ಮೈಸೂರು: ಕೊರೋನಾಗೆ ಈ ಬುಡಕಟ್ಟು ಜನಾಂಗದ ಗ್ರಾಮವನ್ನು ಪ್ರವೇಶಿಸುವ ಧೈರ್ಯವಿಲ್ಲ!

ಇಡೀ ಪ್ರಪಂಚವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ, ಆದರೆ ಈ ಡೆಡ್ಲಿ ವೈರಸ್ ಕಾಡಿನಲ್ಲಿ ಬುಡಕಟ್ಟು ಜನಾಂಗ ವಾಸಿಸುವ ಗ್ರಾಮಕ್ಕೆ ಪ್ರವೇಶ ಮಾಡುವ ಧೈರ್ಯ ಮಾಡಿಲ್ಲ.
ರಸ್ತೆಗೆ ಅಡ್ಡ ಹಾಕಿರುವ ಬುಡಕಟ್ಟು ಜನಾಂಗ
ರಸ್ತೆಗೆ ಅಡ್ಡ ಹಾಕಿರುವ ಬುಡಕಟ್ಟು ಜನಾಂಗ

ಮೈಸೂರು: ಇಡೀ ಪ್ರಪಂಚವೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ, ಆದರೆ ಈ ಡೆಡ್ಲಿ ವೈರಸ್ ಕಾಡಿನಲ್ಲಿ ಬುಡಕಟ್ಟು ಜನಾಂಗ ವಾಸಿಸುವ ಗ್ರಾಮಕ್ಕೆ ಪ್ರವೇಶ ಮಾಡುವ ಧೈರ್ಯ ಮಾಡಿಲ್ಲ.

ಕೊಡಗು, ಮೈಸೂರು, ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದಲ್ಲಿ ಕೊರೋನಾ ಕೇಸ್ ಪತ್ತೆಯಾಗಿಲ್ಲ, ನೈಸರ್ಗಿಕ ಔಷಧೀಯ ಮೊರೆ ಹೋಗಿರುವ ಇವರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಕೊರೋನಾ ಇವರ ಹತ್ತಿರವು ಸುಳಿದಿಲ್ಲ.

ಪೂರ್ವ ಮತ್ತು ಪಶ್ಚಿಮ ಘಟ್ಟದ ​​300 ಕ್ಕೂ ಹೆಚ್ಚು ಹಾಡಿಗಳಲ್ಲಿ ಹರಡಿರುವ ಬುಡಕಟ್ಟು ಜನಸಂಖ್ಯೆಯು ಸಾಂಪ್ರದಾಯಿಕ ಆಹಾರದ ಕಾರಣ ವೈರಸ್ ವಿರುದ್ಧ ಹೋರಾಡಲು   ಸಾಧ್ಯವಾಗಿದೆ.

ಇದರ ಜೊತೆಗೆ ಅವರು ಸ್ವಯಂ ದಿಗ್ಬಂಧನ ವಿದಿಸಿಕೊಂಡಿದ್ದಾರೆ.  ಸ್ವಯಂ ಲಾಕ್ ಡೌನ್, ಹೋಮ್ ಕ್ವಾರಂಟೈನ್, ಸಾಮಾಜಿಕ ಅಂತರಸೇರಿದಂತೆ ಹಲವು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.ಹೊರಗಿನಿಂದ ಬಂದ ಯಾವುದೇ ಜನರನ್ನು ಹಾಡಿಯೊಳಗೆ ಪ್ರವೇಶಿಸಲು ಬಿಡುತ್ತಿಲ್ಲ, ಹೀಗಾಗಿ ಇಲ್ಲಿಗೆ ಕೊರೋನಾ ಪ್ರವೇಶಿಸಲು ಸಾಧ್ಯವಾಗಿಲ್ಲ, ಮಂಗಳೂರು, ಬೆಂಗಳೂರು, ಮತ್ತು ಬೇರೆ ನಗರಗಳಿಂದ ಬಂದವರು ಕೊರೋನಾ ಪರೀಕ್ಷೆ ಮಾಡಿಸಿದ್ದು ಒಂದೇ ಒಂದು ಕೇಸ್ ಪತ್ತೆಯಾಗಿಲ್ಲ,

ಈ ಬುಡಕಟ್ಟು ಜನರು ನೈಸರ್ಗಿಕ ಹಣ್ಣುಗಳಾದ ಮರಸೇಬು, ನೇರಳೆ ಮುಂತಾದ ಹಣ್ಣುಗಳು ಮತ್ತು ಮರದ ಬೇರು ಸೇವಿಸುವ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚಿನ ಪ್ರಮಾಣದಲ್ಲಿದೆ, ಈ ಜನಾಂಗದವರು ಸುಮಾರು 80 ಬಗೆಯ ಹಸಿರು ಮತ್ತು ಔಷಧೀಯ ಗುಣ ಹೊಂದಿರುವ ಹಣ್ಣು ತರಕಾರಿ ಸೇವಿಸುವ ಕಾರಣ ರೋಗ ನಿರೋಧಕ ಶಕ್ತಿ ಹೆಚ್ಚಿದೆ ಎಂದು ಹೇಳಿದ್ದಾರೆ.

ನಾವು ಶುದ್ದ ಜೇನು ಸೇವಿಸುತ್ತೇವೆ, ಇದರಲ್ಲಿ ಅಪಾರ ಪ್ರಮಾಣದ ಔಷಧೀಯ ಗುಣಗಳಿವೆ,  ಮೊಬೈಲ್ ಫೋನ್ ಗಳು ನಮಗೆ ವೈರಸ್ ಬಗ್ಗೆ ಜಾಗೃತಿ ಮೂಡಿಸಿದೆ ಎಂದು ಬಿಳಿಗಿರಿ ರಂಗನ ಬೆಟ್ಟದ ಬೊಮ್ಮಯ್ಯ ಎಂಬುವರು ತಿಳಿಸಿದ್ದಾರೆ. ನಮ್ಮಲ್ಲಿ ಹಲವು ಮಹಿಳೆಯರು ಮತ್ತು ಮಕ್ಕಳು ಕಾಟನ್ ಬಟ್ಟೆಯ ತುಂಡುಗಳನ್ನು ಮಾಸ್ಕ್ ಗಳಂತೆ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಸಂಪೂರ್ಣ ಜೀವನವನ್ನು ನಡೆಸಲು ಬುಡಕಟ್ಟು ಜನಾಂಗದವರ ಪ್ರೀತಿ ಮತ್ತು ಸಾಂಕ್ರಾಮಿಕ ರೋಗವನ್ನು ನಿವಾರಿಸುವ ದೃಡ ನಿಶ್ಚಯದಿಂದಾಗಿ ಕೊರೋನಾ ಈ ಹಳ್ಳಿಗಳಿಗೆ ಪ್ರವೇಶ ಮಾಡಿಲ್ಲ. ಈ ಭಾಗದ  ಜನರಿಗೆ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದ್ದು, ಮುಂದಿನ ವಾರ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ನಡೆಸುವುದಾಗಿ ಜಿಲ್ಲಾ ಆರೋಗ್ಯಾಧಿಕಾರಿ ವೆಂಕಟೇಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com