ವಿಸ್ಚ್ರನ್ ಕಾರ್ಪೊರೇಷನ್ ಗೆ ಮತ್ತಷ್ಟು ಜಾಗ ನೀಡಲು ಕೋಲಾರ ಜಿಲ್ಲಾಡಳಿತ ಉತ್ಸುಕ!

ಇತ್ತೀಚೆಗೆ ಗಲಭೆಗೆ ಸಾಕ್ಷಿಯಾಗಿದ್ದ ಐಫೋನ್ ತಯಾರಿಕಾ ಸಂಸ್ಥೆ ಕೋಲಾರದ ವಿಸ್ಚ್ರನ್ ಕಾರ್ಪೋರೇಷನ್ ಸಂಸ್ಥೆಗೆ ಮತ್ತಷ್ಟು ಜಾಗ ನೀಡಲು ಕೋಲಾರ ಜಿಲ್ಲಾಡಳಿತ ಉತ್ಸುಕವಾಗಿದೆ.
ವಿಸ್ಟ್ರನ್ ಸಂಸ್ಥೆ
ವಿಸ್ಟ್ರನ್ ಸಂಸ್ಥೆ

ಕೋಲಾರ: ಇತ್ತೀಚೆಗೆ ಗಲಭೆಗೆ ಸಾಕ್ಷಿಯಾಗಿದ್ದ ಐಫೋನ್ ತಯಾರಿಕಾ ಸಂಸ್ಥೆ ಕೋಲಾರದ ವಿಸ್ಚ್ರನ್ ಕಾರ್ಪೋರೇಷನ್ ಸಂಸ್ಥೆಗೆ ಮತ್ತಷ್ಟು ಜಾಗ ನೀಡಲು ಕೋಲಾರ ಜಿಲ್ಲಾಡಳಿತ ಉತ್ಸುಕವಾಗಿದೆ.

ಕೋಲಾರ ತಾಲೂಕಿನ ನರಸಾಪುರದಲ್ಲಿ ನಾಲ್ಕು ತಿಂಗಳ ಹಿಂದೆ ಪ್ರಾರಂಭವಾದ ವಿಸ್ಟ್ರಾನ್‌ ಇನ್ಫೋಕಾಮ್‌ ಕಾರ್ಖಾನೆ ಮೇಲೆ ನಡೆದ ದಾಳಿ ಬರೀ ಆ ಕಾರ್ಖಾನೆ ಮೇಲಿನ ದಾಳಿ ಅಲ್ಲ, ಇದು ಕರ್ನಾಟಕದ ಪ್ರತಿಷ್ಠೆಗೆ ಕುತ್ತು ತಂದ ಘಟನೆ. ಇದನ್ನು ಸರಿಪಡಿಸಲು ಕರ್ನಾಟಕ ಸರಕಾರ ಕೆಲಸ  ಮಾಡುತ್ತಿದೆ. ಕಾರ್ಮಿಕರು ನಡೆಸಿದ ದಾಳಿಯಲ್ಲಿ ಕಂಪನಿಗೆ ₹ 437.70 ಕೋಟಿ ನಷ್ಟವಾಗಿದ್ದ ಈ ಸಂಬಂಧ, 300ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಹೇಳಿದೆ.

ಗಲಾಟೆಯಿಂದ ಕಾರ್ಖಾನೆಗೆ ಹಾನಿಯಾಗಿದ್ದು ಅಷ್ಟೇ ಅಲ್ಲ, ಅಲ್ಲಿ ಇದ್ದ iPhoneಗಳನ್ನು ಕದ್ದುಕೊಂಡು ಹೋದ ಕಾರ್ಮಿಕರ ಕ್ರಿಯೆಯಿಂದಾಗಿ ಕರ್ನಾಟಕದ ಬಗ್ಗೆ ಹೊರ ಜಗತ್ತಿಗೆ ಇದ್ದ ಅಭಿಪ್ರಾಯ ಕೂಡ ಪರೀಕ್ಷೆಗೆ ಒಳಪಡುವಂತಾಗಿದೆ. ಈ ಕಾರ್ಖಾನೆ ಯಾವ ಕಾರಣಕ್ಕೂ ಮುಚ್ಚಬಾರದು.  ಅದೇ ಉದ್ದೇಶದಿಂದ ನಾವು ಈಗಾಗಲೇ ಈ ಕಾರ್ಖಾನೆಯ ಮೂಲ ಮಾಲೀಕರರಿರುವ ಕ್ಯಾಲಿಫೋರ್ನಿಯಾ ಮತ್ತು ತೈಪೇ ಯಲ್ಲಿ ಇರುವ ಮುಖ್ಯಸ್ಥರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಏನು ಮಾತನಾಡುತ್ತಿದ್ದೇವೆ ಎಂದು ಈಗ ಹೇಳಲಾಗದು. ಆದರೆ ನಮ್ಮ ಉದ್ದೇಶ ಇಷ್ಟೇ: ಯಾವ  ಕಾರಣಕ್ಕೂ ಕಾರ್ಖಾನೆ ಮುಚ್ಚಬಾರದು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇದೇ ಕಾರಣಕ್ಕೆ ಕೋಲಾರ ಜಿಲ್ಲಾಡಳಿತ ಈ ಹಿಂದೆ ವಿಸ್ಟ್ರನ್ ಸಂಸ್ಥೆ ಜಿಲ್ಲಾಡಳಿತದ ಮುಂದಿಟ್ಟದ್ದ ಎಲ್ಲ ಬೇಡಿಕೆಗಳ ಈಡೇರಿಕೆಗೆ ಮುಂದಾಗಿದೆ. ಪ್ರಮುಖವಾಗಿ ಸಂಸ್ಥೆಯ ಮುಂದಿಟ್ಟಿದ್ದ ಹೆಚ್ಚುವರ ಜಾಗ ಬೇಡಿಕೆ ಈಡೇರಿಸಲು ಜಿಲ್ಲಾಡಳಿತ ಮುಂದಾಗಿದ್ದು, ಪ್ರಸ್ತುತ ಬೆಳ್ಳೂರು ಗ್ರಾಮ  ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಸ್ಥೆಗೆ 43 ಎಕರೆ ಜಾಗ ನೀಡಲಾಗಿದ್ದು, ಇದಲ್ಲದೆ ಹೆಚ್ಚುವರಿ ಜಾಗವನ್ನು ಸಂಸ್ಥೆಗೆ ನೀಡಲು ಜಿಲ್ಲಾಡಳಿತ ಮುಂದಾಗಿದೆ. ಅಂತೆಯೇ ಈ ಹಿಂದೆ ಸಂಸ್ಥೆ ಘಟಕದ ಬಳಿ ಎರಡು ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಂತೆ ಮನವಿ ಮಾಡಿತ್ತು, ಇದನ್ನೂ ಕೂಡ  ಈಡೇರಿಸುವ ಕುರಿತು ಜಿಲ್ಲಾಡಳಿತ ಮುಂದಾಗಿದೆ. 

ಈ ಬಗ್ಗೆ ಮಾಹಿತಿ ನೀಡಿರುವ ಕೋಲಾರ ಉಪ ಆಯುಕ್ತ ಸತ್ಯಭಾಮ ಅವರು 2 ಟ್ಯಾಂಕ್ ಗಳನ್ನು ವಿಸ್ಟ್ರನ್ ಸಂಸ್ಥೆಯ ಸುಪರ್ಧಿಗೆ ನೀಡಲಾಗಿದೆ. ಸಂಸ್ಥೆಗೆ ನೀಡಿರುವ ಜಾಗವನ್ನು ವಿಸ್ಟ್ರನ್ ಸಂಸ್ಥೆ ಆಕರ್ಷಣಾ ಕೇಂದ್ರವಾಗಿ ಮಾರ್ಪಡಿಸಲು ಸಿದ್ಧತೆ ನಡೆಸಿದೆ. ಅಂತೆಯೇ ಈ ಹಿಂದೆ  ಅಧಿಕಾರಿಗಳು ಸಂಸ್ಥೆಗೆ ಭೇಟಿ ನೀಡಿದ್ದಾಗ ಸಂಸ್ಥೆಯ ಅಧಿಕಾರಿಗಳು ಹೆಚ್ಚುವರಿ 5 ಎಕರೆ ಜಾಗ ನೀಡುವಂತೆ ಮನವಿ ಮಾಡಿದ್ದರು. ಈಗಾಗಲೇ ಈ ಸಂಬಂಧ ಪ್ರಕ್ರಿಯೆ ಆರಂಭವಾಗಿದೆ. ಶೀಘ್ರದಲ್ಲೇ ಭೂಮಿಯನ್ನು ಸಂಸ್ಥೆಗೆ ಹಸ್ತಾಂತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇನ್ನು ಜಿಲ್ಲಾಡಳಿತದ ಮೂಲಗಳು ತಿಳಿಸಿರುವಂತೆ ವಿಸ್ಟ್ರನ್ ಸಂಸ್ಥೆ ಇದೇ ಜಿಲ್ಲೆಯಲ್ಲಿ ಮತ್ತೊಂದು ಘಟಕವನ್ನು ತೆರೆಯಲು ಮುಂದಾಗಿದ್ದು, ಇದಕ್ಕಾಗಿ 70ರಿಂದ 90 ಎಕರೆ ಜಾಗ ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದೆ. ನರಸಾಪುರ ಇಂಡಸ್ಟ್ರಿಯಲ್ ಪ್ರದೇಶದ ಮಿಂಡಹಳ್ಳಿಯಲ್ಲಿ  ಇದಕ್ಕಾಗಿ ಜಾಗ ಗುರುತು ಪತ್ತೆ ಮಾಡಲಾಗಿದ್ದು, ಈ ಪೈಕಿ 10 ಎಕರೆ ಭೂಮಿ ಹೆದ್ದಾರಿಗೆ ಹೊಂದಿಕೊಂಡಂತೆ ಇರಬೇಕು ಎಂದು ಸಂಸ್ಥೆ ಮನವಿ ಮಾಡಿದೆ. ಆದರೆ ಈ ಜಾಗದಲ್ಲಿ 10ರಿಂದ 12  ಗೂಡಂಗಡಿಗಳಿದ್ದು, ಈ ಅಂಗಡಿಗಳನ್ನು ಸ್ಥಳೀಯ ಪಂಚಾಯಿತಿ ತೆರವು ಮಾಡಿಸಲಿದೆ ಎಂದು  ಹೇಳಿದ್ದಾರೆ.

ಪೂರ್ವ ನಿಯೋಜತ ಗಲಭೆ?; ತನಿಖೆಗೆ ವಿಶೇಷ ತಂಡ ರಚನೆ
ಇನ್ನು ವಿಸ್ಚ್ರನ್ ಘಟಕದಲ್ಲಿ ನಡೆದ ಗಲಭೆ ಮತ್ತು ಹಿಂಸಾಚಾರ ಪ್ರಕರಣ ಪೂರ್ವ ನಿಯೋಜಿತವೇ ಎಂಬ ಅನುಮಾನ ಹುಟ್ಟಿದ್ದು ಇದಕ್ಕಾಗಿ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ ಪ್ರೆಸ್ ಗೆ ಈ ಕುರಿತು  ಮಾಹಿತಿ ನೀಡಿದ್ದು, ಪ್ರಕರಣವನ್ನು ಎಲ್ಲಾ ಕೋನಗಳಲ್ಲೂ ಪರಿಶೀಲಿಸಲಾಗುತ್ತಿದೆ. ಕಾರ್ಖಾನೆಯ ಮೇಲೆ ಹಠಾತ್ ದಾಳಿ ಹಲವರ ಹುಬ್ಬೇರಿಸಿದ್ದು, ವಿಧ್ವಂಸಕ ಕೃತ್ಯದ ಹಿಂದಿನ ನಿಖರ ಕಾರಣವನ್ನು ಕಂಡುಹಿಡಿಯಲು ರಾಜ್ಯ ಸರ್ಕಾರವೂ ಮುಂದಾಗಿದ್ದು,.ದಾಳಿಯಲ್ಲಿ ಹೊರಗಿನ ಕೈವಾಡ ವಿರುವ  ಶಂಕೆ ಇದೆ,
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com