‌‌ಐಆರ್ ದಾಖಲಿಸಲಾಗಿದೆ ಎಂದು ಗೃಹಸಚಿವ ಬಸವರಾಜ  ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮಾತ್‌ನಲ್ಲಿ ಭಾಗವಹಿಸಿದವರು‌ ದಯಮಾಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಗೃಹ ಸಚಿವರು ಮತ್ತೊಮ್ಮೆ ಮನವಿ ಮಾಡಿದ್ದಾರೆ.

ವಿಜಯಪುರದಲ್ಲಿ  ಒಂದೇ ಕುಟುಂಬದ 5 ಜನರಿಗೆ ಸೋಂಕು ಕಂಡು ಬಂದಿದೆ. ಅವರ ಕುಟುಂಬ ವರ್ಗ, ಅವರ ಪ್ರಾಥಮಿಕ, ದ್ವಿತೀಯ ಸಂಪರ್ಕದವರನ್ನು ತಪಾಸಣೆ ಮಾಡಲು ಹೊರಟಿದ್ದರು. ಆದರೆ ಸ್ಥಳೀಯರು ಅದಕ್ಕೆ ವಿರೋಧ ವ್ಯಕ್ತಪಡಿಸಿ ನಮ್ಮ ಜಿಲ್ಲಾಡಳಿತಕ್ಕೆ ತೊಂದರೆ ಕೊಟ್ಟಿದ್ದರು. ಬಳಿಕ‌ ಮೌಲ್ವಿಗಳ ಜತೆ  ಮುಖ್ಯಮಂತ್ರಿಗಳು ಮಾತನಾಡಿದ ಬಳಿಕ ಎಲ್ಲರೂ ತಪಾಸಣೆಗೆ ಒಪ್ಪಿದ್ದಾರೆ.

ಕರ್ನಾಟಕದಲ್ಲಿ ಕೊರೋನಾ ವೈರಸ್ ಅಬ್ಬರ ಮುಂದುವರೆದಿದ್ದು ಇಂದು ಮತ್ತೆ 15 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಮೂವರು ಮಕ್ಕಳು ಕೂಡ ಸೇರಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 247ಕ್ಕೇರಿಕೆಯಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com