ರಾಜ್ಯದಲ್ಲಿ ಇಳಿಮುಖವಾಗುತ್ತಿರುವ ಕೊರೋನಾ: ಬೆಂಗಳೂರಿನಲ್ಲಿ 701 ಸೇರಿ 1,238 ಹೊಸ ಪ್ರಕರಣಗಳು ಪತ್ತೆ

ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,238  ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 5,076  ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.
ರಾಜ್ಯದಲ್ಲಿ ಇಳಿಮುಖವಾಗುತ್ತಿರುವ ಕೊರೋನಾ: ಬೆಂಗಳೂರಿನಲ್ಲಿ 701 ಸೇರಿ 1,238 ಹೊಸ ಪ್ರಕರಣಗಳು ಪತ್ತೆ
Updated on: 

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1,238  ಹೊಸ ಕೋವಿಡ್ ಪ್ರಕರಣಗಳು ವರದಿಯಾಗಿದ್ದು 5,076  ಮಂದಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಇದರೊಡನೆ ರಾಜ್ಯದಲ್ಲಿ ಇದುವರೆಗೆ ಒಟ್ಟೂ ಕೋವಿಡ್ ಪೀಡಿತರ ಸಂಖ್ಯೆ 8,97,801ಗೆ ತಲುಪಿದೆ. ಅದರಲ್ಲಿ 8,66,664 ಮಂದಿ ಗುಣಮುಖವಾಗಿದ್ದಾರೆ.  ಸಕ್ರಿಯ ಪ್ರಕರಣಗಳು 19,206 ಆಗಿದೆ.

ಇಂದು ಒಂದೇ ದಿನ ರಾಜ್ಯದಲ್ಲಿ 12 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದುವರೆಗೆ 11,912 ಮಂದಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಇನ್ನು ಬೆಂಗಳೂರು ನಗರದಲ್ಲಿ ಈ ದಿನ ಹೊಸದಾಗಿ 701 ಪ್ರಕರಣ ಪತ್ತೆಯಾಗಿದ್ದು ಒಟ್ಟೂ ಸೋಂಕಿತರ ಸಂಖ್ಯೆ 3,76,592ಗೆ ತಲುಪಿದೆ. ಇಂದು ನಗರದಲ್ಲಿ 8 ಮಂದಿ ಕೊರೋನಾದಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ ಒಟ್ಟೂ 4,218 ಮಂದಿ ಕೊರೋನಾ ಕಾರಣಕ್ಕೆ ಮೃತಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com