ಬೆಂಗಳೂರು: ನಾಗರಹೊಳೆ ಹುಲಿ ಹಂತಕರನ್ನು ಪತ್ತೆ ಹಚ್ಚಿದ 'ರಾಣಾ'

ನಾಗರಹೊಳೆ  ಹುಲಿ ಸಂರಕ್ಷಣಾ ಪ್ರದೇಶದಲ್ಲಿ 5 ವರ್ಷದ ಗಂಡು ಹುಲಿಯನ್ನು ಕೊಂದಿದ್ದ ಹಂತಕರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯ ಜರ್ಮನ್ ಶೆಪರ್ಡ್ ನಾಯಿ ರಾಣಾ ಸಹಾಯ ಮಾಡಿದೆ.
ರಾಣಾ
ರಾಣಾ
Updated on

ಬೆಂಗಳೂರು: ನಾಗರಹೊಳೆ  ಹುಲಿ ಸಂರಕ್ಷಣಾ ಪ್ರದೇಶದಲ್ಲಿ 5 ವರ್ಷದ ಗಂಡು ಹುಲಿಯನ್ನು ಕೊಂದಿದ್ದ ಹಂತಕರನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯ ಜರ್ಮನ್ ಶೆಪರ್ಡ್ ನಾಯಿ ರಾಣಾ ಸಹಾಯ ಮಾಡಿದೆ.

ಬಂಡಿಪುರ ಹುಲಿ ಸಂರಕ್ಷಣಾ ಅರಣ್ಯದಲ್ಲಿದ್ದ 7 ವರ್ಷದ ಸ್ನಿಫ್ಪರ್ ಡಾಗ್ ರಾಣಾ ನನ್ನು ನಾಗರಹೊಳೆ ಅಭಯಾರಣ್ಯಕ್ಕೆ ಕರೆತರಲಾಗಿತ್ತು.  ಮಂಗಳವಾರ ರಾತ್ರಿ ಹಂತಕರ ಗುಂಡಿಗೆ ಬಲಿಯಾಗಿತ್ತು. 

ಹಂತಕರ ಪತ್ತೆಗಾಗಿ ನಾವು ರಾಣನನ್ನು ಕರೆತಂದಿದ್ದೆವು, ರಾಣಾ ಸಹಾಯದಿಂದ ನಾವು ಬುಧವಾರ ಬೇಟೆಗಾರರನ್ನು ಬಂಧಿಸಿದ್ದೇವೆ,  ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುವ ವ್ಯಕ್ತಿ ಮನೆಯಿಂದ 7 ಕೋರೆ ಹಲ್ಲುಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ಎನ್ ಟಿ ಆರ್ ನಿರ್ದೇಶಕ ಮಹೇಶ್ ತಿಳಿಸಿದ್ದಾರೆ.

ಮೂರು ವರ್ಷಗಳ ವಿಶ್ರಾಂತಿಯ ನಂತರ ರಾಣಾ ಮತ್ತೆ ಇಲಾಖೆ ಕೆಲಸಕ್ಕೆ ಮರಳಿದ್ದಾನೆ. 2017 ರಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ಶ್ರೀಗಂಧ ಕಳ್ಳ ಸಾಗಣೆ ಪ್ರಕರಣದಲ್ಲಿ ಬೇಟೆಗಾರರನ್ನು ಹಿಡಿಯಲು ಸಹಾಯ ಮಾಡಿದ್ದ,  ಬಿಟಿಆರ್‌ನ ಜನಪ್ರಿಯ ಗಂಡು ಹುಲಿಯಾದ ಪ್ರಿನ್ಸ್‌ನ ಉಗುರುಗಳೊಂದಿಗೆ ತಪ್ಪಿಸಿಕೊಂಡವರನ್ನು ಪತ್ತೆಹಚ್ಚಿದ್ದ. ರಾಣಾ ಇದುವರೆಗೆ 15 ಪ್ರಕರಣಗಳನ್ನು ಬಗೆಹರಿಸಿದ್ದಾರೆ.

ಬಂಧಿತ ಸಂತೋಷ್ ಮನೆಯಿಂದ 1.2ಕೆಜಿ ಜಿಂಕೆ ಮಾಂಸ ವಶಪಡಿಸಿಕೊಳ್ಳಲಾಗಿದೆ ಎಂದು ಮಹೇಶ್ ತಿಳಿಸಿದ್ದಾರೆ.ಸಂತೋಷ್ ಮನೆಯಿಂದ ಕಾಟ್ರಿಜ್ ಮತ್ತು ಗುಂಡುಗಳನ್ನು ತಯಾರಿಸಲು ಬಳಸುವ ಕಬ್ಬಿಣದ ಚೆಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಂಕೆಯನ್ನು ಬೇಟೆಯಾಡಲು ಕಾಡಿಗೆ ಹೋಗಿದ್ದ ನಾಲ್ವರು ಸದಸ್ಯರ ತಂಡದಲ್ಲಿ ತಾನು ಕೂಡ ಒಬ್ಬನಾಗಿದ್ದೆ ಎಂದು ಸಂತೋಷ್ ಹೇಳಿದ್ದಾನೆ.

ಪೊದೆಗಳ ಬಳಿ ಮಲಗಿದ್ದ ಹುಲಿಯ ಮೇಲೆ ಅವರು ಎಡವಿ ಬಿದ್ದಿದ್ದರು. ಹುಲಿ ಸತ್ತಿದೆ ಎಂದು ಖಚಿತವಾಗಿಲ್ಲದ ಕಾರಣ ಅವರು ಗುಂಡು ಹೊಡೆದಿದ್ದಾಗಿ ಹೇಳಿದ್ದಾನೆ. ಕೊಡಗಿನ ಕಾಫಿ ಎಸ್ಟೇಟ್ ನಲ್ಲಿ ಶರಣು ಎಂಬಾತ ಹುಲಿ ಉಗುರುಗಳನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾಗಿ ಸಂತೋಷ್ ಹೇಳಿದ್ದಾನೆ.

ಇನ್ನೂ ಉಳಿದ ಮೂವರು ಎಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂಬ ಬಗ್ಗೆ ಮಾಹಿತಿ ಗೊತ್ತಿಲ್ಲ ಎಂದು, ಅವರನ್ನು ಪತ್ತೆ ಹಚ್ಚಲು ನಾವು ಪೊಲೀಸರ ಸಹಾಯ ಕೋರಿರುವುದಾಗಿ ಮಹೇಶ್ ತಿಳಿಸಿದ್ದಾರೆ.

ಹುಲಿ ಕೊಂದಿರುವುದು ತುಂಬಾ ಗಂಭೀರ ವಿಷಯವಾಗಿದ್ದು, ಈ ಪ್ರದೇಶದಲ್ಲಿ ವಾಸವಾಗಿರುವ ಸಿಬ್ಬಂದಿ ಮತ್ತು ನಿವಾಸಿಗಳನ್ನು ವಿಚಾರಣೆ ನಡೆಸುವುದಾಗಿ ವನ್ಯಜೀವಿ ಮಂಡಳಿಯ ವಾರ್ಡನ್ ಅಜಯ್ ಮಿಶ್ರಾ ಹೇಳಿದ್ದಾರೆ. ಸಂತೋಷ್ ನೀಡಿರುವ ಹೇಳಿಕೆಯಿಂದ ಹಲವು ಲೋಪದೋಷಗಳು ಪತ್ತೆಯಾಗಿದ್ದು, ಕ್ಯಾಮೆರಾದಲ್ಲಿರುವ ಚಿತ್ರಗಳಿಂದ ಸ್ವಲ್ಪ ಮಾಹಿತಿ ಲಭ್ಯವಾಗಬಹುದಾಗಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com