ಆಸ್ಪತ್ರೆಯಿಂದಲೇ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ವೀಕ್ಷಿಸಿದ ಯಡಿಯೂರಪ್ಪ

ಕೊರೋನಾ ಪಾಸಿಟಿವ್ ನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ಅಯೋಧ್ಯೆ ಭೂಮಿಪೂಜೆಯನ್ನು ವೀಕ್ಷಣೆ ಮಾಡಿದರು. 
ಯಡಿಯೂರಪ್ಪ
ಯಡಿಯೂರಪ್ಪ
Updated on

ಬೆಂಗಳೂರು: ಕೊರೋನಾ ಪಾಸಿಟಿವ್ ನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಸ್ಪತ್ರೆಯಿಂದಲೇ ಅಯೋಧ್ಯೆ ಭೂಮಿಪೂಜೆಯನ್ನು ವೀಕ್ಷಣೆ ಮಾಡಿದರು. 

ಬೆಳಗಿನ ಉಪಹಾರ ಮತ್ತು ಆರೋಗ್ಯ ತಪಾಸಣೆ ಬಳಿಕ ತಮ್ಮ ಕೊಠಡಿಯಲ್ಲಿರುವ ಟಿವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ವಿಧಿವಿಧಾನಗಳನ್ನು ವೀಕ್ಷಣೆ ಮಾಡಿದರು. 

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಅಯೋಧ್ಯೆ ರಾಮಮಂದಿರ ಭೂಮಿಪೂಜೆ ಕುರಿತು ಟ್ವೀಟ್ ಮಾಡಿದ್ದ ಯಡಿಯೂರಪ್ಪ ಅವರು, ಅಯೋಧ್ಯೆಯ ಶ್ರೀ ರಾಮಜನ್ಮಭೂಮಿಯಲ್ಲಿಯೇ ಶ್ರೀ ರಾಮಲಲ್ಲಾನ ದಿವ್ಯ, ಭವ್ಯ ಮಂದಿರ ನಿರ್ಮಾಣವಾಗಬೇಕು ಎನ್ನುವ ಬಿಜೆಪಿಯ ಬದ್ಧತೆ ಹಿಂದೆ ನಿರಂತರ ಹೋರಾಟವಿದೆ,ತ್ಯಾಗ ಬಲಿದಾನಗಳಿವೆ. ಇಂದು ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಧನ್ಯತೆಯ ಕ್ಷಣಗಳಲ್ಲಿ,ಕರಸೇವೆಯ ಆ ದಿನಗಳು ಮತ್ತೆ ನೆನಪಾಗುತ್ತಿದೆ.ಅಂದಿನ ಕೆಲವು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದೇನೆಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com