ಬೆಂಗಳೂರು: ಕಳ್ಳತನಕ್ಕೆ ಬಂದು ಸಿಕ್ಕಿಬಿದ್ದ ಖದೀಮ , ತಪ್ಪಿಸಿಕೊಳ್ಳಲು ಯುವತಿಯನ್ನ ನಡುರಸ್ತೆಯಲ್ಲಿ ಎಳೆದಾಡಿ ರಂಪಾಟ; ವಿಡಿಯೋ ವೈರಲ್

ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಆರೋಪಿ ಅಂಗಡಿಯಲ್ಲಿದ್ದ ಯುವತಿಯೊಬ್ಬಳನ್ನು ಎಳೆದಾಡಿದ್ದಾನೆ. ಅಲ್ಲದೆ, ತನ್ನನ್ನು ಹಿಡಿಯಲು ಯಾರಾದರೂ ಬಂದರೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.
representational image
ಸಾಂದರ್ಭಿಕ ಚಿತ್ರOnline Desk
Updated on: 

ಬೆಂಗಳೂರು: ಕಳ್ಳತನಕ್ಕೆ ಬಂದು ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಯುವಕನೊಬ್ಬ ತಪ್ಪಿಸಿಕೊಳ್ಳಲು ಯುವತಿಯನ್ನೇ ನಡು ರಸ್ತೆಯಲ್ಲಿ ಎಳೆದಾಡಿ ಬೆದರಿಸಿರುವ ಘಟನೆ ಬೆಂಗಳೂರಿನ ಇಂದಿರಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನನ್ನನ್ನು ಹಿಡಿಯಲು ಬಂದರೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆಯ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಪ್ರಭುರಾಜ್ ಅಲಿಯಾಸ್ ರಾಜ್ ಬಂಧಿತ ಆರೋಪಿ. ಈತ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ನಾಲ್ಕು ದಿನಗಳ ಹಿಂದೆ ಕಳ್ಳತನಕ್ಕೆ ಬಂದಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಸಾರ್ವಜನಿಕರಿಂದ ತಪ್ಪಿಸಿಕೊಳ್ಳಲು ಆರೋಪಿ ಅಂಗಡಿಯಲ್ಲಿದ್ದ ಯುವತಿಯೊಬ್ಬಳನ್ನು ಎಳೆದಾಡಿದ್ದಾನೆ. ಅಲ್ಲದೆ, ತನ್ನನ್ನು ಹಿಡಿಯಲು ಯಾರಾದರೂ ಬಂದರೆ ಯುವತಿಯನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ.

ಆರೋಪಿಯ ಉಪಟಳ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕರು ಆತನ ಮೇಲೆ ದಾಳಿ ಮಾಡಿ ಹಿಡಿದಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡ ಇಂದಿರಾನಗರ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

representational image
ಐಷಾರಾಮಿ ಮಾಲ್‌ನಲ್ಲಿ ದಿನಸಿ ಕಳ್ಳತನ: ತುಪ್ಪ, ಎಣ್ಣೆ ಎಗರಿಸಲು ಹೋಗಿ ಮಹಿಳೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಮಹಿಳೆ; Video ವೈರಲ್..!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X