ಅನುಭವ ಮಂಟಪ ನಿರ್ಮಾಣ ಯೋಜನೆ: ಗುತ್ತಿಗೆಗೆ ಕರೆದ ಸರ್ಕಾರ, ಇವೆಲ್ಲಾ ಗಿಮಿಕ್ ಅಷ್ಟೇ ಎಂದು ಟೀಕಿಸಿದ ಕಾಂಗ್ರೆಸ್ 

ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿ 15 ತಿಂಗಳುಗಳು ಕಳೆದ ಬಳಿಕ ರಾಜ್ಯ ಸರ್ಕಾರ ಇದೀಗ ಯೋಜನೆ ಕುರಿತು ವರದಿ ಸಿದ್ಧಪಡಿಸಲು ಗುತ್ತಿಗೆ ಕರೆದಿದೆ. ಆದರೆ, ರಾಜ್ಯ ಸರ್ಕಾರದ ಈ ನಡೆಯನ್ನು ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಟೀಕಿಸಿದೆ. 
ಅನುಭವ ಮಂಟಪ
ಅನುಭವ ಮಂಟಪ

ಬೆಂಗಳೂರು: ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿ 15 ತಿಂಗಳುಗಳು ಕಳೆದ ಬಳಿಕ ರಾಜ್ಯ ಸರ್ಕಾರ ಇದೀಗ ಯೋಜನೆ ಕುರಿತು ವರದಿ ಸಿದ್ಧಪಡಿಸಲು ಗುತ್ತಿಗೆ ಕರೆದಿದೆ. ಆದರೆ, ರಾಜ್ಯ ಸರ್ಕಾರದ ಈ ನಡೆಯನ್ನು ಚುನಾವಣಾ ಗಿಮಿಕ್ ಎಂದು ಕಾಂಗ್ರೆಸ್ ಟೀಕಿಸಿದೆ. 

ಈ ಹಿಂದೆ ನೂತನ ಸಂಸತ್ ಭವನಕ್ಕೆ ಶಂಕು ಸ್ಥಾಪನೆ ನೆರವೇರಿಸಿದ ಪ್ರಧಾನಿ ಮೋದಿಯವರು, ಬಸವಣ್ಣನವರ ಅನುಭವ ಮಂಟಪ ನೆನೆದು ಕನ್ನಡದಲ್ಲಿ ಮಾತನಾಡಿದ್ದರು. 

ಅನುಭವ ಮಂಟಪ ಜನಸಭೆ ನಾಡಿನ ಒಟ್ಟು ರಾಷ್ಟ್ರದ ಉನ್ನತಿ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ. ಈ ಅನುಭವ ಮಂಟಪ ರಾಜ್ಯ, ರಾಷ್ಟ್ರದ ಉನ್ನತಿಗಾಗಿ ಕೆಲಸ ಮಾಡಲು ಪ್ರೇರಣೆ ನೀಡುತ್ತದೆ. ಅನುಭವ ಮಂಟಪ ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡುತ್ತದೆ ಎಂದು ಹೇಳಿದ್ದರು. 

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ ಅವರು, ಪರಿಕಲ್ಪನೆ ಸಿದ್ಧವಾಗಿದೆ. ಹೊಯ್ಸಳ ಶೈಲಿಯ ವಾಸ್ತುಶಿಲ್ಪದಲ್ಲಿ 3.5 ಎಕರೆ ಭೂಮಿಯಲ್ಲಿ ಅನುಭವ ಮಂಟಪ ನಿರ್ಮಾಣಗೊಳ್ಳಲಿದೆ. ಯೋಜನೆಗೆ ರೂ.500 ಕೋಟಿ ವೆಚ್ಚವಾಗಬಹುದು. ಪ್ರತೀಯೊಂದು ಮಹಡಿಯಲ್ಲಿಯೂ ಒಂದೊಂದು ರೀತಿಯ ಪರಿಕಲ್ಪನೆಗಳಿರಲಿದೆ. ಆಡಿಟೋರಿಯಂನಲ್ಲಿ 770 ಆಸನಗಳಿರಲಿವೆ. ಸಂಪೂರ್ಣ ಮಂಟಪದಲ್ಲಿ 770 ಸ್ತಂಭಗಳಿರಲಿವೆ ಎಂದು ತಿಳಿಸಿದ್ದಾರೆ. 

ಡಿಪಿಆರ್ ಮತ್ತು ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿಗಾಗಿ ಟೆಂಡರ್ ಕರೆದಿದ್ದೇವೆ, ಟೆಂಡರ್ ಪಡೆದವರು ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಬೇಕು ಮತ್ತು ಅದನ್ನು ತಾಂತ್ರಿಕವಾಗಿ ಕಾರ್ಯಸಾಧ್ಯವಾಗಿಸಬೇಕಿದೆ. ಭವಿಷ್ಯದಲ್ಲಿ ಅಧಿವೇಶನಗಳನ್ನು ಇಲ್ಲಿಯೂ ನಡೆಬಹುದಾಗಿದೆ ಎಂದಿದ್ದಾರೆ. 

ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮಾತನಾಡಿ, ಸಿದ್ದರಾಮಯ್ಯ ನಾಯಕತ್ವದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದ್ದಾಗ ಅನುಭವ ಮಂಟಪ ನಿರ್ಮಾಣ ಚಿಂತನೆಗಳನ್ನು ನಡೆಸಲಾಗಿತ್ತು. ಇದೀಗ ಆಡಳಿತಾರೂಢ ಬಿಜೆಪಿ ಸರ್ಕಾರ 15 ತಿಂಗಳ ಬಳಿಕ ನಿರ್ಮಾಣ ಯೋಜನೆಗೆ ಒಪ್ಪಿಗೆ ನೀಡಿದೆ. ಇದನ್ನು ನಾವು ಸ್ವಾಗತಿಸುತ್ತೇವೆ. ಅನುಭವ ಮಂಟಪ ಅಂತರಾಷ್ಟ್ರೀಯ ಕೇಂದ್ರವಾಗಬೇಕು. ಬಸವಕಲ್ಯಾಣದಲ್ಲಿ ಉಪ ಚುನಾವಣೆ ಹತ್ತಿರಬರುತ್ತಿರುವುದರಿಂದ ಬಿಜೆಪಿ ಅನುಭವ ಮಂಟಪ ಕುರಿತು ಚುನಾವಣಾ ರಾಜಕೀಯ ಮಾಡುತ್ತಿದೆ. ಬಿಜೆಪಿಯ ನಿರ್ಧಾರಗಳೆಲ್ಲಾ ಗಿಮಿಕ್ ಅಷ್ಟೇ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com