ದೂರು ನೀಡಿ ಹಲವು ಗಂಟೆ ಕಳೆದರೂ ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿತ್ತು: ಎಸ್'ಡಿಪಿಐ

ಫೇಸ್ಬುಕ್ ನಲ್ಲಿ ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿರುವ ಕುರಿತು ದೂರು ನೀಡಿ ಹಲವು ಗಂಟೆಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿದೆ ಎಂದು ಎಸ್'ಡಿಪಿಐ ಹೇಳಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಫೇಸ್ಬುಕ್ ನಲ್ಲಿ ಇಸ್ಲಾಂ ಧರ್ಮ ಗುರು ಮಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿರುವ ಕುರಿತು ದೂರು ನೀಡಿ ಹಲವು ಗಂಟೆಗಳು ಕಳೆದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗಲಭೆ ಸೃಷ್ಟಿಯಾಗಿದೆ ಎಂದು ಎಸ್'ಡಿಪಿಐ ಹೇಳಿದೆ. 

ಬೆಂಗಳೂರು ಗಲಭೆ ಕುರಿತು ಹೇಳಿಕೆ ನೀಡಿರುವ ಕರ್ನಾಟಕದ ಎಸ್'ಡಿಪಿಐ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಣ್ಣನ್ ಅವರು, ಗಲಭೆ ಪ್ರಕರಣಕ್ಕೆ ಎಸ್'ಡಿಪಿಐ ಖಂಡನೆ ವ್ಯಕ್ತಪಡಿಸುತ್ತದೆ. ಫೇಸ್ಬುಕ್ ನಲ್ಲಿ ಪ್ರಕಟಗೊಂಡಿದ್ದ ಪೋಸ್ಟ್ ಕುರಿತು ಎಸ್'ಡಿಪಿಐ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ರಾತ್ರಿ 7 ಗಂಟೆಗೆ ದೂರು ನೀಡಿತ್ತು. ದೂರು ಸ್ವೀಕರಿಸಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಹಾಗೂ ಎಸಿಪಿ 2 ಗಂಟೆ ಕಾಯುವಂತೆ ತಿಳಿಸಿತ್ತು. ಆದರೆ. 11.30 ಆದರೂ ಪೊಲೀಸರು ನವೀನ್'ನ್ನು ಬಂಧನಕ್ಕೊಳಪಡಿಸಲಿಲ್ಲ. ಇದರಿಂದ ಪರಿಸ್ಥಿತಿ ಹದಗೆಟ್ಟಿತ್ತು ಎಂದು ಹೇಳಿದ್ದಾರೆ. 

ಗಲಭೆ ವೇಳೆ ಪೊಲೀಸರು ಗೋಲಿಬಾರ್ ನಡೆಸಿದ್ದು. ಇದರಿಂದ ಮೂವರು ಮುಗ್ಧರು ಅಸುನೀಗಿದ್ದಾರೆ. ಪೊಲೀಸರು ಸೂಕ್ತ ಸಮಯಕ್ಕೆ ಜವಾಬ್ದಾರಿಯುತವಾಗಿ ವರ್ತಿಸಿದ್ದರೆ. ಈ ಘಟನೆ ನಡೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. 

ಈ ಹಿಂದೆ ಸಾಮಾಜಿಕ ಜಾಲತಾಣವೊದರಲ್ಲಿ ಸ್ಥಳೀಯ ಯುವಕನೊಬ್ಬ ಹೇಳಿಕೆ ನೀಡಿದ ಕಾರಣ ಆತನನ್ನು ಪೊಲೀಸರು 10 ನಿಮಿಷಗಳಲ್ಲಿ ಬಂಧಿಸಿದ್ದರು. ಆದರೆ, ಈ ಪ್ರಕರಣದಲ್ಲಿ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿದು ವಿಳಂಬ ನೀತಿ ಅನುಸರಿಸಲು ಆರಂಭಿಸಿದ್ದರು ಕಿಡಿಕಾರಿದ್ದಾರೆ. 

ಇದೇ ವೇಳೆ ಘಟನೆಯಲ್ಲಿ ತಮ್ಮನ್ನು ಅನಗತ್ಯವಾಗಿ ಪೊಲೀಸರು ಎಳೆಯುತ್ತಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ವಾಸ್ತವವಾಗಿ ಹೇಳಬೇಕೆಂದರೆ, ಎಸ್'ಡಿಪಿಐ ನಾಯಕರೇ ಪೊಲೀಸರು ಹಾಗೂ ಸ್ಥಳೀಯರನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ. ನವೀನ್ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳಬೇದು. ಘಟನೆಯಲ್ಲಿ ಬೇಜವಾಬ್ದಾರಿತನದಿಂದ ವರ್ತಿಸಿದವರನ್ನು ಕರ್ತವ್ಯದಿಂದ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com