ದೇಶ ಕಾಯೋ ಯೋಧನ ಕೈಗೆ ಕೋಳ: ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ; ರಮೇಶ ಜಾರಕಿಹೊಳಿ ಖಂಡನೆ

ಕರ್ತವ್ಯ ನಿರತ ಪೊಲೀಸರ ಮೇಲೆ ಸಿಆರ್‌ಪಿಎಫ್ ಯೋಧನಿಂದ ಹಲ್ಲೆ ಪ್ರಕರಣ ಸಂಬಂಧ ಈಗ ಯೋಧ ಸಚಿನ ಸಾವಂತನನ್ನ ಪೊಲೀಸ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.
ಯೋಧ ಸಚಿನ್
ಯೋಧ ಸಚಿನ್

ಚಿಕ್ಕೋಡಿ: ಕರ್ತವ್ಯ ನಿರತ ಪೊಲೀಸರ ಮೇಲೆ ಸಿಆರ್‌ಪಿಎಫ್ ಯೋಧನಿಂದ ಹಲ್ಲೆ ಪ್ರಕರಣ ಸಂಬಂಧ ಈಗ ಯೋಧ ಸಚಿನ ಸಾವಂತನನ್ನ ಪೊಲೀಸ ಠಾಣೆಯಲ್ಲಿ ಕೈಗೆ ಬೇಡಿ ಹಾಕಿ ಕೂರಿಸಿದ್ದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಸದಲಾಗ ಪೊಲೀಸ ಠಾಣೆಯಲ್ಲಿ ಸಿ ಆರ್ ಪಿ ಎಫ್ ಕೊಬ್ರಾ ಕಮಾಂಡೋ  ಯೋಧನಿಗೆ ಚೈನ್ ಹಾಕಿ ಕೂರಿಸಿದ್ದ ಪೊಲೀಸರ ವಿರುದ್ಧ ಸಾಮಾಜಿಕ ಜಾಲ ತಾಣದಲ್ಲಿ ಪೊಲೀಸರ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತವಾಗುತ್ತಿದೆ‌.

ಸಿಆರ್‌ಪಿಎಫ್ ಕೊಬ್ರಾ ಬಟಾಲಿಯನ್ ಕಾನ್ಸ್‌ಟೇಬಲ್ ಆಗಿರುವ ಯೋಧ ಸಚಿನ ಸಾವಂತ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಯೋಧನಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಪೊಲೀಸರ ಕ್ರಮಕ್ಕೆ ಸಿಆರ್‌ಪಿಎಫ್ ಕೊಬ್ರಾ ಬಟಾಲಿಯನ್ ಅಸಿಸ್ಟೆಂಟ್ ಕಮಾಂಡಂಟ್ ಶ್ಯಾಮ್ ಸುಂದರ ಅವರು ಕರ್ನಾಟಕ ಡಿಜಿಪಿಗೆ ಟ್ವೀಟ್ ಹಾಗೂ ಪತ್ರದ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಘಟನೆ ನಂತರ ಎಫ್ಐಆರ್ ದಾಖಲಿಸುವ ಮುನ್ನ ನಮ್ಮ ಗಮನಕ್ಕೂ ತರಬೇಕಿತ್ತು. ಪೊಲೀಸರು ಲಾಟಿಯಿಂದ ಹೊಡೆಯುವಾಗ ಆತ್ಮರಕ್ಷಣೆಗೆ ಪ್ರತಿ ದಾಳಿ ಮಾಡಿದ್ದಾನೆ, ಆದರೆ ಪೊಲೀಸರು ಯೋಧ ಅಂತ ತಿಳಿದ ಮೇಲೂ ಠಾಣೆಯಲ್ಲಿ ಕೈಗೆ ಚೈನ್ ಕೂರಿಸಿದ್ದು ಸರಿಯಲ್ಲ ಎಂದುಅಸಿಸ್ಟೆಂಟ್ ಕಾಮಾಂಡಂಟ್ ಶ್ಯಾಮ್ ಸುಂದರರಿಂದ ಕರ್ನಾಟಕ ಡಿಜಿಪಿ‌ಗೆ ಪತ್ರ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ ‌ 

ಘಟನೆ ಹಿನ್ನಲೆ:
ಮಾರ್ಚ್ 23 ರಂದು ಯೋಧ ಸಚಿನ ಯಕ್ಸಂಬಾ ಗ್ರಾಮದ ತಮ್ಮ ಮನೆಯ ಮುಂದೆ ಮಾಸ್ಕ ಧರಿಸದೆ ಬೈಕ್ ತೊಳೆಯುತ್ತಿದ್ದ ಇದೆ ವೇಳೆ ಪೊಲೀಸರ ಅಲ್ಲಿಗೆ ಬಂದಾಗ ಮಾಸ್ಕ ಧರಿಸಿಬೇಕು ಹೊರಗಡೆ ಬರಬಾರದು ಒಳಗೆ ಹೋಗಿ ಎಂದಿದ್ದಕ್ಕೆ ಪೊಲೀಸರು ಮತ್ತು ಯೋಧನ ನಡುವೆ ಮಾತಿನ ಚಕಮಕಿ ಪೊಲೀಸರು ಯೋಧನನ್ನ ಹೊಡೆದಾಗ ಯೋಧ ಕರ್ತವ್ಯ ನಿರತ  ಪೊಲೀಸರ ಮೇಲೆ ಹಲ್ಲೆ ಮಾಡಿದ್ದ. ಅವಾಗ ಪೊಲೀಸರು ಆತನನ್ನ ಠಾಣೆಗೆ ಕರೆದೊಯ್ದು ಪ್ರಕರಣ ದಾಖಲಿಸಿದ್ದರು.

ಸಚಿವ ರಮೇಶ ಜಾರಕಿಹೊಳಿ ಖಂಡನೆ:
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ನಗರದಲ್ಲಿ ‌ತನ್ನ ಮನೆಯ ಮುಂದೆ ವಾಹನ ತೊಳೆಯುತ್ತಿದ್ದ ಅರೆ ಸೈನಿಕ ಪಡೆಯ ಯೋಧನನ್ನು ಕೇವಲ ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಬಂಧಿಸಿರುವುದು ಖಂಡನೀಯ. ಒಬ್ಬ ಯೋಧ ಎನ್ನುವುದನ್ನೂ ಗಮನಿಸದೇ ಸಾರ್ವಜನಿಕವಾಗಿ ಹಿಂಸಿಸಿ, ಒಬ್ಬ ಖೈದಿಯಂತೆ ಕೈಗೆ ಕೋಳ ತೊಡಿಸಿ ಬಂಧಿಸಿರುವುದನ್ನು ಯಾವುದೇ ಕಾರಣಕ್ಕೂ ಸಮರ್ಥನೆ ಮಾಡಲು ಸಾಧ್ಯವಿಲ್ಲ. 

ಒಬ್ಬ ನಿರಪರಾಧಿ ಯೋಧನನ್ನು ಅತ್ಯಂತ ಅಮಾನುಷವಾಗಿ ಹಿಂಸಿಸಿ, ಬಂಧಿಸಿರುವುದು ಸಮವಸ್ತ್ರ ಧರಿಸಿದ ಸೈನಿಕರಿಗೆ ಮಾಡಿದ ಅವಮಾನ. ಕೂಡಲೇ ಬಂಧಿತ ಅರೆ ಸೈನಿಕ ಪಡೆಯ ಯೋಧನನ್ನು ಗೌರವದಿಂದ ಬಿಡುಗಡೆ ಮಾಡಬೇಕು ಮತ್ತು ತಪ್ಪಿತಸ್ಥ ಪೊಲೀಸ್ ಸಿಬ್ಬಂದಿಯ ಮೇಲೆ ತನಿಖೆ ನಡೆಸಿ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ಮಾನ್ಯ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರನ್ನು ಒತ್ತಾಯಿಸುತ್ತೇನೆ ಎಂದು ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com