ರಾಜ್ಯಾದ್ಯಂತ ಭಾರೀಮಳೆ: ಕಾಸಲ್ ರಾಕ್ ಬಳಿ ಭೂ ಕುಸಿತ, ರೈಲು ಸಂಚಾರದಲ್ಲಿ ವ್ಯತ್ಯಯ

ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.ಕರಾವಳಿ, ಮಲೆನಾಡು, ಮೈಸೂರು, ಮುಂಬೈ ಕರ್ನಾಟಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ.  
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.ಕರಾವಳಿ, ಮಲೆನಾಡು, ಮೈಸೂರು, ಮುಂಬೈ ಕರ್ನಾಟಕ ಭಾಗಗಳಲ್ಲಿ ಭಾರೀ ಮಳೆಯಾಗಿದೆ.  

ಭಾರೀ ಮಳೆಯಿಂದಾಗಿ ಕ್ಯಾಸಲ್ ರಾಕ್ ಮತ್ತು ಕರೊನ್ ಜೋಲ್ ವಿಭಾಗದಲ್ಲಿ ಮಳೆಯಿಂದಾಗಿ ಭೂ ಕುಸಿತ ಸಂಭವಿಸಿದ್ದು, 700 ಕ್ಯೂಬಿಕ್ ಮೀಟರ್ ನಷ್ಟು ಮಣ್ಣು ಕುಸಿದು ರೈಲು ಹಳಿಗಳ ಮೇಲೆ ಬಿದ್ದಿತ್ತು. 8 ಗಂಟೆಗಳ ನಿರಂತರ ಕೆಲಸದ ನಂತರ ಮಣ್ಣು ತೆರವುಗೊಳಿಸಲಾಗಿದೆ. ಈ ದುರ್ಗಮ ಪ್ರದೇಶದಲ್ಲಿ ಮಣ್ಣು ತೆರವುಗೊಳಿಸಲು ಸಿಬ್ಬಂದಿ ತೀವ್ರ ಪ್ರಯತ್ನ ನಡೆಸಿದ್ದಾಗಿ ರೈಲ್ವೆ ಇಲಾಖೆ ಮೂಲಗಳು ತಿಳಿಸಿವೆ.

ಇದರಿಂದಾಗಿ ನಿಜಾಮುದ್ದೀನ್ ಮತ್ತು ಗೋವಾ ನಡುವಿನ ವಿಶೇಷ ಎಕ್ಸ್ ಪ್ರೆಸ್ ರೈಲು ಸಂಚಾರದಲ್ಲಿ ವ್ಯತ್ಯವಾಗಿತ್ತು. ರೈಲಿನಲ್ಲಿದ್ದ ಪ್ರಯಾಣಿಕರನ್ನು ಬಸ್ ವ್ಯವಸ್ಥೆ ಮಾಡಿ ಅವರ ಊರುಗಳಿಗೆ ಕಳುಹಿಸಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com