ಯೋಗೀಶ್ ಗೌಡ ಹತ್ಯೆ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ ಸಿಬಿಐ ಬಲೆಗೆ

 ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯೊಬ್ಬನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.
ಯೋಗೀಶ್ ಗೌಡ ಹತ್ಯೆ: ಮಾಜಿ ಸಚಿವ ವಿನಯ್ ಕುಲಕರ್ಣಿ ಸಂಬಂಧಿ ಸಿಬಿಐ ಬಲೆಗೆ
Updated on

ಬೆಂಗಳೂರು: ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯೊಬ್ಬನನ್ನು ಕೇಂದ್ರ ತನಿಖಾ ದಳ (ಸಿಬಿಐ) ಬಂಧಿಸಿದೆ.. ಬಂಧಿತನನ್ನು ಚಂದ್ರಶೇಖರ್ ಇಂಡಿ ಎಂದು ಗುರುತಿಸಲಾಗಿದ್ದು ಇದರೊಡನೆ ಕೊಲೆ ಪ್ರಕ್ರಣದಲ್ಲಿ ಇದುವರೆಗೆ ಎಂಟು ಮಂದಿಯನ್ನು ಬಂಧಿಸಿದಂತಾಗಿದೆ. 

ಮೂಲಗಳ ಪ್ರಕಾರ, ಚಂದ್ರಶೇಖರ್ ಯೋಗೀಶ್ ಗೌಡ ಅವರನ್ನು ಕೊಲ್ಲಲು ಪ್ರಧಾನ ಆರೋಪಿ ಬಸಪ್ಪ ಶಿವಪ್ಪ ಮುಟ್ಟಿಗಿಗೆ ದೇಶೀ ನಿರ್ಮಿತ ಪಿಸ್ತೂಲ್ ಅನ್ನು ಸರಬರಾಜು ಮಾಡಿದ್ದಾನೆ ಎಂದು ಆರೋಪವಿದೆ. "ಸಿಬಿಐ ಈ ಹಿಂದೆ ಮುಟ್ಟಗಿಯಿಂದ ಮೂರು ನಿಷಿದ್ಧ ಪಿಸ್ತೂಲ್ ಗಳನ್ನು ವಶಪಡಿಸಿಕೊಂಡಿದೆ. ಅವುಗಳಲ್ಲಿ ಒಂದನ್ನು ಅಪರಾಧದಲ್ಲಿ ಬಳಸಲಾಗಿದೆ, ”

ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಯೋಗೀಶ್ ಗೌಡ ಅವರನ್ನು ಜೂನ್ 15, 2016 ರಂದು ಧಾರವಾಡದ ತನ್ನ ಜಿಮ್‌ನ ಹೊರಗೆ ಬೈಕ್ ನಲ್ಲಿ ಬಂದ ಅಪರಿಚಿತರು ಕೊಲೆ ಮಾಡಿದ್ದರು, ಇಬ್ಬರಿಗೆ ವಿಭಿನ್ನ ರಾಜಕೀಯ ಸಂಪರ್ಕಗಳಿದ್ದರೂ ಮುತ್ತಗಿ ಮೃತ ಯೋಗೀಶ್ ಸ್ನೇಹಿತನಾಗಿದ್ದ. ಆತನ ಭೂ ವ್ಯವಹಾರದ ಬಗ್ಗೆ ಯೋಗೀಶ್ ಗೌಡಗೆ ಸಹ ತಿಳಿದಿತ್ತು ಮತ್ತು ಇದರ ವಿರುದ್ಧ ಆತನನ್ನು ಎಚ್ಚರಿಸಿದ್ದರು. ಭೂಮಿಯನ್ನು ಖರೀದಿಸಿದರೆ ಮುತ್ತಗಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಅಂದಿನಿಂದ, ಮುತ್ತಗಿ ಯೋಗೀಶ್ ಗೌಡ ವಿರುದ್ಧ ದ್ವೇಷ ಸಾಧಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣವನ್ನು ಕರ್ನಾಟಕ ಪೊಲೀಸರು ತನಿಖೆ ನಡೆಸಿದ್ದು, 2016 ರ ಸೆಪ್ಟೆಂಬರ್ 9 ರಂದು ಆರು ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದರು. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು. ಕುಲಕರ್ಣಿಯೋಗೀಶ್ ಗೌಡನೊಂದಿಗೆ ಜಗಳವಾಡಿದ್ದರೆಂದು ಸಿಬಿಐ ಹೇಳಿದೆ ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ತನಿಖಾ ಸಂಸ್ಥೆ ದಿನೇಶ್, ಸುನಿಲ್, ನೂತನ್, ಅಶ್ವತ್, ಶಹನವಾಜ್ ಮತ್ತು ನಜೀರ್ ಅಹ್ಮದ್ ಎಂಬ ಆರು ಜನರನ್ನು ಬಂಧಿಸಿ, ಧಾರವಾಡದ ಮಾಜಿ ಪೊಲೀಸ್ ಆಯುಕ್ತ ಪಾಂಡುರಂಗ ರಾಣೆ ಅವರನ್ನೂ ಸಹ ಪ್ರಶ್ನಿಸಿದೆ. ಅಲ್ಲದೆ ಜೂನ್‌ನಲ್ಲಿ ಸಿಬಿಐ ಪ್ರಾಥಮಿಕ ಚಾರ್ಜ್‌ಶೀಟ್ ಸಲ್ಲಿಸಿ ಗೌಡ ಕೊಲೆ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು ಹೇಳಿಕೆ ನೀಡಿತ್ತು

ಸಿಬಿಐ ತನಿಖೆಯ ಪ್ರಕಾರ, ಆಗ ಶಾಸಕ ಮತ್ತು ಸಚಿವರಾಗಿದ್ದ ಕುಲಕರ್ಣಿಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸದಂತೆ ಯೋಗೀಶ್ ಗೌಡರನ್ನು ಕೇಳಿದ್ದರು, ಆದರೆ ಗೌಡ ಅದಕ್ಕೆ ಒಪ್ಪಿರಲಿಲ್ಲ ಈ ನಂತರದಲ್ಲಿ ಕುಲಕರ್ಣಿ ಮತ್ತು ಗೌಡ ಅವರು ಹಲವಾರು ಸಂದರ್ಭಗಳಲ್ಲಿ ವಾಗ್ವಾದ ನಡೆಸಿದ್ದರು, ಜಗಳವಾಡಿದ್ದರು. . ಏಪ್ರಿಲ್ 22, 2016 ರಂದು ಕುಲಕರ್ಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಪಂಚಾಯತ್ ಸಭೆಯಲ್ಲಿ “ಗಂಭೀರ ವಾಗ್ವಾದ” ನಡೆದಿತ್ತು, ಇದು ಯೋಗೀಶ್ ಗೌಡ ಹತ್ಯೆಗೆ ಸಂಚು ಮಾಡಲು ಕಾರಣವಾಗಿದೆ ಎಂದು  ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com