
ಉಡುಪಿ: ನಗರದ ಬೇಕರಿಯೊಂದರಲ್ಲಿ ಓವನ್ ಸ್ಫೋಟಿಸಿದ ಪರಿಣಾಮ ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ.
ಮೃತನನ್ನು ಫುರ್ಟಾಡೊ ಫುಡ್ ಪ್ರಾಡಕ್ಟ್ಸ್ ಮಾಲೀಕ ರಾಬರ್ಟ್ ಫುರ್ಟಾಡೊ(53) ಎಂದು ಗುರುತಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಓವನ್ ನಿರ್ವಹಿಸಲು ರಾಬರ್ಟ್ ಒಲೆಯ ಬಳಿ ಹೋದಾಗ ಈ ಘಟನೆ ನಡೆದಿದೆ. ಓವನ್ ಬಾಗಿಲು ತಕ್ಷಣ ತೆರೆದುಕೊಂಡು ಸ್ಫೋಟಿಸಿದ್ದರಿಂದ ರಾಬರ್ಟ್ ಫುರ್ಟಾಡೊ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ ಈ ಸಂಬಂಧ ಕೋಟಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Advertisement