ಮಾವುತನನ್ನೇ ತುಳಿದು ಕೊಂದ ಆನೆ: ಮೈಸೂರು ಮೃಗಾಲಯದಲ್ಲಿ ದುರ್ಘಟನೆ

ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿ ದುರಂತ ಸಂಭವಿಸಿದ್ದು, ಆನೆಯೊಂದು ತನ್ನ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ನಡೆದಿದೆ.
ಆನೆ ಜೊತೆ ಮಾವುತ ಹರೀಶ್
ಆನೆ ಜೊತೆ ಮಾವುತ ಹರೀಶ್

ಮೈಸೂರು: ವಿಶ್ವವಿಖ್ಯಾತ ಚಾಮರಾಜೇಂದ್ರ ಮೃಗಾಲಯದಲ್ಲಿ ದುರಂತ ಸಂಭವಿಸಿದ್ದು, ಆನೆಯೊಂದು ತನ್ನ ಮಾವುತನನ್ನೇ ತುಳಿದು ಸಾಯಿಸಿರುವ ಘಟನೆ ನಡೆದಿದೆ.

ಹರೀಶ್ (38) ಮೃತಪಟ್ಟ ಮಾವುತ. ಅಭಿಮನ್ಯು ಹೆಸರಿನ ಆನೆಗೆ ಶುಕ್ರವಾರ ಮಧ್ಯಾಹ್ನ ಹರೀಶ್‌ ಅವರು ಹುಲ್ಲು ಹಾಕಿ ಗಾಯ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಹರೀಶ್‌ ಅವರನ್ನು ಸೊಂಡಿಲಿನಿಂದ ಎತ್ತಿ ಕೆಳಕ್ಕೆ ಹಾಕಿ ತುಳಿದಿದೆ.

ಈ ವಿಚಾರ ತಿಳಿದ ಕೂಡಲೇ ಅಲ್ಲಿದ್ದ ಸಿಬ್ಬಂದಿ ಹರೀಶ್‌ ಅವರನ್ನು ಆನೆಯಿಂದ ಬಿಡಿಸಿಕೊಂಡು ಕೂಡಲೇ ಗೋಪಾಲಗೌಡ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಹರೀಶ್‌ ಮೃತಪಟ್ಟಿದ್ದಾರೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರ್ಣಿ ಮಾಹಿತಿ ನೀಡಿದ್ದಾರೆ.

"ಹರೀಶ್ ಅವರು 16 ವರ್ಷದ ಅಭಿಮನ್ಯು ಆನೆಯನ್ನು ಬಹಳ ಸಮಯದಿಂದ ನೋಡಿಕೊಳ್ಳುತ್ತಿದ್ದರು. ಆದರೆ, ಶುಕ್ರವಾರ ಸಂಜೆ ಆನೆಯ ಗಾಯವನ್ನು ಸ್ವಚ್ಛಗೊಳಿಸುವಾಗ ಆಕಸ್ಮಿಕವಾಗಿ ಅವರ ಮೇಲೆ ಹಲ್ಲೆ ನಡೆಸಿದೆ. ಅವರು 2002 ರಿಂದ ಮೈಸೂರು ಮೃಗಾಲಯದಲ್ಲಿ ಕೆಲಸ ಮಾಡುತ್ತಿದ್ದರು. ಪ್ರಾಣಿಗಳನ್ನು ವಿಶೇಷವಾಗಿ ಆನೆಗಳನ್ನು ನೋಡಿಕೊಳ್ಳುತ್ತಿದ್ದರು ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com