• Tag results for ಕಳ್ಳತನ

ಕೋಲಾರ: ಚಿನ್ನದ ಅದಿರು ಕದ್ದ ಕಳ್ಳನಿಗೂ ಕೊರೋನಾ ಪಾಸಿಟಿವ್!

ಭಾರತ್ ಗೋಲ್ಡ್ ಮೈನ್ ಲಿಮಿಟೆಡ್ (ಬಿಜಿಎಂಎಲ್) ನ ಸ್ಥಗಿತಗೊಂಡ ಗಣಿಯಿಂದ ಚಿನ್ನದ ಅದಿರು ಕಳ್ಲತನ ಮಾಡಿದ್ದ ಆರೋಪಿಗೆ ಕೊರೋನಾ ದೃಢಪಟ್ಟಿದೆ.  

published on : 17th May 2020

ನಾಲ್ವರು ಕುರಿಗಳ್ಳರನ್ನು ಹಿಡಿದು ಪೊಲೀಸರಿಗೆ ‌ಒಪ್ಪಿಸಿದ ಸ್ಥಳೀಯರು

ಕುರಿಗಳನ್ನು ಕಳ್ಳತನ ಮಾಡಲು ಹೊಂಚುಹಾಕಿದ್ದ ನಾಲ್ವರ ಯುವಕರನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಗದಗ ತಾಲೂಕಿನ ಅಸುಂಡಿ ಗ್ರಾಮದಲ್ಲಿ ನಡೆದಿದೆ.

published on : 16th May 2020

ಹಾಸನ: ಮದ್ಯ ಕಳ್ಳತನಕ್ಕೆ ಹೋಗಿ ಕುಡಿದು ನಿದ್ರೆಗೆ ಜಾರಿ ಪೊಲೀಸರ ಅತಿಥಿಯಾದ ಕುಡುಕ!

ಕುಡಿಯಲು ಮದ್ಯ ಸಿಗದೇ ಬೇಸತ್ತಿದ್ದ ಕಳ್ಳನೊಬ್ಬ ಕುಡಿಯಲು ಬಾರ್‌ಗೆ ನುಗ್ಗಿದ್ದಲ್ಲದೇ ಬಾರ್‌ನಲ್ಲಿಯೇ ಕಂಠಪೂರ್ತಿ ಕುಡಿದು ಅಲ್ಲೇ ನಿದ್ದೆಗೆ ಜಾರಿ‌, ಕೊನೆಗೆ ಬಾರ್‌ನಲ್ಲಿಯೇ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.

published on : 16th April 2020

ಬೆಂಗಳೂರು: ಪೊಲೀಸ್ ವಶದಲ್ಲಿದ್ದ ಕಳ್ಳತನದ ಆರೋಪಿ ಬಾವಿಗೆ ಬಿದ್ದು ಸಾವು

ನಗರದ ಹೊರವಲಯದ ಹೊಸಕೋಟೆಯ ನಡುವತ್ತಿಯ ಬಾರ್‌ನಲ್ಲಿ ಮದ್ಯ ಕಳ್ಳತನ ಮಾಡಿದ್ದ ಆರೋಪಿಯೊಬ್ಬ ಪೊಲೀಸರು ಸ್ಥಳ ಮಹಜರು ಮಾಡಲು ಕರೆದೊಯ್ದ ವೇಳೆ ಬಾವಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.

published on : 11th April 2020

ಕೊಪ್ಪಳ: ಎಣ್ಣೆ ಸಿಗದಿದ್ದಕ್ಕೆ ಬಾರ್‌ಗೆ ಕನ್ನ ಹಾಕಿದ ಕುಡುಕರು!

ಕೊರೋನಾ ವೈರಸ್  ಹರಡದಂತೆ ತಡೆಯುವ ನಿಟ್ಟಿನಲ್ಲಿ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಾಗಿದ್ದು, ಕುಡುಕರಿಗೆ ಎಣ್ಣೆ ಸಿಗದಂತಾಗಿದೆ.  ಇದರಿಂದ ಕಂಗೆಟ್ಟಂತಾಗಿರುವ ಕುಡುಕರು ಕೊಪ್ಪಳದಲ್ಲಿ ಬಾರ್ ಗೆ ಕನ್ನ ಹಾಕಿ, ಸಾವಿರಾರು ಮೌಲ್ಯದ ಮದ್ಯ ಕದ್ದು ಪರಾರಿಯಾಗಿದ್ದಾರೆ.

published on : 5th April 2020

ದಕ್ಷಿಣ ಕನ್ನಡ: ಶಟರ್ ಮುರಿದು ಲಕ್ಷಾಂತರ ಬೆಲೆಯ ಮದ್ಯ ಕಳವು

ಎಂಎಸ್ ಐಎಲ್ ನ ವೈನ್ಸ್ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು ೧ ಲಕ್ಷ ಮೌಲ್ಯದ ಮದ್ಯವನ್ನು ಕಳವುಗೈದಿರುವ ಘಟನೆ ಕುತ್ತಾರು ನಿತ್ಯಾನಂದನಗರದಲ್ಲಿ ಬೆಳಕಿಗೆ ಬಂದಿದೆ.

published on : 3rd April 2020

ಕಳ್ಳತನ ಮಾಡಲು ಮನೆಗೆ ನುಗ್ಗಿ, ಗಡದ್ದಾಗಿ ನಿದ್ದೆ ಮಾಡಿ ಸಿಕ್ಕಿಬಿದ್ದ! 

ವಯಸ್ಕರಿಗೆ 7-8 ಗಂಟೆ ನಿದ್ದೆ ಅಗತ್ಯ ಎನ್ನುತ್ತದೆ ಸಂಶೋಧನೆ, ದಕ್ಷಿಣ ಕನ್ನಡದ ಕಳ್ಳನೊಬ್ಬ ಇದನ್ನು ಗಂಭೀರವಾಗಿ ಪರಿಗಣಿಸಿ, ಕಳ್ಳತನ ಮಾಡಲು ಹೋಗಿ ಗಡದ್ದಾಗಿ ನಿದ್ದೆ ಮಾಡಿದ್ದಾನೆ. 

published on : 29th February 2020

ಕುಂದಾಪುರ: ದೇವಸ್ಥಾನದಲ್ಲಿ 10 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣ ಕಳವು

ಉಡುಪಿ ಜಿಲ್ಲೆಯ ಬೈಂದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬದಕೆರೆಯ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ 10 ಲಕ್ಷ ರೂ. ಮೌಲ್ಯದ ಬೆಳ್ಳಿ ಆಭರಣಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

published on : 27th February 2020

ರಾಜಸ್ಥಾನದಲ್ಲಿ ಅಮಾನವೀಯ ಘಟನೆ: ಕಳ್ಳತನದ ಆರೋಪಿಗಳಿಗೆ ಸ್ಕ್ರೂಡ್ರೈವರ್ ನಿಂದ ಖಾಸಗಿ ಭಾಗಕ್ಕೆ ತಿವಿದು ಚಿತ್ರಹಿಂಸೆ

ಕಳ್ಳತನ ಮಾಡಿದ್ದಾರೆ ಎಂದು ಆರೋಪಿಸಿ ಇಬ್ಬರು ದಲಿತ ಯುವಕರಿಗೆ ಪೆಟ್ರೋಲ್ ನಲ್ಲಿ ಅದ್ದಿದ ಸ್ಕ್ರೂಡ್ರೈವರ್ ನಿಂದ ಖಾಸಗಿ ಭಾಗಕ್ಕೆ ತಿವಿದು ಚಿತ್ರಹಿಂಸೆ ನೀಡಿದ ಅಮಾನವೀಯ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.

published on : 20th February 2020

ಸ್ವಾಮೀಜಿ ವೇಷದಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರ ಬಂಧನ: 180 ಗ್ರಾಂ ಚಿನ್ನಾಭರಣ ವಶ

ಸ್ವಾಮೀಜಿ ವೇಷ ಧರಿಸಿ ಪೂಜೆ ಮಾಡುವ ನೆಪದಲ್ಲಿ ಮನೆಗಳಿಗೆ ಬಂದು, ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿ, 180 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ನಾಗರಾಜ್, ಲಕ್ಷ್ಮಣ್ ಬಂಧಿತ ಆರೋಪಿಗಳು.

published on : 20th February 2020

ಮದುವೆ ಸಂಭ್ರಮದಲ್ಲಿದ್ದ ಹೊಸೂರ ಕುಟುಂಬಸ್ಥರು, ನೆಂಟರ ನೆಪದಲ್ಲಿ ಬಂದು ಚಿನ್ನ ಕದ್ದ ಖದೀಮ

ನೆಂಟರ ನೆಪದಲ್ಲಿ ಮದುವೆ ಮಂಟಪಕ್ಕೆ ಬಂದು ಚಿನ್ನ ಕದ್ದ ಘಟನೆ ಬಾಗಲಕೋಟೆಲ್ಲಿ ನಡೆದಿದೆ.

published on : 17th February 2020

ಸಾಗರದಲ್ಲಿ ಗಂಧದ ದಾಸ್ತಾನಿಗೆ ಕನ್ನ; ಭದ್ರತಾ ಸಿಬ್ಬಂದಿ ಹತ್ಯೆ

ಸಾಗರದ ಅರಣ್ಯ ಇಲಾಖೆಯ ದಾಸ್ತಾನು ಕೇಂದ್ರದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿರುವ ದರೋಡೆಕೋರರು ಗಂಧದ ಕೊರಡುಗಳನ್ನು ಹೊತ್ತೊಯ್ದಿದ್ದಾರೆ. 

published on : 8th February 2020

ಸಿನಿಮೀಯ ರೀತಿಯಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರ ಬಂಧನ

ಸಿನಿಮೀಯ ರೀತಿಯಲ್ಲಿ ಸಿಸಿಟಿವಿಗೆ ಚೂಯಿಂಗ್ ಗಮ್ ಅಂಟಿಸಿ ಎಟಿಎಂ ಕಳ್ಳತನಕ್ಕೆ ಯತ್ನಿಸಿದ ಇಬ್ಬರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

published on : 27th January 2020

ನಿಪ್ಪಾಣಿ: ಪೊಲೀಸರಿಗೆ ತಲೆಬೇನೆಯಾಗಿದ್ದ ಕಳ್ಳನ ಬಂಧನ, 1.78 ಕೋಟಿ ರೂ ಮಾಲುಗಳ ವಶ

ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ಕಳ್ಳನನ್ನು  ಬಂಧಿಸಿ ಆತನಿಂದ ೧.೭೮ ಕೋಟಿ ರೂಪಾಯಿ ಮೌಲ್ಯದ ವಾಹನಗಳನ್ನು ವಶೊಡಿಸಿಕೊಂಡ ಘಟನೆ ನಿಪ್ಪಾಣಿ ಯಲ್ಲಿ ನಡೆದಿದೆ.   

published on : 24th January 2020

ಪ್ರವಾಸಿಗನ ಸೋಗಿನಲ್ಲಿ 22 ಲಕ್ಷ ರೂ ಮೌಲ್ಯದ ಕಾರು ಕಳವು ಮಾಡಿದ್ದ ಆರೋಪಿ ಬಂಧನ

ಇತ್ತೀಚೆಗಷ್ಟೇ ಪ್ರವಾಸಿಗನ ಸೋಗಿನಲ್ಲಿ ಟ್ರಾವೆಲ್​​ವೊಂದಕ್ಕೆ‌ ಕರೆ‌  ಮಾಡಿ‌ 22 ಲಕ್ಷ ರೂ ಮೌಲ್ಯದ  ಕಾರು ಕಳವು ಮಾಡಿದ್ದ ಆರೋಪಿಯನ್ನು ಬ್ಯಾಟರಾಯನಪುರ‌  ಪೊಲೀಸರು ಬಂಧಿಸಿದ್ದಾರೆ.

published on : 7th January 2020
1 2 3 >