ಚಿಕ್ಕಮಗಳೂರು: ಶೃಂಗೇರಿ ಪಟ್ಟಣದ ಭಾರತೀ ಬೀದಿಯಲ್ಲಿರುವ ನಾಗಪ್ಪ ಜ್ಯುವೆಲರಿಯಲ್ಲಿ ಹಾಡಹಗಲೇ ಕಳ್ಳತನ ನಡೆದಿದೆ.
ಕಳ್ಳನೊಬ್ಬ ಮುಖಕ್ಕೆ ಮಾಸ್ಕ್ ಧರಿಸಿ ಅಂಗಡಿಯೊಳಗೆ ನುಗ್ಗಿದ್ದು ಮಾರಕಾಸ್ತ್ರ ತೋರಿಸಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.
ಈ ವೇಳೆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ದಿಟ್ಟತನ ತೋರಿಸಿ ಅಲ್ಲೇ ಇದ್ದ ಕುರ್ಚಿಯನ್ನು ಎತ್ತಿಕೊಂಡು ಕಳ್ಳನ ಮೇಲೆ ಬೀಸಿದ್ದಾರೆ. ಈ ವೇಳೆ ಕಳ್ಳ ಅಲ್ಲಿಂದ ಓಡಿ ಹೋಗಿದ್ದಾನೆ.
ಕಳ್ಳ ಲಾಂಗ್ ತೋರಿಸಿದರೂ ಹೆದರದೆ ಮಹಿಳೆ ತೋರಿಸಿದ ದಿಟ್ಟತನದ ವಿಡಿಯೋ ಇದೀಗ ವೈರಲ್ ಆಗಿದೆ.
Advertisement