ಗ್ರಾಮಗಳ ಮೇಲೆ ದಾಳಿ ಮಾಡುವ ಕಾಡುಮೃಗಗಳನ್ನು ಕೊಲ್ಲಲು ಬಂದೂಕು ಬಳಕೆಗೆ ಅನುಮತಿ ನೀಡಿ: ಬಿಜೆಪಿ ಶಾಸಕ

ಜಮೀನುಗಳ ಮೇಲೆ ದಾಳಿ ಮಾಡುವ ಮತ್ತು ರೈತರು ಬೆಳೆದ ಬೆಳೆಗಳಿಗೆ ಹಾನಿಮಾಡುವ ಕಾಡು ಪ್ರಾಣಿಗಳನ್ನು ಕೊಲ್ಲಲು ಕಾಡಂಚಿನಲ್ಲಿರುವ ಗ್ರಾಮಸ್ಥರಿಗೆ ಅನುಮತಿ ನೀಡಿ ಎಂದು ಬಿಜೆಪಿ ಶಾಸಕ ಅಗರಾ ಜ್ಞಾನೇಂದ್ರ ಅವರು ಆಗ್ರಹಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜಮೀನುಗಳ ಮೇಲೆ ದಾಳಿ ಮಾಡುವ ಮತ್ತು ರೈತರು ಬೆಳೆದ ಬೆಳೆಗಳಿಗೆ ಹಾನಿಮಾಡುವ ಕಾಡು ಪ್ರಾಣಿಗಳನ್ನು ಕೊಲ್ಲಲು ಕಾಡಂಚಿನಲ್ಲಿರುವ ಗ್ರಾಮಸ್ಥರಿಗೆ ಅನುಮತಿ ನೀಡಿ ಎಂದು ಬಿಜೆಪಿ ಶಾಸಕ ಅಗರಾ ಜ್ಞಾನೇಂದ್ರ ಅವರು ಆಗ್ರಹಿಸಿದ್ದಾರೆ.

ವಿಧಾನಸಭೆಯಲ್ಲಿ ನಡೆದ ಚರ್ಚೆ ವೇಳೆ ಗ್ರಾಮಗಳಿಗೆ ದಾಳಿ ಮಾಡುವ ಕಾಡುಪ್ರಾಣಿಗಳನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಮಲ್ನಾಡ್ ಪ್ರದೇಶದ ಶಾಸಕರು ಕೂಡಲೇ ಕ್ರಮಕ್ಕೆ ಆಗ್ರಸಿಹಿಸಲಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿ ಮಾತನಾಡಿದ  ಬಿಜೆಪಿ ಶಾಸಕ ಅಗರಾ ಜ್ಞಾನೇಂದ್ರ ಅವರು ಕಾಡು ಪ್ರಾಣಿಗಳನ್ನು ಕೊಲ್ಲಲು ಶಸ್ತ್ರಾಸ್ತ್ರಗಳನ್ನು ಬಳಸಲು ಸರ್ಕಾರ ಅನುಮತಿಸಬೇಕೆಂದು ಒತ್ತಾಯಿಸಿದರು. 

"ಬಂದೂಕುಗಳನ್ನು ಬಳಸಲು ನಮಗೆ ಅನುಮತಿ ನೀಡಿ, ನಾವು ಪ್ರಾಣಿಗಳನ್ನು ಕೊಂದು ಅವುಗಳನ್ನು ನಿಯಂತ್ರಿಸುತ್ತೇವೆ ಎಂದು ಅವರು ಹೇಳಿದರು. ಬಹಳ ಹಿಂದಿನಿಂದಲೂ ಮಲೆನಾಡು ಪ್ರದೇಶಗಳಲ್ಲಿ ಆನೆಗಳ ಹಾವಳಿ ಇದೆ. ಗ್ರಾಮಗಳ ಮೇಲೆ ದಾಳಿ ಮಾಡುವ ಆನೆಗಳು ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು  ಹಾಳು ಮಾಡುತ್ತಿವೆ. ಹೀಗಾಗಿ ರೈತರು ಆಗಾಗ್ಗೆ ತಮ್ಮ ಸುಗ್ಗಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಸರ್ಕಾರವನ್ನು ಎಚ್ಚರಿಸುವ ಪ್ರಯತ್ನ ಮಾಡಿದರು.

ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಮುಡಿಗರೆ ಶಾಸಕ ಎಂ ಪಿ ಕುಮಾರಸ್ವಾಮಿ ತಮ್ಮ ಕ್ಷೇತ್ರದಲ್ಲಿ ಆನೆಗಳ ದಾಳಿ ಹೆಚ್ಚಾಗಿದ್ದು, ರೈತರು ತಮ್ಮ ಬೆಳೆಗಳನ್ನು ಬೆಳೆಯಲು ಇಡೀ ವರ್ಷ ಶ್ರಮಿಸುತ್ತಾರೆ, ಆದರೆ ಕೊಯ್ಲು ಅವಧಿ ಬಂದಾಗ, ಆನೆಗಳು ದಾಳಿ ಮಾಡಿ ಹಾನಿಮಾಡುತ್ತವೆ. ಇದನ್ನು ನಿಲ್ಲಿಸಬೇಕಾಗಿದೆ  ಎಂದು ಹೇಳಿದರು. ಸ್ಪೀಕರ್ ಕಾಗೇರಿ ಅವರು ಕೂಡ ಇದಕ್ಕೆ ಧನಿ ಸೇರಿಸಿ ಈಗ ದಾಳಿಗಳು ವಿಪರೀತವಾಗಿವೆ. ಅಂತೆಯೇ ಬೆಳೆ ನಷ್ಟಕ್ಕೆ ರೈತರಿಗೆ ಪರಿಹಾರ ನೀಡಬೇಕು ಎಂದು ಕಾಗೇರಿ ಹೇಳಿದರು. "ಇದು ಕೇವಲ ಆನೆಗಳಿಂದ ಮಾತ್ರವಲ್ಲ, ರೈತರು ಹಂದಿಗಳು, ನವಿಲುಗಳು, ಕೋತಿಗಳು ಮತ್ತು ಇತರ ಪ್ರಾಣಿಗಳಿಂದಲೂ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಾಗೇರಿ ಹೇಳಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com