ಚಿಕ್ಕೋಡಿ: ಯೋಧ ಸಚಿನ್ ಸಾವಂತ್‍ಗೆ ಠಾಣೆಯಲ್ಲಿ ಅಮಾನುಷ ಥಳಿತ, ಇಲ್ಲಿದೆ ಫೋಟೋಗಳು!

ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಿಕಿ ನಡೆದು ನಂತರ ಪೊಲೀಸರು ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯೋಧ ಸಹ ಹೊಡೆದಿದ್ದರು.
ಸಚಿನ್ ಸಾವಂತ್
ಸಚಿನ್ ಸಾವಂತ್

ಚಿಕ್ಕೋಡಿ: ಮನೆ ಮುಂದೆ ಬೈಕ್ ತೊಳೆಯುತ್ತಿದ್ದ ಯೋಧ ಸಚಿನ್ ಸಾವಂತ್ ಮಾಸ್ಕ್ ಧರಿಸಿಲ್ಲ ಎಂಬ ಕಾರಣಕ್ಕೆ ಪೊಲೀಸರು ಪ್ರಶ್ನಿಸಿದ್ದರು. ಈ ವೇಳೆ ಮಾತಿನ ಚಕಮಿಕಿ ನಡೆದು ನಂತರ ಪೊಲೀಸರು ಹಲ್ಲೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಯೋಧ ಸಹ ಹೊಡೆದಿದ್ದರು. ಈ ಸಂಬಂಧ ಬೆಳಗಾವಿ ಪೊಲೀಸರು ಸಚಿನ್ ರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು. 

ಇದಾದ ಐದು ದಿನಗಳ ನಂತರ ಸಚಿನ್ ಅವರಿಗೆ ಜಾಮೀನು ಸಿಕ್ಕಿತ್ತು. ಅದಕ್ಕೆ ಕಾರಣ ಯೋಧನ ಕೈಗೆ ಕೋಳ ತೊಡಿಸಿ ಜೈಲಿನಲ್ಲಿ ಕೂರಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ಇದೇ ವೇಳೆ ಪೊಲೀಸರು ಕ್ರಮವನ್ನು ತೀವ್ರವಾಗಿ ಖಂಡಿಸಲಾಗಿತ್ತು. 

ಇದೀಗ ಜಾಮೀನು ಪಡೆದು ಹೊರಬಂದಿರುವ ಸಚಿನ್ ಅವರನ್ನು ಠಾಣೆಯಲ್ಲಿ ಅಮಾನುಷವಾಗಿ ಥಳಿಸಲಾಗಿದೆ ಎಂಬ ಪೋಸ್ಟ್ ವೊಂದು ವೈರಲ್ ಆಗಿದೆ. ಮಿತಾಂಶು ಚೌಧರಿ ಎಂಬುವವರು ಸಚಿನ್ ಸಾವಂತ್ ಅವರ ಎರಡು ಫೋಟೋಗಳನ್ನು ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಕೋಬ್ರಾ ಕಮಾಂಡೋ ಸಚಿನ್ ಗೆ 15 ಮಂದಿ ಪೊಲೀಸರು ಠಾಣೆಯಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 

ಇನ್ನು ಹಲ್ಲೆ ಕುರಿತಂತೆ ನ್ಯಾಯಾಧೀಶರ ಮುಂದೆ ಹೇಳಿದರೆ ಕ್ರಿಮಿನಲ್ ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದರು. ಇದರಿಂದ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಸಾವಂತ್ ಅವರ ದೇಹದ ಮೇಲೆ ರಕ್ತ ಹೆಪ್ಪುಗಟ್ಟಿರುವ ಫೋಟೋಗಳನ್ನು ಟ್ವೀಟರ್ ನಲ್ಲಿ ಹಾಕಲಾಗಿದ್ದು ಬೆಳಗಾವಿ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com