ಕೊರೋನಾ ಅಂಕಿ ಅಂಶ: ಸಿಎಂ, ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಇಲಾಖೆಯಿಂದ ತದ್ವಿರುದ್ಧ ಮಾಹಿತಿ

410, 401, 390, ಇದು ಕೊರೋನಾ ಬಗ್ಗೆ ಸರ್ಕಾರ ನೀಡಿದ ವಿಭಿನ್ನ ಹೇಳಿಕೆಗಳು, ಸಿಎಂ, ವೈದ್ಯಕೀಯ ಶಿಕ್ಷಣ  ಇಲಾಖೆ  ಮತ್ತು ಆರೋಗ್ಯ ಇಲಾಖೆ ನೀಡಿರುವ ವೈವಿಧ್ಯಮಯವಾದ ಅಂಕಿ ಅಂಶಗಳು. 
ಕೆ,ಸುಧಾಕರ್ ಮತ್ತು ಯಡಿಯೂರಪ್ಪ
ಕೆ,ಸುಧಾಕರ್ ಮತ್ತು ಯಡಿಯೂರಪ್ಪ

ಬೆಂಗಳೂರು: 410, 401, 390, ಇದು ಕೊರೋನಾ ಬಗ್ಗೆ ಸರ್ಕಾರ ನೀಡಿದ ವಿಭಿನ್ನ ಹೇಳಿಕೆಗಳು, ಸಿಎಂ, ವೈದ್ಯಕೀಯ ಶಿಕ್ಷಣ  ಇಲಾಖೆ  ಮತ್ತು ಆರೋಗ್ಯ ಇಲಾಖೆ ನೀಡಿರುವ ವೈವಿಧ್ಯಮಯವಾದ ಅಂಕಿ ಅಂಶಗಳು. 

ಭಾನುವಾರ ಮಧ್ಯಾಹ್ನ ತಮ್ಮನ್ನು ಭೇಟಿ ಮಾಡಿದ ಕಾಂಗ್ರೆಸ್ ನಿಯೋಗಕ್ಕೆ ಸಿಎಂ ಯಡಿಯೂರಪ್ಪ ಕೊರೋನಾ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ರಾಜ್ಯದಲ್ಲಿ 410 ಸೋಂಕಿತರು ಎಂದು ಹೇಳಿದ್ದಾರೆ.

ಶನಿವಾರ ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಬುಲೆಟಿನ್ ನಲ್ಲಿ 384 ಕೇಸ್ ಎಂದು ಹೇಳಿತ್ತು. ಮತ್ತೆ ರಾಜ್ಯ ಆರೋಗ್ಯ ಇಲಾಖೆಯ ದೈನಂದಿನ ಮಧ್ಯಾಹ್ನ ಬುಲೆಟಿನ್ ನಂತರ ಸಿಎಂ ಈ ಮಾಹಿತಿ ನೀಡಿದ್ದಾರೆ. ಇದಾದ ನಂತರ ವೈದ್ಯಕೀಯ ಸಚಿವ ಡಾ.ಕೆ ಸುಧಾಕರ್ ಭಾನುವಾರ ಸಂಜೆ ನೀಡಿದ್ದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ 401 ಕರೋನಾ ಪ್ರಕರಣಗಳು. 

401 ಸರಿಯಾದ ಅಂಕಿ ಅಂಶ, ಬಾಯ್ತಪ್ಪಿನಿಂದ ಸಿಎಂ 410 ಎಂದು ಹೇಳಿದ್ದಾರೆ ಎಂದು ಮುಖ್ಯಮಂತ್ರಿಳ ಕಚೇರಿ ಸ್ಪಷ್ಟ ಪಡಿಸಿದೆ, ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಆರು ಹೊಸ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 390 ಕೇಸ್, ಸಿಎಂ ಹೇಳಿದ್ದಕ್ಕಿಂತ 20 ಹಾಗೂ ಸುಧಾಕರ್ ಹೇಳಿದ್ದಕ್ಕಿಂತ 11 ಕೇಸ್ ಕಡಿಮೆ.

ಸುಧಾಕರ್ ಅವರು ವಿವಿಧ ಪ್ರಯೋಗಾಲಯಳಿಂದ ಮಾಹಿತಿ ಪಡೆದು ಹೇಳಿದ್ದಾರೆ., ಅವರು ಹೇಳಿದ ಅಂಕಿ ಅಂಶವೇ ನಿಜವಾದದ್ದು, ಆರೋಗ್ಯ ಇಲಾಖೆಗೆ ಪ್ರಯೋಗಾಲಯಗಳಿಂದ ಮಾಹಿತಿ ಬರುತ್ತದೆ. ಹೀಗಾಗಿ ಸುಧಾಕರ್ ಹೇಳಿದ 401 ಕರೆಕ್ಟ್ ಎಂದು ಸಿಎಂ ಕಚೇರಿ ಸಮರ್ಥಿಸಿಕೊಂಡಿದೆ. 

ಸಿಎಂ ಮತ್ತು ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣಗಳಲ್ಲಿ ಸಂವಹನ ಕೊರತೆಯೋ ಅಥವಾ ಸಾರ್ನಜನಿಕರ ಕಣ್ತಪ್ಪಿಸಲು ನಿಜವಾದ ಅಂಕಿ ಅಂಶಗಳನ್ನು ಮರೆ ಮಾಚಲಾಗುತ್ತಿದೆಯೆ ಎಂಬ ಸಂಶಯಕ್ಕೆ ಕಾರಣವಾಗಿದೆ.,
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com