ಶೌರ್ಯ ಪ್ರಶಸ್ತಿ ಪಡೆದ ರಾಜ್ಯದ ನಾಗರೀಕ ರಕ್ಷಣಾ ಅಧಿಕಾರಿ ಡಾ.ಪಿ.ಆರ್.ಎಸ್.ಚೇತನ್

ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ ನಾಗರೀಕ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿತ್ತಿರುವ ಡಾ.ಪಿ.ಆರ್.ಎಸ್ ಚೇತನ್ ಅವರು ಭಾಜನರಾಗಿದ್ದಾರೆ. 
ಡಾ.ಪಿ.ಆರ್.ಎಸ್.ಚೇತನ್
ಡಾ.ಪಿ.ಆರ್.ಎಸ್.ಚೇತನ್

ಬೆಂಗಳೂರು: ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೀಡುವ ರಾಷ್ಟ್ರಪತಿ ಪದಕಕ್ಕೆ ರಾಜ್ಯದ ನಾಗರೀಕ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿತ್ತಿರುವ ಡಾ.ಪಿ.ಆರ್.ಎಸ್ ಚೇತನ್ ಅವರು ಭಾಜನರಾಗಿದ್ದಾರೆ. 

ಕಮಾಂಡಿಂಗ್ ಕ್ವಿಕ್ ರೆಸ್ಪಾನ್ಟ್ ಟೀಮ್ (ಕ್ಯೂಆರ್'ಟಿ), ನಾಗರೀಕ ರಕ್ಷಣಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಚೇತನ್ ಅವರು ಹಾಗೂ ಅವರ ತಂಡ ಕಳೆದ ವರ್ಷ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ವೇಳೆ ತುಂಗಭದ್ರಾ ನದಿ ಬಳಿ ಸಂಕಷ್ಟಕ್ಕೆ ಸಿಲುಕಿದ್ದ 186 ಮಂದಿಯನ್ನು ರಕ್ಷಣೆ ಮಾಡಿದ್ದರು. ಕಳೆದ 50 ವರ್ಷಗಳಲ್ಲಿ ನಾಗರೀಕ ರಕ್ಷಣೆಗೆ ಬಂದಿರುವ ಮೊದಲ ಪ್ರಶಸ್ತಿ ಇದಾಗಿದೆ. 

ನದಿಯಲ್ಲಿ ಮೊಸಳೆಗಳ ಸಂಖ್ಯೆ ಹೆಚ್ಚಾಗಿದ್ದು, ಈ ವೇಳೆ ಜನರನ್ನು ರಕ್ಷಣೆ ಮಾಡಿದ ಪರಿಯನ್ನು ಚೇತನ್ ಅವರು ವಿವರಿಸಿದ್ದಾರೆ. 

ಸುಮಾರು 200ಕ್ಕೂ ಹೆಚ್ಚು ವಿದೇಶಿ ಪ್ರವಾಸಿಗರು ವಿರೂಪುಪುರ ಗಡ್ಡೆಯ ಹಿಪ್ಪಿ ದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದರು. ವಿಮಾನ ಅಥವಾ ನದಿಗೆ ಅಡ್ಡಲಾಗಿ ನಿಂತು ರಕ್ಷಣೆ ಮಾಡುವುದಷ್ಟೇ ನಮ್ಮ ಬಳಿಯಿದ್ದ ಆಯ್ಕೆಯಾದಿತ್ತು. ಈ ವೇಳೆ ನಾವು 186 ಮಂದಿಯನ್ನು ರಕ್ಷಣೆ ಮಾಡಿದ್ದೆವು. ಉಳಿದವರನ್ನು ವಿಮಾನ ಮೂಲಕ ರಕ್ಷಣೆ ಮಾಡಿದ್ದೆವು ಎಂದು ಚೇತನ್ ಅವರು ತಿಳಿಸಿದ್ದಾರೆ. 

ಕಾರ್ಯಾಚರಣೆ ವೇಳೆ ನಾಗರಿಕ ರಕ್ಷಣಾ ಪಡೆಯ 12 ಮಂದಿ ಸಿಬ್ಬಂದಿ ಮತ್ತು ರಾಷ್ಟ್ರೀಯ ವಿಪತ್ತು ಪಡೆಯ 20 ಮಂದಿ ಸದಸ್ಯರಿದ್ದರು. ನಾಲ್ವರು ಯೋಧರು ದೋಣಿಯಲ್ಲಿದ್ದರು. ಆ ದೋಣಿ ಮುಳುಗಿ ಹೋಗಿತ್ತು. ಇಬ್ಬರು ಯೋಧರು ಲೈಫ್ ಜಾಕೆಟ್ ಗಳನ್ನು ಹಿಡಿದು ಜನರನ್ನು ದಡಕ್ಕೆ ಸೇರಿಸುವ ಕಾರ್ಯ ಮಾಡಿದ್ದರು. ಒಬ್ಬ ವ್ಯಕ್ತಿ ಮರವೇರಿ ಕುಳಿತಿದ್ದರು. ಅವರನ್ನು ವಿಮಾನದ ಮೂಲಕ ರಕ್ಷಣೆ ಮಾಡಲಾಗಿತ್ತು. ರಕ್ಷಣಾ ಕಾರ್ಯಾಚರಣೆ ವೇಳೆ ನಾನು ನೀರಿನಲ್ಲಿ ಕೊಚ್ಚಿ ಹೋಗಿದ್ದೆ, ಈಜಿ ದಡ ಸೇರಲು ನಾಲ್ಕೂವರೆ ಗಂಟೆ ಕಾಲ ಬೇಕಾಯಿತು. 

ಅದೃಷ್ಟವಶಾತ್ ನಾನು ಲೈಫ್ ಜಾಕೆಟ್ ಹಾಕಿದ್ದರಿಂದ ಬದುಕುಳಿದೆ. ದಡ ಸೇರಿದ ಬಳಿಕ ಕೆಲ ಸಮಯದವರೆಗೂ ನನಗೇನೂ ಕೇಳಿಸುತ್ತಿರಲಿಲ್ಲ. ನೀರಿನಲ್ಲಿದ್ದಾಗ ಶಬ್ಧ ಮಾಡಿದರೂ ಯಾರಿಗೂ ಕೇಳಿಸುತ್ತಿರಲಿಲ್ಲ. ಪೂರ್ಣ ಪ್ರಮಾಣದಲ್ಲಿ ಗಾಯಗೊಂಡಿದ್ದೆ. ಬಳಿಕ ಗ್ರಾಮಸ್ಥರು ನನ್ನನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ಸಾಗಿಸಿದ್ದರು. ಆಸ್ಪತ್ರೆಯಲ್ಲಿ 2 ದಿನಗಳ ಕಾಲ ಉಳಿದಿದ್ದೆ. ನದಿಯಲ್ಲಿದ್ದ ಸಂದರ್ಭದಲ್ಲಿ ಸಾವನ್ನು ನನ್ನ ಕಣ್ಣ ಮುಂದೆ ನೋಡಿದ್ದೆ. ನನ್ನ ಜೀವ ಇರುವವರೆಗೂ ನನ್ನಿಂದ  ಸಾಧ್ಯವಾದಷ್ಟು ಜನರನ್ನು ನಾನು ರಕ್ಷಣೆ ಮಾಡುತ್ತೇನೆ. ಇದು ದೇಶಕ್ಕಾಗಿ ನಾನು ಮಾಡುವ ಸೇವೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com