• Tag results for corona

ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಪುತ್ರ ಕಾರ್ತಿ ಚಿದಂಬರಂ'ಗೆ ಕೊರೋನಾ ಪಾಸಿಟಿವ್

ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಅವರಿಗೆ ಕೊರೋನಾ ಪಾಟಿಸಿವ್ ಬಂದಿದೆ ಎಂದು ವರದಿಗಳಿಂದ ತಿಳಿದುಬಂದಿದೆ. 

published on : 3rd August 2020

ಗೃಹ ಸಚಿವ ಅಮಿತ್ ಶಾ ಏಮ್ಸ್ ಬಿಟ್ಟು, ಖಾಸಗಿ ಆಸ್ಪತ್ರೆಗೇಕೆ ದಾಖಲಾದರು?: ಶಶಿ ತರೂರ್

ಕೊರೋನಾ ಸೋಂಕಿಗೀಡಾಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರಿ ಆಸ್ಪತ್ರೆಯನ್ನು ಬಿಟ್ಟು ಖಾಸಗಿ ಆಸ್ಪತ್ರೆಗೇಕೆ ದಾಖಲಾದರು ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಸೋಮವಾರ ಪ್ರಶ್ನಿಸಿದ್ದಾರೆ.

published on : 3rd August 2020

ಬೆಡ್ ಜಟಾಪಟಿ: ನಮ್ಮನ್ನು ಟಾರ್ಗೆಟ್ ಮಾಡಿಕೊಳ್ಳಬೇಡಿ; ಸರ್ಕಾರಕ್ಕೆ ಚಿಕ್ಕ ಆಸ್ಪತ್ರೆಗಳ ಅಳಲು!

ಸೋಂಕಿತರಿಗೆ ಹಾಸಿಗೆ ನೀಡದೆ ನಿರ್ಲಕ್ಷ್ಯ ತೋರಿದ್ದ ನಗರದ 19 ಆಸ್ಪತ್ರೆಗಳ ಪರವಾನಗಿಗಳನ್ನು ಬಿಬಿಎಂಪಿ ರದ್ದು ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರಿಗೆ ಪತ್ರ ಬರೆದಿರುವ ನಗರದ ಸಣ್ಣ ಆಸ್ಪತ್ರೆಗಳು ನಮ್ಮನ್ನು ಟಾರ್ಗೆಟ್ ಮಾಡಿಕೊಳ್ಳಬೇಡಿ ಎಂದು ತಿಳಿಸಿದೆ. 

published on : 3rd August 2020

ದೇಶದಲ್ಲಿ ಇದುವರೆಗೂ 2 ಕೋಟಿ ಜನರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ: ಐಸಿಎಂಆರ್

ಭಾರತದಲ್ಲಿ ಇದೂವರೆಗೂ 2 ಕೋಟಿಗೂ ಹೆಚ್ಚು ಮಂದಿಯನ್ನು ಕೋವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸೋಮವಾರ ತಿಳಿಸಿದೆ. 

published on : 3rd August 2020

ಕೋವಿಡ್-19: ದೇಶದಲ್ಲಿ ಒಂದೇ ದಿನ 52,972 ಕೇಸ್ ಪತ್ತೆ; ಸೋಂಕಿತರ ಸಂಖ್ಯೆ 18 ಲಕ್ಷ, 38,135 ಮಂದಿ ಸಾವು

ಭಾರತದಲ್ಲಿ ಕೊರೋನಾ ಆರ್ಭಟ ಮುಂದುವರೆದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 52,972 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಸೋಮವಾರ ಮಾಹಿತಿ ನೀಡಿದೆ. 

published on : 3rd August 2020

ಸಿಎಂ ಯಡಿಯೂರಪ್ಪಗೆ ಕೊರೋನಾ ಸೋಂಕು: ಗಣ್ಯರಿಂದ ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಕೆ

ಮುಖ್ಯಮಂತ್ರಿ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವ ವರದಿ ತಿಳಿಯುತ್ತಿದ್ದಂತೆಯೇ ಹಲವು ಗಣ್ಯರು ಶೀಘ್ರ ಗುಣಮುಖರಾಗುವಂತೆ ಶುಭ ಹಾರೈಸಿದ್ದಾರೆ. 

published on : 3rd August 2020

ಸಿಎಂ ಯಡಿಯೂರಪ್ಪ ಬಳಿಕ ಅವರ ಪುತ್ರಿಯಲ್ಲೂ ಕೊರೋನಾ ವೈರಸ್ ದೃಢ!

ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಕೊರೋನಾ ದೃಢಪಟ್ಟ ಬೆನ್ನಲ್ಲೇ ಅವರ ಪುತ್ರಿಯೊಬ್ಬರಲ್ಲೂ ಕೊರೋನಾ ಪಾಸಿಟಿವ್ ಬಂದಿದೆ ಎಂದು ಮೂಲಗಳಿಂದ ಸೋಮವಾರ ತಿಳಿದುಬಂದಿದೆ.

published on : 3rd August 2020

ಕೊರೋನಾ ಸಂದರ್ಭದಲ್ಲೂ 52 ಹೆರಿಗೆ: ಸೋಂಕಿತ ಮಹಿಳೆಯರ ಡೆಲಿವರಿ ಮಾಡಿಸಿ ಹೆಗ್ಗಳಿಕೆಗೆ ಪಾತ್ರವಾದ ಮೈಸೂರು ಆಸ್ಪತ್ರೆ!

ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರೇ ಹೆಚ್ಚು. ಅದರಲ್ಲೂ ಕೊರೋನಾ ಬಂದ್ಮೇಲಂತೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಒಂದಿಲ್ಲೊಂದು ಭಯಾನಕ ವರದಿಗಳು ಬರುತ್ತಲೇ ಇವೆ. ಆದರೆ. ಇಲ್ಲೆದರ ನಡುವೆ 52 ಸೋಂಕಿತರ ಮಹಿಳೆಯರಿಗೆ ಹೆರಿಗೆ ಮಾಡಿಸಿದ ಹೆಗ್ಗಳಿಕೆಗೆ ಮೈಸೂರು ಆಸ್ಪತ್ರೆ ಪಾತ್ರವಾಗಿದೆ. 

published on : 3rd August 2020

ಸಿಎಂ ಯಡಿಯೂರಪ್ಪಗೆ ಕೊರೋನಾ ಪಾಸಿಟೀವ್: ಆಸ್ಪತ್ರೆಗೆ ದಾಖಲು! 

ಕೇಂದ್ರ ಗೃಹ ಸಚಿವ ಅಮಿತ್ ಶಾ, ತಮಿಳುನಾಡು ರಾಜ್ಯಪಾಲ ಬನ್ವಾರಿ ಲಾಲ್ ಗೆ ಕೊರೋನಾ ಸೋಂಕು ದೃಢಪಟ್ಟಿರುವ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. 

published on : 3rd August 2020

ಏಷ್ಯಾ ದೇಶಗಳು ದೀರ್ಘಕಾಲದವರೆಗೆ ಕೊರೋನಾ ಮಹಾಮಾರಿ‌ ವಿರುದ್ಧ ಹೋರಾಡಬೇಕು; ಡಬ್ಲ್ಯುಎಚ್‌ಒ ಎಚ್ಚರಿಕೆ

ಕಳೆದ ಕೆಲ ದಿನಗಳಿಂದ ಕೋವಿಡ್‌ ಪ್ರಕರಣಗಳ ಏರಿಕೆ ಗಮನಿಸಿದರೆ ಅತಿ ಹೆಚ್ಚು ಜನಸಂಖ್ಯೆಯಿರುವ ವಿಶೇಷವಾಗಿ ಏಷಿಯಾ ದೇಶಗಳಲ್ಲಿ ಸಾಂಕ್ರಮಿಕದ ಹೋರಾಟ ದೀರ್ಘಕಾಲಿಕವಾಗಿರಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಅಭಿಪ್ರಾಯಪಟ್ಟಿದೆ.

published on : 2nd August 2020

ಕೊರೋನಾ ಸೋಂಕು: ಸಾಮಾಜಿಕ ಜವಾಬ್ದಾರಿ ಮುಖ್ಯ - ನಟ ರಮೇಶ್ ಅರವಿಂದ್

ಕೊರೋನಾ ಸೋಂಕು ನಿಯಂತ್ರಣದಲ್ಲಿ ಜನತೆ ಸಾಮಾಜಿಕ ಜವಾಬ್ದಾರಿ ಕಾಯ್ದುಕೊಳ್ಳಬೇಕು ಎಂದು ಚಿತ್ರನಟ ಹಾಗೂ ಸೋಂಕು ನಿಯಂತ್ರಣ ಕುರಿತ ಬಿಬಿಎಂಪಿ ರಾಯಭಾರಿ ರಮೇಶ್ ಅರವಿಂದ್ ಹೇಳಿದ್ದಾರೆ.

published on : 2nd August 2020

ನಿಲ್ಲದ ಕೊರೋನಾರ್ಭಟ: ರಾಜ್ಯದಲ್ಲಿ ಇಂದು 5,532 ಸೋಂಕು ದೃಢ, ಬೆಂಗಳೂರಿನಲ್ಲಿ 2,105 ಸೋಂಕು, 4077 ಡಿಸ್ಚಾರ್ಜ್!

ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆ ಕಂಡಿದ್ದು, ಭಾನುವಾರ 5,532 ಮಂದಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದರಿಂದ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,34,819ಕ್ಕೆ ಏರಿಕೆಯಾಗಿದೆ.

published on : 2nd August 2020

ಕೊರೋನಾ ಔಷಧಿ, ಉಪಕರಣ ಖರೀದಿ ಅಕ್ರಮದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಬಳಿಕ ಲೂಟಿ ನಿಯಂತ್ರಣಕ್ಕೆ: ಸಿದ್ದರಾಮಯ್ಯ

ಕೊರೋನಾ ಔಷಧಿ, ಉಪಕರಣ ಖರೀದಿ ಅಕ್ರಮ ಸಂಬಂದ  ಬಹಿರಂಗವಾಗಿ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಸರ್ಕಾರದಲ್ಲಿ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಕೋಟ್ಯಂತರ ರೂಪಾಯಿಯ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

published on : 2nd August 2020

ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಕೊರೋನಾ ಸೋಂಕು, ಆಸ್ಪತ್ರೆಗೆ ದಾಖಲು!

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕೊರೋನಾ ಸೋಂಕು ಒಕ್ಕರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಅವರನ್ನು ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.

published on : 2nd August 2020

ಕೊರೋನಾ ವೈರಸ್: ಕರ್ನಾಟಕವನ್ನೂ ಮೀರಿಸಿದ ಆಂಧ್ರ ಪ್ರದೇಶ, ಒಂದೇ ದಿನ 9,276 ಹೊಸ ಸೋಂಕು ಪ್ರಕರಣ ಪತ್ತೆ

ಮಾರಕ ಕೊರೋನಾ ವೈರಸ್ ದೇಶಾದ್ಯಂತ ಮರಣ ಮೃದಂಗ ಭಾರಿಸುತ್ತಿದ್ದು, ಕರ್ನಾಟಕದಂತೆಯೇ ಆಂಧ್ರ ಪ್ರದೇಶದಲ್ಲೂ ಕೊರೋನಾ ವೈರಸ್ ಆರ್ಭಟ ಜೋರಾಗಿದ್ದು, ನಿನ್ನೆ ಒಂದೇ ದಿನ ಆಂಧ್ರ ಪ್ರದೇಶದಲ್ಲಿ 9,276 ಹೊಸ ಪ್ರಕರಣಗಳು ದಾಖಲಾಗಿದೆ.

published on : 2nd August 2020
1 2 3 4 5 6 >