ಹಾವೇರಿ: ವರದಾ ನದಿಯಲ್ಲಿ ಕೊಚ್ಚಿ ಹೋದ 28 ವರ್ಷದ ಯುವಕ

ನದಿಯಲ್ಲಿ ಸಿಲುಕಿಕೊಂಡಿದ್ದ ಎಮ್ಮೆಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ 28 ವರ್ಷದ ಯುವಕನೊಬ್ಬ ಭಾನುವಾರ ಜಿಲ್ಲೆಯ ಹಾನಗಲ್‍ ತಾಲ್ಲೂಕಿನ ವರದಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಹಾವೇರಿ: ವರದಾ ನದಿಯಲ್ಲಿ ಕೊಚ್ಚಿ ಹೋದ 28 ವರ್ಷದ ಯುವಕ
Updated on: 

ಹಾವೇರಿ: ನದಿಯಲ್ಲಿ ಸಿಲುಕಿಕೊಂಡಿದ್ದ ಎಮ್ಮೆಗಳನ್ನು ರಕ್ಷಿಸಲು ಯತ್ನಿಸುತ್ತಿದ್ದಾಗ 28 ವರ್ಷದ ಯುವಕನೊಬ್ಬ ಭಾನುವಾರ ಜಿಲ್ಲೆಯ ಹಾನಗಲ್‍ ತಾಲ್ಲೂಕಿನ ವರದಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

ಮೃತ ಯುವಕನನ್ನು ಚಂದ್ರಪ್ಪ ದಳವಾಯಿ ಎಂದು ಗುರುತಿಸಲಾಗಿದ್ದು, ನದಿಯ ಮಧ್ಯದಲ್ಲಿ ಸಿಲುಕಿದ್ದ ಐದು ಎಮ್ಮೆಗಳನ್ನು ರಕ್ಷಿಸಲು ಹೋಗಿದ್ದ. ಆದರೆ, ಭಾರಿ ಮಳೆಯಿಂದಾಗಿ ನದಿ ಬಿರುಸಿನಿಂದ ಹರಿಯುತ್ತಿದ್ದರಿಂದ ಯುವಕ ನದಿಯಲ್ಲಿ ಕೊಚ್ಚಿಹೋಗಿದ್ದಾನೆ ಎಂದು ಜಿಲ್ಲೆಯ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ದಳ ಸದಸ್ಯರು ಆಗಮಿಸಿ ಯುವಕನ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಆಡೂರು ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ವರದಿಯಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com