ರಾಜ್ಯ
ಉಡುಪಿ: ಮಲ್ಪೆ ಸಮುದ್ರದಲ್ಲಿ ದೋಣಿ ದುರಂತ, 7 ಮಂದಿ ರಕ್ಷಣೆ
ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರಿಕೃತ ಮೀನುಗಾರಿಕಾ ದೋಣಿ ಬುಧವಾರ ಎರಡು ನಾಟಿಕಲ್ ಮೈಲಿ ದೂರದಲ್ಲಿ ಮಗುಚಿದೆ.
ಉಡುಪಿ: ಮಲ್ಪೆ ಬಂದರಿನಿಂದ ಆಳ ಸಮುದ್ರದ ಮೀನುಗಾರಿಕೆಗೆ ತೆರಳಿದ್ದ ಯಾಂತ್ರಿಕೃತ ಮೀನುಗಾರಿಕಾ ದೋಣಿ ಬುಧವಾರ ಎರಡು ನಾಟಿಕಲ್ ಮೈಲಿ ದೂರದಲ್ಲಿ ಮಗುಚಿದೆ.
ದೋಣಿಯಲ್ಲಿದ್ದ ಎಲ್ಲಾ ಏಳು ಮೀನುಗಾರರನ್ನು ಇತರ ಮೀನುಗಾರಿಕಾ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿ ದಡಕ್ಕೆ ಕರೆತಂದಿದ್ದಾರೆ ಎಂದು ಮಲ್ಪೆ ಬಂದರು ಮೂಲಗಳು ತಿಳಿಸಿವೆ.
ಗಿರೀಶ್ ಸುವರ್ಣ ಎಂಬುವರ ಮಾಲೀಕತ್ವದ ‘ಬಾಹುಬಲಿ’ ಎಂಬ ಹೆಸರಿನ ದೋಣಿ ದುರಂತಕ್ಕೀಡಾಗಿದೆ. ದೋಣಿ ಮಾಲೀಕರಿಗೆ 80 ಲಕ್ಷ ರೂ ನಷ್ಟವಾಗಿದೆಯೆಂದು ಅಂದಾಜಿಸಲಾಗಿದೆ.

