
ಬೆಂಗಳೂರು: ಕೊರೋನಾ ಸೊಂಕಿನ ಭೀತಿಯ ನಡುವೆಯೂ ದೇಶದ ಉತ್ತರದ ಗಡಿಗಳಲ್ಲಿ ಕಾರ್ಯನಿರ್ವಹಿಸುವ ಸೇನಾಧಿಕಾರಿಗಳು ಹಾಗೂ ಯೋಧರನ್ನೊಳಗೊಂಡ 650 ಮಂದಿಯ ತಂಡ ಶುಕ್ರವಾರ ಪ್ರಯಾಣ ಬೆಳೆಸಿದೆ.
ಕೊರೊನಾ ಸೋಂಕು ಹರಡದಂತೆ ತಡೆಯಲು ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಯೋಧರ ತಂಡ ನಗರದ ಸಂಗೊಳ್ಳಿ ರಾಯಣ್ಣ ನಗರ ರೈಲು ನಿಲ್ದಾಣದಿಂದ ಜಮ್ಮುವಿಗೆ ಮಿಲಿಟರಿ ವಿಶೇಷ ರೈಲಿನಲ್ಲಿ ಪ್ರಯಾಣ ಬೆಳೆಸಿತು.
ಯೋಧರ ಪ್ರಯಾಣಕ್ಕಾಗಿ ಸಜ್ಜುಗೊಳಿಸಿರುವ ವಿಶೇಷ ಮಿಲಿಟರಿ ರೈಲು ಸೋಂಕುರಹಿತವಾಗಿರುವಂತೆ ನೋಡಿಕೊಳ್ಳಲು ಸಂಪೂರ್ಣ ರೈಲಿನ ಒಳಗೆ ಹಾಗೂ ಬೋಗಿಗಳ ಒಳಗೆ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಿಸಲಾಗಿದೆ. ಸೈನಿಕರಿಗೆ ಮಾಸ್ಕ್ ಹಾಗೂ ಕೈಗವಸುಗಳನ್ನು ಧರಿಸುವ ಮೂಲಕ ಮುನ್ನೆಚ್ಚರಿಕೆ ವಹಿಸಿದ್ದಾರೆ. ಯೋಧರ ಲಗೇಜುಗಳ ಮೂಲಕವೂ ಸೋಂಕು ಹಬ್ಬದಂತೆ ನಿಗಾ ವಹಿಸಲಾಗಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ತಿಳಿಸಿವೆ.
Advertisement