'ಭಾರತದಲ್ಲಿನ ಶೇ.80ರಷ್ಟು, ಕರ್ನಾಟಕದ ಶೇ.60ರಷ್ಟು ಕೊರೋನಾ ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇಲ್ಲ': ಆರೋಗ್ಯ ಸಚಿವಾಲಯ ಮಾಹಿತಿ
ನವದೆಹಲಿ: ಮಾರಕ ಕೊರೋನಾ ವೈರಸ್ ಕುರಿತಂತೆ ಆರೋಗ್ಯ ಸಚಿವಾಲಯ ಆಘಾತಕಾರಿ ಮಾಹಿತಿಯೊಂದನ್ನು ಹೊರ ಹಾಕಿದ್ದು, ಕರ್ನಾಟಕದಲ್ಲಿನ ಶೇ.60ರಷ್ಚು ಕೊರೋನಾ ಸೋಂಕಿತರಲ್ಲಿ ರೋಗ ಲಕ್ಷಣಗಳೇ ಇರಲಿಲ್ಲ ಎಂದು ಹೇಳಿದೆ.
ಹೌದು.. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ಮಾಹಿತಿ ನೀಡಿದ್ದಾರೆ. ಭಾರತದಲ್ಲಿ ಕಂಡುಬಂದ ಒಟ್ಟಾರೆ ಕೊರೋನಾ ವೈರಸ್ ಸೋಂಕಿತರ ಪೈಕಿ ಶೇ.80ರಷ್ಟು ಮಂದಿಯಲ್ಲಿ ವೈರಸ್ ರೋಗ ಲಕ್ಷಣಗಳೇ ಇರಲಿಲ್ಲ. ಈ ಪೈಕಿ ಕರ್ನಾಟಕದ ಸುಮಾರು ಶೇ.60 ರೋಗಿಳಲ್ಲೂ ರೋಗಲಕ್ಷಣಗಳಿಲ್ಲ ಎಂದು ತಿಳಿದುಬಂದಿದೆ. ಇದು ಸೋಂಕಿತರನ್ನು ಪತ್ತೆ ಹಚ್ಚಲು ವೈದ್ಯಕೀಯ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಏಪ್ರಿಲ್ 16ರ ವರೆಗಿನ ಅಂಕಿಅಂಶಗಳ ಪೈಕಿ ರಾಜ್ಯದಲ್ಲಿ ಒಟ್ಟು ದಾಖಲಾಗಿರುವ 315 ಕೊರೊನಾ ಸೋಂಕಿತರ ಪೈಕಿ ಶೇಕಡಾ 60ರಷ್ಟು ಮಂದಿಯಲ್ಲಿ ರೋಗ ಲಕ್ಷಣವೇ ಕಂಡುಬಂದಿಲ್ಲ.
ರಾಜ್ಯದ 315 ಸೋಂಕಿತರ ಪೈಕಿ 186 ಮಂದಿಯಲ್ಲಿ ರೋಗ ಲಕ್ಷಣ ಕಂಡುಬಂದಿರಲಿಲ್ಲ. ಇನ್ನುಳಿದಂತೆ 129 ಮಂದಿಯಲ್ಲಿ ರೋಗ ಲಕ್ಷಣ ಕಾಣಿಸಿಕೊಂಡಿದೆ. ಇದು ಪ್ರಾಥಮಿಕ ಹಂತದಲ್ಲೇ ರೋಗ ಬಾಧಿತರನ್ನು ಗುರುತಿಸಲು ರಾಜ್ಯ ಸರಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.
ಭಾರತದಲ್ಲಿ ಶೇ.80% ರಷ್ಟು ಕೊರೋನಾ ಪ್ರಕರಣಗಳು ರೋಗಲಕ್ಷಣ ರಹಿತ
ಕರ್ನಾಟಕ ಮಾತ್ರವಲ್ಲದೇ ಒಟ್ಟಾರೆ ಭಾರತದಲ್ಲಿ ಶೇ.80ರಷ್ಡು ಸೋಂಕು ಪ್ರಕರಣಗಳಲ್ಲಿ ರೋಗ ಲಕ್ಷಣಗಳೇ ಇಲ್ಲ. ವಿಶ್ವಾದ್ಯಂತ ಕೊರೋನಾ ವೈರಸ್ ಸೋಂಕಿತ ದೇಶಗಳಿಂದ ಸಂಗ್ರಹಿಸಲಾದ ದತ್ತಾಂಶಗಳನ್ನು ಭಾರತದ ಸೋಂಕು ಪೀಡಿತರ ದತ್ತಾಂಶಗಳೊಂದಿಗೆ ಹೋಲಿಕೆ ಮಾಡಲಾಗಿದ್ದು, ಈ ಪೈಕಿ ಭಾರತದಲ್ಲಿ ಪತ್ತೆಯಾದ ಸೋಂಕಿತರ ಪೈಕಿ ಶೇ.80ರಷ್ಟು ಸೋಂಕಿತರಲ್ಲಿ ರೋಗ ಲಕ್ಷಣಗಳೇ ಕಂಡುಬಂದಿಲ್ಲ. ಕೆಲವರಲ್ಲಿ ಕನಿಷ್ಠ ಪ್ರಮಾಣದ ಲಕ್ಷಣಗಳು ಕಂಡುಬಂದಿದೆ. ಶೇ.15ರಷ್ಟು ರೋಗಿಗಳಲ್ಲಿ ಮಾತ್ರ ಮಧ್ಯಮ ಪ್ರಮಾಣದ ವೈರಸ್ ಸೋಂಕು ಲಕ್ಷಣಗಳು ಕಂಡುಬಂದಿದ್ದು, ಶೇ.5ರಷ್ಟು ರೋಗಿಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಯಂತಹ ಲಕ್ಷಣಗಳಉ ಕಂಡುಬಂದಿದೆ ಎಂದು ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ