ರಾಜ್ಯದ ಇನ್ನೊಬ್ಬ ಸಂಸದರಿಗೂ ಕೊರೋನಾ ಪಾಸಿಟಿವ್

ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಂತರ ಇದೀಗ ರಾಜ್ಯದ ಇನ್ನೊಬ್ಬಸಂಸದರಿಗೂ ಕೋವಿಡ್ ಸೋಂಕು ದೃಢವಾಗಿದೆ.
ಸಂಗಣ್ಣ ಕರಡಿ
ಸಂಗಣ್ಣ ಕರಡಿ
Updated on

ಕೊಪ್ಪಳ: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಂತರ ಇದೀಗ ರಾಜ್ಯದ ಇನ್ನೊಬ್ಬಸಂಸದರಿಗೂ ಕೋವಿಡ್ ಸೋಂಕು ದೃಢವಾಗಿದೆ.

ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರಿಗೆ ಕೊರೋನಾವೈರಸ್ ಸೋಂಕು ದೃಢವಾಗಿದ್ದು ಅದರ ಸಂಬಂಧ ಸಂಸದ ಸ್ವತಃ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

"ನನ್ನ ಕರೋನ ಪರೀಕ್ಷಾ ವರದಿಯಲ್ಲಿ ಪಾಸಿಟಿವ್ ಎಂದು ಬಂದಿದ್ದು, ವೈದ್ಯರ ಸಲಹೆಯಂತೆ ಮನೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದೇನೆ.

"ನನ್ನ ಭೇಟಿಯಾದ ಕಾರ್ಯಕರ್ತರು ಹಾಗೂ ಮುಖಂಡರು ಯಾರಿಗಾದರೂ ಕರೋನಾ ಲಕ್ಷಣ ಬಂದರೆ ತಕ್ಷಣವೇ ಪರೀಕ್ಷೆ ಮಾಡಿಸಿಕೊಳ್ಳಿ.

"ಕ್ಷೇತ್ರದ ಜನರ ತುರ್ತು ಕೆಲಸಗಳಿಗೆ ನನ್ನ ಆಪ್ತ ಸಹಾಯಕರನ್ನು ದೂರವಾಣಿ ಮೂಲಕ ಸಂಪರ್ಕಿಸಬಹುದು." ಸಂಸದ ಕರಡಿ  ಟ್ವೀಟ್ ಮೂಲಕ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com