ಕೋವಿಡ್-19: ಆರ್ ಟಿ-ಪಿಸಿಆರ್ ಟೆಸ್ಟ್ ಹೆಚ್ಚು ವಿಶ್ವಾಸಾರ್ಹ, ರಾಜ್ಯದಲ್ಲಿ ಪರೀಕ್ಷಾ ಕಿಟ್ ಗಳ ಕೊರತೆ ಇಲ್ಲ!

ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಎರಡು ರೀತಿಯ ಪರೀಕ್ಷೆಗಳನ್ನು ಅನುಸರಿಸುತ್ತಿದೆ, ಒಂದು ಆರ್ ಟಿ -ಪಿಸಿಆರ್ ಇದು ಸರ್ಕಾರ ಮತ್ತು ಖಾಸಗಿ ಪ್ರಯೋಗಾಲಯಗಳು ನಡೆಸುವ ಪರೀಕ್ಷೆ ಇದಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಎರಡು ರೀತಿಯ ಪರೀಕ್ಷೆಗಳನ್ನು ಅನುಸರಿಸುತ್ತಿದೆ, ಒಂದು ಆರ್ ಟಿ -ಪಿಸಿಆರ್ ಇದು ಸರ್ಕಾರ ಮತ್ತು ಖಾಸಗಿ ಪ್ರಯೋಗಾಲಯಗಳು ನಡೆಸುವ ಪರೀಕ್ಷೆ ಇದಾಗಿದೆ.

ಇನ್ನೊಂದು ರಾಪಿಡ್ ಆಂಟಿಬಾಡಿ ಟೆಸ್ಟ್ ಆಗಿದೆ. ರಾಪಿಡ್ ಆಂಟಿಬಾಡಿ ಪರೀಕ್ಷೆಗಳ ಮೇಲೆ ಆರ್‌ಟಿ-ಪಿಸಿಆರ್ ಪರೀಕ್ಷೆಯನ್ನು ಮೊದಲಿನಿಂದಲೂ ಬಳಸಬೇಕೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರತಿಪಾದಿಸುತ್ತಿದ್ದಾರೆ.

ಐಸಿಎಂಆರ್ ನಿಂದ 11,400 ಕ್ಷಿಪ್ರ ಪರೀಕ್ಷಾ ಕಿಟ್‌ಗಳನ್ನು ಪಡೆಯಲಾಗಿದ್ದು,, ಅದರಲ್ಲಿ 200 ಅನ್ನು ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ಹೇಳಿದ್ದಾರೆ.

ಚೀನಾ ಕಂಪನಿಯಿಂದ ನಾವು 1 ಲಕ್ಷ ರ್ಯಾಪಿಡ್ ಟೆಸ್ಟ್ ಕಿಟ್ ಆರ್ಡರ್ ಮಾಡಿದ್ದೇವು, ಅವು ಇನ್ನೂ ಬಂದಿಲ್ಲ, ಹೀಗಾಗಿ ಮತ್ತೊಂದು ಕಂಪನಿಗೆ 1 ಲಕ್ಷ ಕಿಟ್ ಗೆ ಆರ್ಡರ್ ಮಾಡಿದ್ದು ಶೀಘ್ರವೇ ಬರಲಿದೆ ಎಂದು ತಿಳಿಸಿದ್ದಾರೆ.

ರಾಪಿಡ್ ಆಂಟಿಬಾಡಿ ಟೆಸ್ಟ್ ವೈರಸ್ ಇರುವಿಕೆಗೆ ದೇಹದ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಪತ್ತೆ ಮಾಡುತ್ತದೆ. ವೈರಸ್ ದೇಹಕ್ಕೆ ಪ್ರವೇಶಿಸಿದಾಗ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ, ಇವುಗಳನ್ನು ತ್ವರಿತ ಪರೀಕ್ಷೆಯಿಂದ ಕಂಡುಹಿಡಿಯಲಾಗುತ್ತದೆ ಎಂದು ನ್ಯೂಬರ್ಗ್ ಡಯಾಗ್ನೋಸ್ಟಿಕ್ ನಿರ್ದೇಶಕ ಡಾ ಸುಜಯ್ ಪ್ರಸಾದ್ ಹೇಳಿದ್ದಾರೆ. ಆದರೆ ಈ ಪರೀಕ್ಷೆಯಿಂದ ನಿಮಗೆ ವೈರಸ್ ಇದೆಯೋ ಇಲ್ಲವೋ ಎಂಬದು ತಕ್ಷಣಕ್ಕೆ ತಿಳಿಯುವುದಿಲ್ಲ ಎಂದು ಹೇಳಿದ್ದಾರೆ.

ಹೀಗಾಗಿ ಗಂಟಲಿನಲ್ಲಿರುವ ವೈರಸ್ ಶ್ವಾಸಕೋಶ ತಲುಪಿ ದೇಹದ ಬೇರೆಡೆ ವೈರಸ್ ರಡಲು ನೆರವಾಗುತ್ತದೆ  ಹೀಗಾಗಿ ಪಿಸಿಆರ್ ಟೆಸ್ಟ್ ಮಾಡಿಸುವುದು ಕಡ್ಡಾಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com