ವಿಪಕ್ಷಗಳ ಗದ್ದಲದ ನಡುವೆ ಪರಿಷತ್ ನಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರ

ಬಹು ಚರ್ಚಿತ ಎಪಿಎಂಸಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ.
ವಿಪಕ್ಷಗಳ ಗದ್ದಲದ ನಡುವೆ ಪರಿಷತ್ ನಲ್ಲಿ ಎಪಿಎಂಸಿ ತಿದ್ದುಪಡಿ ವಿಧೇಯಕ ಅಂಗೀಕಾರ

ಬೆಂಗಳೂರು:  ಬಹು ಚರ್ಚಿತ ಎಪಿಎಂಸಿ ತಿದ್ದುಪಡಿ ಮಸೂದೆಗೆ ಅಂಗೀಕಾರ ದೊರೆತಿದೆ.

ಬಹುಹೊತ್ತಿನ ತನಕ ನಡೆದ ಚರ್ಚೆ ನಂತರ ಪ್ರತಿಪಕ್ಷಗಳ ವಿರೋಧದ ನಡುವೆ ಮಸೂದೆ ಅಂಗೀಕಾರ ಪಡೆಯಿತು.

ಸದನದಲ್ಲಿ  ವಿಪಕ್ಷ ನಾಯಕ ಎಸ್.ಆರ್.ಪಾಟೀಲ್ ಮಸೂದೆ ಗೆ ತೀವ್ರ ಪ್ರತಿರೋಧ ತೋರಿ :ಕಾಯ್ದೆ ಜರಿಗೆ ತಂದರೆ ರೈತರ ಶಾಪ ತಟ್ಟದೆ ಇರದು, ಶಾಪ ತಟ್ಟಿದರೆ ಸರ್ಕಾರ ಉದ್ದಾರ ಆಗಲ್ಲ" ಎಂದರು.  ಅಲ್ಲದೆ :ರೈತರನ್ನು ಕೊಲ್ಲುವ ಪ್ರಯತ್ನ ಬೇಡ: ಎಂದು ಹೇಳಿದ್ದಾರೆ, 

ಇದಕ್ಕೆ ಉತ್ತರಿಸಿದ್ದ ಸಚಿವ  ಎಸ್.ಟಿ.ಸೋಮಶೇಖರ್ "ಎಪಿಎಂಸಿ  ಮುಚ್ಚುವುದಿಲ್ಲ.  ಅಧಿಕಾರ ಕಡಿತವೂ ಆಗಲ್ಲ,. ಆದರೆ ಕಾಂಗ್ರೆಸ್ ಹೈಕಮಾಂಡ್ ಆದೇಶದಂತೆ ಮಸೂದೆಗೆ ವಿರೋಧ ವ್ಯಕ್ತ ಮಾಡುತ್ತಿದೆ : ಎಂದರು. ಸೋಮಶೇಖರ್ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರೆ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟಿಸಿದ್ದಾರೆ.

ಮಸೂದೆ ಅಂಗೀಕಾರ ಪ್ರಕ್ರಿಯೆ ನಂತರ ರಿಷತ್ ಕಲಾಪ ನಾಳೆ ಬೆಳಗ್ಗೆ 11ಕ್ಕೆ ಮುಂದೂಡಿ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ  ಸೂಚನೆ ನೀಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com