ಹಿಂದಿನ ಜನ್ಮದ ಮೂಲವನ್ನು ಅರಸಿ ಕೊಪ್ಪದ ಮೇಗೂರಿಗೆ ಬಂದ ಬೆಂಗಳೂರು ಯುವತಿ!

ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿಗೆ ಕರೆದೊಯ್ಯಿವಂತೆ ಬೆಂಗಳೂರಿನ ಯುವತಿಯೊಬ್ಬಳು ತನ್ನ ಹೆತ್ತವರನ್ನು ನಿರಂತರವಾಗಿ ಒತ್ತಾಯಿಸಿದ ಬಳಿಕ ಅವರು ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದ್ದುದಾಗಿ ಹೇಳಿದ್ದಲ್ಲದೆ ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇ
ಹಿಂದಿನ ಜನ್ಮದ ಮೂಲವನ್ನು ಅರಸಿ ಕೊಪ್ಪದ ಮೇಗೂರಿಗೆ ಬಂದ ಬೆಂಗಳೂರು ಯುವತಿ!
Updated on

ಕೊಪ್ಪ: ಚಿಕ್ಕಮಗಳೂರಿನ ಕೊಪ್ಪ ತಾಲೂಕು ಮೇಗೂರಿಗೆ ಕರೆದೊಯ್ಯಿವಂತೆ ಬೆಂಗಳೂರಿನ ಯುವತಿಯೊಬ್ಬಳು ತನ್ನ ಹೆತ್ತವರನ್ನು ನಿರಂತರವಾಗಿ ಒತ್ತಾಯಿಸಿದ ಬಳಿಕ ಅವರು ಆಕೆಯನ್ನು ಈ ಗ್ರಾಮಕ್ಕೆ ಕರೆತಂದಿದ್ದರು. ವಿಶೇಷವೆಂದರೆ ಈ ಯುವತಿ ಮೇಗೂರಿಗೆ ಹೊರಗಿನವಳಾಗಿದ್ದರೂ ಅಲ್ಲಿನ ಎಲ್ಲಾ ಬೀದಿ, ದೇವಾಲಯಗಳ ಪರಿಚಯವಿದ್ದುದಾಗಿ ಹೇಳಿದ್ದಲ್ಲದೆ ಮೇಗೂರು ತನ್ನ ಹಿಂದಿನ ಜನ್ಮದಲ್ಲಿನ ಊರು ಎಂದೂ ಹೇಳಿದ್ದಾರೆ.

ಯುವತಿಯನ್ನು ಜಾವಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮೇಗೂರಿಗೆ ಭಾನುವಾರ ಕರೆತರಲಾಯಿತು. ಅವಳು ಬೆಂಗಳೂರಿನ ಹೆಬ್ಬಾಳ ಸಮೀಪದ  ನಾಗವಾರ ಮೂಲದವಳಾಗಿದ್ದು ಕಳೆದ ಕೆಲವು ತಿಂಗಳುಗಳಿಂದ, ಅವಳು ವಿಚಿತ್ರವಾಗಿ ವರ್ತಿಸುತ್ತಿದ್ದಳು. ಅಲ್ಲದೆ ಊಟ ತಿಂಡಿಯನ್ನೂ ಸರಿಯಾಗಿ ಮಾಡುತ್ತಿರಲಿಲ್ಲ. 

ಆಕೆಯ ಪೋಷಕರು ಪ್ರಶ್ನಿಸಿದಾಗ, ಆಕೆ  ನಾಲ್ಕು ತಲೆಮಾರುಗಳ ಹಿಂದೆ ಮೇಗೂರಿನಲ್ಲಿ ತಾನು ಅರ್ಚಕರ ಮಗಳಾಗಿ ಜನಿಸಿದ್ದೆ, ಆ ಸ್ಥಳವನ್ನೊಮ್ಮೆ ನೋಡಬೇಕು ಎಂದು ಬಯಸುವುದಾಗಿ ಹೇಳಿದ್ದಾಳೆ.

ಹೆತ್ತವರು ಒತ್ತಡಕ್ಕೆ ಮಣಿದು ಮೆಗೂರು ಅಮೃತೇಶ್ವರ ದೇವಾಲಯಕ್ಕೆ ಮಗಳನ್ನು ಕರೆತಂದಿದ್ದಾರೆ. ಆ ಸ್ಥಳ ತಲುಪುತ್ತಿದ್ದ ಹಾಗೆಯೇ ಆಕೆಯಲ್ಲಿ ಬದಲಾವಣೆ ಕಾಣಿಸಿದ್ದಲ್ಲದೆ ಯುವತಿ ಸಹಜ ಸ್ಥಿತಿಗೆ ಮರಳಿದ್ದಾಳೆ.  ಆದರೆ ಯುವತಿ ಹೇಳಿದಂತೆ ದೇವಾಲಯದ ಅರ್ಚಕರಾರೂ ನಮ್ಮಲ್ಲಿದ್ದದ್ದು ನಮಗೆ ಅರಿವಿಲ್ಲ ಎಂದು ಗ್ರಾಮದ ಹಿರಿಯರಾದ ಚನ್ನಕೇಶವ ಗೌಡ ಎನ್ನುವವರು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com