

ಪಾಟ್ನ: ಬಿಹಾರದ ಮುಂಗೇರ್ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆಯಿಂದ ವಶಪಡಿಸಿಕೊಳ್ಳಲಾಗಿದ್ದ, ಠಾಣೆಯ ಆವರಣದಲ್ಲಿರಿಸಲಾಗಿದ್ದ ಸ್ಟೋನ್ ಚಿಪ್ಸ್ ತುಂಬಿದ್ದ ಟ್ರಕ್ ಕಳ್ಳತವನಾಗಿದೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಸ್ಟೋನ್ ಚಿಪ್ಸ್ ತುಂಬಿದ್ದ ಟ್ರಕ್ ಅನ್ನು ಕಳೆದ ತಿಂಗಳು ಜಿಲ್ಲಾ ಗಣಿಗಾರಿಕೆ ಅಧಿಕಾರಿಗಳು ವಶಪಡಿಸಿಕೊಂಡು ಮುಫಾಸಿಲ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು.
ಮುಂಗೇರ್ ಎಸ್ಪಿ ಇಮ್ರಾನ್ ಮಸೂದ್ ಪಿಟಿಐ ಜೊತೆ ಮಾತನಾಡಿದ್ದು, "ಶನಿವಾರ ಪೊಲೀಸ್ ಠಾಣೆ ಆವರಣದಿಂದ ಟ್ರಕ್ ಕಾಣೆಯಾಗಿದೆ ಎಂದು ನಮಗೆ ತಿಳಿದುಬಂದಿದೆ. ಸಂಬಂಧಪಟ್ಟ ಎಸ್‌ಎಚ್‌ಒ ಮತ್ತು ಗಣಿಗಾರಿಕೆ ಅಧಿಕಾರಿಯನ್ನು ತಕ್ಷಣ ಕರೆಸಲಾಯಿತು. ವಶಪಡಿಸಿಕೊಂಡ ಟ್ರಕ್ ಕಾಣೆಯಾಗಿದೆ ಎಂದು ತಮಗೆ ತಿಳಿದಿಲ್ಲ ಎಂದು ಎಸ್‌ಎಚ್‌ಒ ಹೇಳಿದರು.
ಕಳೆದ ತಿಂಗಳು ಗಣಿಗಾರಿಕೆ ಅಧಿಕಾರಿಯಿಂದ ವಶಪಡಿಸಿಕೊಂಡ ಟ್ರಕ್ ಅನ್ನು ಪಡೆದ ಪೊಲೀಸ್ ಠಾಣೆಯ ಸಂಬಂಧಪಟ್ಟ ಸಹಾಯಕ ಸಬ್-ಇನ್‌ಸ್ಪೆಕ್ಟರ್ (ಎಎಸ್‌ಐ) ಅವರನ್ನು ಸಹ ಕರೆಯಲಾಯಿತು."
"ಇದು ಗಂಭೀರ ಘಟನೆಯಾಗಿದ್ದು, ಈ ವಿಷಯದ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖೆಯನ್ನು ರಚಿಸಲಾಗಿದೆ" ಎಂದು ಎಸ್‌ಪಿ ಹೇಳಿದರು. ತನಿಖಾ ವರದಿಯ ಆಧಾರದ ಮೇಲೆ ಭಾಗಿಯಾಗಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.