ವೆಬ್ ಸೈಟ್ ನಲ್ಲಿ ಪ್ರತಿ 3 ತಿಂಗಳಿಗೊಮ್ಮೆ ಹಣಕಾಸು ಮತ್ತು ಇತರ ವಿವರಗಳನ್ನು ಪ್ರವರ್ತಕರು ನೀಡಬೇಕು: ರೇರಾ 

ರಾಜ್ಯದ 1,437 ಪ್ರವರ್ತಕರು ಕೂಡಲೇ ತಮ್ಮ ತ್ರೈಮಾಸಿಕ ಹಣಕಾಸು ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ವಿವರ ನೀಡಬೇಕು ಇಲ್ಲದಿದ್ದರೆ ದಂಡ ಪಾವತಿಸಬೇಕೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ಎಚ್ಚರಿಕೆ ನೀಡಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದ 1,437 ಪ್ರವರ್ತಕರು ಕೂಡಲೇ ತಮ್ಮ ತ್ರೈಮಾಸಿಕ ಹಣಕಾಸು ಮತ್ತು ಇತರ ವಿವರಗಳನ್ನು ವೆಬ್ ಸೈಟ್ ನಲ್ಲಿ ವಿವರ ನೀಡಬೇಕು ಇಲ್ಲದಿದ್ದರೆ ದಂಡ ಪಾವತಿಸಬೇಕೆಂದು ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ-ಕರ್ನಾಟಕ(ರೇರಾ-ಕೆ) ಎಚ್ಚರಿಕೆ ನೀಡಿದೆ. 

ಈ ಸಂಬಂಧ ಪ್ರವರ್ತಕರಿಗೆ ಪದೇ ಪದೇ ನೋಟಿಸ್ ನೀಡಲಾಗಿದ್ದರೂ,ವಿಫಲವಾಗಿದ್ದು, ಡಿಸೆಂಬರ್ 31ಕ್ಕೆ ಗಡುವು ನೀಡಲಾಗಿದೆ. ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ ರೇರಾ ಕೆ ಅಧ್ಯಕ್ಷೆ ಕೆ ಎಸ್ ಲತಾ ಕುಮಾರಿ,ನಮ್ಮೊಂದಿಗೆ ನೋಂದಾಯಿಸಿಕೊಂಡ ಎಲ್ಲಾ ಕಂಪನಿಗಳು ಪ್ರತಿ ಮೂರು ತಿಂಗಳಿಗೊಮ್ಮೆ ತಮ್ಮ ಹಣಕಾಸಿನ ಸ್ಥಿತಿ ಮತ್ತು ಆಯಾ ಯೋಜನೆಗಳಲ್ಲಿ ಮಾಡಿದ ಕೆಲಸದ ಪ್ರಗತಿಯನ್ನು ನವೀಕರಿಸಬೇಕಾಗುತ್ತದೆ. 

ರೇರಾ ಕಾಯ್ದೆಯ ವಿವಿಧ ನಿಬಂಧನೆಗಳ ಅಡಿಯಲ್ಲಿ ನವೀಕರಣಗಳನ್ನು ಮಾಡುವ ಅವಶ್ಯಕತೆಯಿದೆ. ಸಂಸ್ಥೆಗಳು ನವೀಕರಣಗಳನ್ನು ಬಿಡುಗಡೆ ಮಾಡಿದರೆ ಮಾತ್ರ ರೇರಾ ಅವರ ಪ್ರಗತಿಯನ್ನು ನಿರ್ಣಯಿಸುವ ಸ್ಥಿತಿಯಲ್ಲಿರುತ್ತದೆ, ಜೊತೆಗೆ ಫ್ಲಾಟ್ ಖರೀದಿದಾರರು ಪಾವತಿಸುವ ಮೊತ್ತವನ್ನು ಉದ್ದೇಶಿತ ಉದ್ದೇಶಕ್ಕಾಗಿ ಬಳಸಲಾಗಿದೆಯೇ ಎಂದು ಪರಿಶೀಲಿಸಿ ಎಂದು ಹೇಳಿದರು. ಪ್ರವರ್ತಕರು ಇದಕ್ಕಾಗಿ ಪ್ರತ್ಯೇಕ ಖಾತೆಯನ್ನು ರಚಿಸುತ್ತಾರೆ ಮತ್ತು ಅದರಲ್ಲಿ ಸಂಗ್ರಹಿಸಿದ ಮೊತ್ತದ ಶೇಕಡಾ 70 ರಷ್ಟು ಹಣವನ್ನು ಜಮಾ ಮಾಡುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com