ರಾಮಜನ್ಮ ಭೂಮಿ ಹೋರಾಟದ ಚಿತ್ರಗಳು
ರಾಮಜನ್ಮ ಭೂಮಿ ಹೋರಾಟದ ಚಿತ್ರಗಳು

ಕರ ಸೇವೆ, ಲಡ್ಡೂ, ಕರ್ನಾಟಕ-ಅಯೋಧ್ಯೆ ನಡುವಣ ಸಂಬಂಧ; ಹಿರಿಯ ರಾಜಕಾರಣಿಗಳ ಸ್ಮೃತಿ ಪಟಲದಿಂದ ಬಂದ ನುಡಿಮುತ್ತುಗಳು

1990 ರ ದಶಕದ ಆರಂಭದಲ್ಲಿ ರಾಮ ಜನ್ಮಭೂಮಿ ಚಳವಳಿಯಲ್ಲಿ ಭಾಗಿಯಾದ ರಾಜಕಾರಣಿಗಳಿಗೆ ಬುಧವಾರ ಬೆಳಿಗ್ಗೆ ಅಯೋಧ್ಯೆಯಲ್ಲಿನ ಭೂಮಿ ಪೂಜೆ ಕರ ಸೇವೆಯ ನೆನಪುಗಳನ್ನು ಮರುಕಳಿಸಿತು.
Published on

ಬೆಂಗಳೂರು: 1990 ರ ದಶಕದ ಆರಂಭದಲ್ಲಿ ರಾಮ ಜನ್ಮಭೂಮಿ ಚಳವಳಿಯಲ್ಲಿ ಭಾಗಿಯಾದ ರಾಜಕಾರಣಿಗಳಿಗೆ ಬುಧವಾರ ಬೆಳಿಗ್ಗೆ ಅಯೋಧ್ಯೆಯಲ್ಲಿನ ಭೂಮಿ ಪೂಜೆ ಕರ ಸೇವೆಯ ನೆನಪುಗಳನ್ನು ಮರುಕಳಿಸಿತು.

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಕರ ಸೇವೆಯಲ್ಲಿ ಭಾಗವಹಿಸಿದ್ದ ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯಲ್ಲಿಯೇ ಶ್ರೀ ರಾಮಲಲ್ಲಾನ ದಿವ್ಯ, ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವ ಬಿಜೆಪಿಯ ಬದ್ಧತೆ ಹಿಂದೆ ನಿರಂತರ ಹೋರಾಟವಿದೆ, ತ್ಯಾಗ ಬಲಿದಾನಗಳಿವೆ. ಇಂದು ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಧನ್ಯತೆಯ ಕ್ಷಣಗಳಲ್ಲಿ,ಕರಸೇವೆಯ ಆ ದಿನಗಳು ಮತ್ತೆ ನೆನಪಾಗುತ್ತಿದೆ. ಅಂದಿನ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆ ಎಂದು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

ಭಗವಾನ್ ಶ್ರೀ ರಾಮನ ಭವ್ಯ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಿರುವುದು ಈ ದೇಶದ ಜನರ ಹೃದಯದಲ್ಲಿ ಶಾಶ್ವತವಾಗಿ ಕೆತ್ತಲಾಗುವುದು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಭವ್ಯ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿದ್ದಾಗ ನನ್ನೊಳಗಿನ ತನ್ಮಯತೆಯ ಜತೆಗೇ ಸುತ್ತಲಿನವರನ್ನೂ ಗಮನಿಸುತ್ತಿದ್ದೆ. ಸಾಮಾನ್ಯ ಪೂಜೆಯ ಸಂದರ್ಭದಲ್ಲೇ ನಾವೆಲ್ಲ ಧ್ಯಾನಸ್ಥ ಸ್ಥಿತಿಗೆ ಹೋಗುತ್ತೇವೆ. ಅಲ್ಲಿದ್ದವರಲ್ಲಿ ಹೆಚ್ಚಿನವರು ತಮ್ಮ ಇಡೀ ಬದುಕನ್ನು ರಾಮನಿಗಾಗಿ ಮುಡಿಪಿಟ್ಟವರು. ಅವನ ಸ್ಮರಣೆಯ ಜತೆಗೆ ಹೋರಾಟದಲ್ಲಿ ಕಳೆದವರು. ಅವರ ಡಿಎನ್‌ಎಯಲ್ಲೇ ರಾಮ ಸೇರಿ ಹೋಗಿದ್ದ. ಶಿಲಾನ್ಯಾಸದ ಸಂದರ್ಭದಲ್ಲಿ ಅವರೆಲ್ಲ ದಿವ್ಯಾನುಭೂತಿಯನ್ನು ಅನುಭವಿಸುತ್ತಿರುವುದನ್ನು ಕಂಡೆ
ಎಂದು ಆದಿ ಚುಂಚನಗಿರಿ ಮಠದ ನಿರ್ಮಲಾನಂದ ನಾಥ ಸ್ವಾಮೀಜಿ ಹೇಳಿದ್ದಾರೆ.

ಅಯೋಧ್ಯೆಗೆ ಹೋಗಿ ಭದ್ರತಾ ಪಡೆಗಳಿಂದ ಬಂಧಿಸಲ್ಪಟ್ಟಿದ್ದನ್ನು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ. ನಮ್ಮ ಮುಖಕ್ಕೆ ಗನ್ ಇಟ್ಟಿದ್ದರು 14 ಬಸ್ಸುಗಳಲ್ಲಿದ್ದ ನಾವು  ರಾತ್ರಿಯನ್ನು ಅರಣ್ಯದಲ್ಲಿ ಕಳೆದಿದ್ದವು, ಒಂದು ವೇಳೆ ಕೊರೋನಾ ಇಲ್ಲದಿದ್ದರೇ ನಾನು ಕೂಡ ಅಯೋಧ್ಯೆಗೆ ತೆರಳುತ್ತಿದ್ದೆ ಎಂದು ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಡಿಎಚ್ ಶಂಕರ ಮೂರ್ತಿ ಹೇಳಿದ್ದಾರೆ. 

ದಿವಂಗತ ಅನಂತಮೂರ್ತಿ ಅವರ ಪತ್ನಿ ತೇಜಸ್ವಿನಿ ಅನಂತ್ ಕುಮಾರ್ ಮನೆಯಲ್ಲಿಯೇ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸಿದರು. ಜೊತೆಗೆ ಮನೆಯಲ್ಲಿ ಬೇಸನ್ ಲಾಡೂ ತಯಾರಿಸಿದ್ದರು. ಕರ್ನಾಟಕದಲ್ಲಿ ನಡೆದ ರಥಯಾತ್ರೆ ನೆನಪಿನ ಅಂಗವಾಗಿ  ಬೇಸನ್ ಲಡ್ಡು ಮಾಡಿದ್ದರು, ಲಡ್ಡೂಗಳನ್ನು ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿಯವರಿಗಾಗಿ ಮತ್ತು ರಥಯಾತ್ರೆ ಆಯೋಜಿಸಿದ ಅನಂತ್ ಕುಮಾರ್ ಅವರು ಅಡ್ವಾಣಿಗಾಗಿ ಲಡ್ಡೂ ಸರಬರಾಜು ಮಾಡಲಾಗಿತ್ತು.ರು. ಅನಂತ್ ಕುಮಾರ್ ನೇತೃತ್ವದ ಬಿಜೆಪಿ ನಾಯಕರ ಗುಂಪನ್ನು
ಅಯೋಧ್ಯೆಗೆ ಕರೆದೊಯ್ಯುವುದನ್ನು ತೇಜಸ್ವಿನಿ ನೆನಪಿಸಿಕೊಂಡರು.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com