ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ ಮರಿಗೆ ನಾಮಕರಣ, ಹೆಸರು ಶಿವಾನಿ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದ ಆನೆ ಲಕ್ಷ್ಮೀಗೆ ಜನಿಸಿದ ಆನೆ ಮರಿಗೆ ಇಂದು ನಾಮಕರಣ ಶಾಸ್ತ್ರ ನಡೆಸಲಾಗಿದ್ದು, ಆನೆ ಮರಿಗೆ ಶಿವಾನಿ ಎಂದು ಹೆಸರಿಡಲಾಗಿದೆ.
ಶಿವಾನಿ ಆನೆ
ಶಿವಾನಿ ಆನೆ
Updated on

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇಗುಲದ ಆನೆ ಲಕ್ಷ್ಮೀಗೆ ಜನಿಸಿದ ಆನೆ ಮರಿಗೆ ಇಂದು ನಾಮಕರಣ ಶಾಸ್ತ್ರ ನಡೆಸಲಾಗಿದ್ದು, ಆನೆ ಮರಿಗೆ ಶಿವಾನಿ ಎಂದು ಹೆಸರಿಡಲಾಗಿದೆ.

ಕಳೆದ‌ ಜುಲೈ1 ರಂದು ದೇಗುಲದ ಆನೆ ಲಕ್ಷ್ಮೀ ಹೆಣ್ಣು ಮರಿಗೆ ಜನ್ಮ ನೀಡಿತ್ತು. ಆ ಆನೆ ಮರಿಯ ನಾಮಕರಣ ಆ.31 ರಂದು ಅಂದರೆ ಇಂದು ತುಲಾ ಲಗ್ನ ಮುಹೂರ್ತದಲ್ಲಿ ನಡೆಯಿತು. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಆನೆ ಮರಿಗೆ ಶ್ರೀ ದೇವರ ಪ್ರಸಾದ ನೀಡಿ, ಗಂಟೆ  ಕಟ್ಟುವ ಮೂಲಕ ವಿಧಿ ನೆರವೇರಿಸಿದರು.

ಈ ವೇಳೆ ಈ ಹೆಣ್ಣು ಆನೆ ಮರಿಗೆ ಶಿವಾನಿ ಎಂದು ಹೆಸರಿಡಲಾಗಿದೆ. ಧರ್ಮಸ್ಥಳದ ಡಾ.ಡಿ.ಹೆಗ್ಗಡೆ ಮೊಮ್ಮಗಳು ಮಾನ್ಯ ಅವರು ಶಿವಾನಿ ಹೆಸರು ಉದ್ಘೋಶಿಸುವ ಮೂಲಕ ನಾಮಕರಣ ಮಾಡಿದರು. ಇದೇ ವೇಳೆ ಶ್ರೀಧಾಮ‌ ಮಾಣಿಲದ ಮೋಹನದಾಸ ಸ್ವಾಮೀಜಿ ಆನೆಯ ಮಾವುತ ಕೃಷ್ಣರಿಗೆ ಸನ್ಮಾನ  ನೆರವೇರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com