ಬೆಳ್ತಂಗಡಿ: ಆಸ್ತಿಗಾಗಿ ಜಗಳ, ಮಗನಿಂದ ತಂದೆಯ ಭೀಕರ ಕೊಲೆ

ಟೂರಿಸ್ಟ್ ಟ್ಯಾಕ್ಸಿ ಚಾಲಕನೊಬ್ಬನನ್ನು ಆತನ ಮಗ ಹಾಗೂ ಇನ್ನೂ ಇಬ್ಬರು ಸೇರಿ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ  ಜೂನಿಯರ್ ಕಾಲೇಜು ರಸ್ತೆ ಬಳಿ ಸೋಮವಾರ (ಆಗಸ್ಟ್ 24) ಬೆಳಿಗ್ಗೆ ನಡೆದಿದೆ,
ಬೆಳ್ತಂಗಡಿ: ಆಸ್ತಿಗಾಗಿ ಜಗಳ, ಮಗನಿಂದ ತಂದೆಯ ಭೀಕರ ಕೊಲೆ
Updated on: 

ಬೆಳ್ತಂಗಡಿ: ಟೂರಿಸ್ಟ್ ಟ್ಯಾಕ್ಸಿ ಚಾಲಕನೊಬ್ಬನನ್ನು ಆತನ ಮಗ ಹಾಗೂ ಇನ್ನೂ ಇಬ್ಬರು ಸೇರಿ ಕ್ರೂರವಾಗಿ ಹತ್ಯೆ ಮಾಡಿರುವ ಘಟನೆ ಬೆಳ್ತಂಗಡಿ  ಜೂನಿಯರ್ ಕಾಲೇಜು ರಸ್ತೆ ಬಳಿ ಸೋಮವಾರ (ಆಗಸ್ಟ್ 24) ಬೆಳಿಗ್ಗೆ ನಡೆದಿದೆ,

ಮೃತನನ್ನು ವಾಸು ಸಪಲ್ಯಾ (65) ಎಂದು ಗುರುತಿಸಲಾಗಿದ್ದು ಅವರು ಬೆಳ್ತಂಗಡಿಯಲ್ಲಿ  ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ಎರಡನೆಯ ಮಗ ದಯಾನಂದ (38)  ಹಾಗೂ ವಾಸು ನಡುವೆ ಆಸ್ತಿಗಾಗಿ ಜಗಳವಿತ್ತು ಎಂದು ಅನುಮಾನವಿದ್ದುದಾಗಿ ಪೋಲೀಸರು ಹೇಳಿದ್ದಾರೆ.

ಕುಡಿತದ ಚಟವುದ್ದ ದಯಾನಂದ ಯಾವಾಗಲೂ  ತಂದೆಯೊಂದಿಗೆ ಜಗಳವಾಡುತ್ತಿದ್ದ. ಈ ವಿಚಾರ ಹಿಂದೆಯೂ ಪೋಲೀಸ್ ಠಾಣೆ ಮೆಟ್ಟಿಲೇರಿತ್ತು. 

ಇಂದು ಬೆಳಿಗ್ಗೆಯಿಂದ ದಯಾನಂದ ನಾಪತ್ತೆಯಾಗಿದ್ದಾನೆ, ತ್ತು ಆತನ ಮೊಬೈಲ್ ಫೋನ್ ಸಹ ಸ್ವಿಚ್ ಆಫ್ ಆಗಿದೆ ಎಂದು ಹೇಳಲಾಗಿದೆ. ತೀವ್ರವಾಗಿ ಗಾಯಗೊಂಡ ವಾಸು  ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ಅವರ ಜೀವ ಉಳಿಸಲಾಗಲಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com