'ಶ್ರೀರಂಗಪಟ್ಟಣದ ಆಂಜನೇಯ ದೇವಾಲಯದ ಪೂಜಾರಿ ಮಂಡ್ಯ, ಮೈಸೂರು ಜನರ ಮೆಚ್ಚಿನ ಡೆಲಿವರಿ ಬಾಯ್'

ಶ್ರೀರಂಗಪಟ್ಟಣದ ಆಂಜನೇಯ ದೇವಾಲಯದ ಪೂಜಾರಿ ರಾಮಚಂದ್ರ ದೀಕ್ಷಿತ್, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಜನಗಳಿಗೆ ಮೆಚ್ಚಿನ ಡೆಲಿವರಿ ಬಾಯ್ ಆಗಿದ್ದಾರೆ.
ರಾಮಚಂದ್ರ ದೀಕ್ಷಿತ್
ರಾಮಚಂದ್ರ ದೀಕ್ಷಿತ್

ಮೈಸೂರು: ಶ್ರೀರಂಗಪಟ್ಟಣದ ಆಂಜನೇಯ ದೇವಾಲಯದ ಪೂಜಾರಿ ರಾಮಚಂದ್ರ ದೀಕ್ಷಿತ್, ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಜನಗಳಿಗೆ ಮೆಚ್ಚಿನ ಡೆಲಿವರಿ ಬಾಯ್ ಆಗಿದ್ದಾರೆ.

ಮನುಷ್ಯನಿಗೆ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ನಂಬಿರುವ ದೀಕ್ಷಿತ್ ಮಾಸ್ಕ್ ಮತ್ತು ಗ್ಲೋವ್ಸ್ ಧರಿಸಿ ತಮ್ಮ ದ್ವಿಚಕ್ರವಾಹನದಲ್ಲಿ ಕುಳಿತು ಅವಶ್ಯಕತೆ ಇರುವವರಿಗೆ ಅಗತ್ಯವಸ್ತುಗಳನ್ನು ಪೊರೈಸುತ್ತಿದ್ದಾರೆ.ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಾಲಯ ಬಂದ್ ಆಗಿರುವುದರಿಂದ ಜನರಿ ಸಹಾಯ ಮಾಡುವುದರಲ್ಲಿ ನಿರತರಾಗಿದ್ದಾರೆ.

ಕಳೆದ 20 ದಿನಗಳಲಲ್ಲಿ ದೀಕ್ಷಿತ್ 1 ಸಾವಿರ ಕಿಮೀ ಕ್ರಮಿಸಿದ್ದಾರೆ. ಮೈಸೂರು ಮಂಡ್ಯ ಮತ್ತು ಮದ್ದೂರು ಭಾಗದ ಜನತೆಗೆ ಬೇಕಾದ ಔಷಧ ಮತ್ತು ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುತ್ತಿದ್ದಾರೆ. ಇವರ ಸೇವೆ ಗಮನಿಸಿರುವ ಪ್ರಾಧಿಕಾರ ಇವರಿಗೆ ಪಾಸ್ ನೀಡಿದೆ. 

ಈ ಭಾಗದ ಜನತೆ ಔಷಧಿ ಸಿಗದೇ ಪರದಾಡುತ್ತಿರುವ ಸಮದಲ್ಲಿ ಇವರು ಔಷಧಿಗಳನ್ನು ಪಡೆದು ಮನೆ ಬಾಗಿಲಿಗೆ ತಂದು ಕೊಡಲು ಆರಂಭಿಸಿದರು, ಮೈಸೂರಿನ ದೊಡ್ಡ ಫಾರ್ಮಸಿಯಲ್ಲಿ ಎಲ್ಲಾ ರೀತಿಯ ಔಷಧಿ ಸಿಗುತ್ತದೆ, ಅಲ್ಲಿಂದ ಖರೀದಿಸಿ ಅಗತ್ಯ ಇರುವವರಿಗೆ ತಲುಪಿಸುತ್ತಿದ್ದಾರೆ.

ಮೊದಲಿಗೆ ಕೇವಲ ಔಷಧಿಗಾಗಿ ಮಾತ್ರ ಜನರು ಕರೆ ಮಾಡುತ್ತಿದ್ದರು, ಆಮೇಲೆ ಅಗತ್ಯ ವಸ್ತುಗಳಿಗಾಗಿಯೂ ನನ್ನನ್ನುಸಂಪರ್ಕಿಸುತ್ತಿದ್ದರು, ಇದುವರೆಗೂ ಸುಮಾರು 150 ಜನರಿಗೆ ಅಗತ್ಯ ಸೇವೆ ಪೂರೈಸಿದ್ದೇನೆ. 

ನಾನು ತಂದು ಕೊಡುವ ವಸ್ತುಗಳಿಗೆ ಕೆಲವರು ಹೆಚ್ಚಿನ ಹಣ ನೀಡುತ್ತಾರೆ, ಆ ಹಣವನ್ನು ಬೀದಿ ನಾಯಿಗಳಿಗೆ ಮತ್ತು ಹಸಿದವರ ಊಟಕ್ಕಾಗಿ ಬಳಸುತ್ತೇನೆ ಎಂದು ಹೇಳಿರುವ ದೀಕ್ಷಿತ್ ಲಾಕ್ ಡೌನ್ ಮುಗಿಯುವವರೆಗೂ ತಮ್ಮ ಸೇವೆ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ನನ್ನ ಪೋಷಕರು ನನೆ ಎಲ್ಲಾ ರೀತಿಯ ನೆರವು ನೀಡುತ್ತಿದ್ದು, ನಾನು ಎಲ್ಲಾ ಅಗತ್ಯ ಮುಂಜಾಗರೂಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com