ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಂಚೂಣಿಗೆ ಬಂದ ಕರ್ನಾಟಕದ ಮಹಿಳಾ ಶಕ್ತಿ 

ಕೇವಲ ರಾಣಿಯರು ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಹಲವು ಮಹಿಳೆಯರು ಭಾಗಿಯಾಗಿದ್ದರು
ಮಹಿಳಾ ಶಕ್ತಿ
ಮಹಿಳಾ ಶಕ್ತಿ
Updated on

ಬೆಂಗಳೂರು: ಕೇವಲ ರಾಣಿಯರು ಮಾತ್ರವಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಕರ್ನಾಟಕದ ಹಲವು ಮಹಿಳೆಯರು ಭಾಗಿಯಾಗಿದ್ದರು.

ಗೌರಮ್ಮ ವೆಂಕಟ ರಾಮಯ್ಯ ಅವರು ‘ತೆರಿಗೆ ರಹಿತ ಅಭಿಯಾನ’ದಲ್ಲಿ ಮುಂಚೂಣಿಯಲ್ಲಿದ್ದರು,1938 ಏಪ್ರಿಲ್ 9 ರಂದು ನಡೆದ ಶಿವಪುರ ಧ್ವಜ ಸತ್ಯಾಗ್ರಹದಲ್ಲಿ ಯಶೋಧರ ದಾಸಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಗೆ ರಕ್ಷಣೆ ನೀಡಲು ಮತ್ತು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಭಗಿನಿ ಮಂಡಳಿನ್ನು ಉಮಾಬಾಯಿ ಕುಂದಾಪುರ ಸ್ಥಾಪಿಸಿದರು. ಅದೇ ರೀತಿ ಲೀಲಾವತಿ  ಮಾಗಡಿ, ಶಕುಂತಲಾ ಕುರ್ತಕೋಟಿ, ಮತ್ತು ನಾಗಮ್ಮ ಪಾಟೀಲ್ ಮುಂತಾದ ಮಹಿಳೆಯರು ಸ್ವಾತಂತ್ರ್ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಮತ್ತು ಬ್ರಿಟಿಷ್ ಆಡಳಿತದಿಂದ ದೇಶವನ್ನು ಮುಕ್ತಗೊಳಿಸುವ ಅವರ ಉಪಕ್ರಮದಿಂದಾಗಿ ಒಂದು ಸಣ್ಣ ಸ್ಥಳವು ಇತಿಹಾಸದ ಪುಟಗಳಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಗಳಿಸಿದೆ.  1824 ರಲ್ಲಿ ಪತಿ ಮತ್ತು ಮಗನ ಮರಣದ ನಂತರ ತನ್ನ ಪ್ರದೇಶವನ್ನು ಬ್ರಿಟಿಷರಿಗೆ ಹಸ್ತಾಂತರಿಸಬೇಕಾಯಿತು. ಬ್ರಿಟಿಷರನ್ನು ಒಮ್ಮೆ ಸೋಲಿಸಿದ ನಂತರ, ಯುದ್ಧವು ನಿಲ್ಲುತ್ತದೆ ಎಂದು ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಳು. ಆದರೆ ಬ್ರಿಟಿಷರು ಮತ್ತೆ ಕಿತ್ತೂರಿನ ಮೇಲೆ ದಾಳಿ ನಡೆಸಿದರು.   ಬ್ರಿಟಿಷರೊಂದಿಗಿನ ಎರಡನೇ ಯುದ್ಧ, ಚೆನ್ನಮ್ಮ ಧೈರ್ಯದಿಂದ ಹೋರಾಡಿದಳು ಆದರೆ ಬೈಲಾಹೊಂಗಲದಲ್ಲಿ ಸೆರೆಹಿಡಿಯಲ್ಪಟ್ಟಳು. ಅವಳು ಬಂಧನದಲ್ಲಿದ್ದಾಗಲೇ ಮರಣಹೊಂದಿದಳು. ಚನ್ನಮ್ಮ ಉತ್ತರಾಧಿಕಾರಿ ಸಂಗೊಳ್ಳಿ ರಾಯಣ್ಣ ಅವನನ್ನು ಸೆರೆಹಿಡಿದು ಸಾಯುವವರೆಗೂ ಬ್ರಿಟಿಷರ ಜೊತೆ ಹೋರಾಡಿದರು.

ಅಬ್ಬಕ್ಕ ರಾಣಿ ಅಥವಾ 'ಅಬ್ಬಕ್ಕ ಮಹಾದೇವಿ' ತುಳುನಾಡಿನ ರಾಣಿಯಾಗಿದ್ದಳು.  ಪೋರ್ಚುಗೀಸರೊಡನೆ ಹೋರಾಡಿದಳು. ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶ ಹೊನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ರಾಜಧಾನಿಯಾಗಿದ್ದಿತು. ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನೆಡೆಸಿದರು. ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ
ರಾಣಿಎಂದು ಹೆಸರಾಗಿದ್ದಳು. ವಸಾಹತುಶಾಷಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಳು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com