ಬೆಳ್ತಂಗಡಿ: ಮನೆ ಮಾಲೀಕನನ್ನು ಕಟ್ಟಿಹಾಕಿ ಪತ್ನಿಗೆ ಇರಿದ ಗ್ಯಾಂಗ್; ಅಪಾರ ಪ್ರಮಾಣದ ನಗ, ನಗದು ದೋಚಿ ಪರಾರಿ

ಮನೆಯ ಮಾಲೀಕರನ್ನು ಹಗ್ಗದಿಂದ ಕಟ್ಟಿ, ಅವರ ಪತ್ನಿಗೆ ಚಾಕುವಿನಿಂಡ ಹಲ್ಲೆ ನಡೆಸಿದ ದರೋಡೆಕೋರರು ಅಪಾರ ಪ್ರಮಾಣದ ನಗ, ನಗದನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪ್ರಸಿದ್ದ ಕ್ಷೇತ್ರ ಸೌತಡ್ಕದಲ್ಲಿ ನಡೆದಿದೆ. 
ದರೋಡೆ ನಡೆದ ಮನೆ
ದರೋಡೆ ನಡೆದ ಮನೆ
Updated on: 

ಬೆಳ್ತಂಗಡಿ: ಮನೆಯ ಮಾಲೀಕರನ್ನು ಹಗ್ಗದಿಂದ ಕಟ್ಟಿ, ಅವರ ಪತ್ನಿಗೆ ಚಾಕುವಿನಿಂಡ ಹಲ್ಲೆ ನಡೆಸಿದ ದರೋಡೆಕೋರರು ಅಪಾರ ಪ್ರಮಾಣದ ನಗ, ನಗದನ್ನು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಪ್ರಸಿದ್ದ ಕ್ಷೇತ್ರ ಸೌತಡ್ಕದಲ್ಲಿ ನಡೆದಿದೆ.

ಸೌತಡ್ಕದ ಶ್ರೀ ಮಹಾಗಣಪತಿ ದೇವಾಲಯಕ್ಕೆ ತೆರಳುವ ಮಾರ್ಗದಲ್ಲೇ ಇರುವ ನೂಜಿ ತುಕ್ರಪ್ಪ ಶೆಟ್ಟಿ ಎಂಬುವವರ ಮನೆಗೆ ಸುಮಾರು ಒಂಬತ್ತು ಮಂದಿ ದರೋಡೆಕೋರರ ತಂಡ ನುಗ್ಗಿ ಚಿನ್ನಾಭರಣ, 1.5 ಲಕ್ಷ ಹಣವನ್ನು ದೋಚಿದೆ.

ನಿನ್ನೆ ರಾತ್ರಿ12 ರಿಂದ 2 ರ ಒಳಗೆ ಈ ಘಟನೆ ನಡೆದಿದೆ.

ಮನೆ ಮಾಲೀಕ ತುಕ್ರಪ್ಪ ಶೆಟ್ಟಿ ಹಾಗೂ ಅವರ ಪತ್ನಿ ಗೀತಾಶೆಟ್ಟಿಯನ್ನು ಬೆದರಿಸಿ ದರೋಡೆ ನಡೆಸಲಾಗಿದೆ. ಗೀತಾ ಶೆಟ್ಟಿಗೆ ದರೋಡೆಕೋರರು ಚಾಕುವಿನಿಂದ ಹಲ್ಲೆ ನಡೆಸಿದ್ದು ಅವರಿಗೆ ಗಂಭೀರ ಗಾಯಗಳಾಗಿವೆ. ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಮಯದಲ್ಲಿ ತುಕ್ರಪ್ಪ ಶೆಟ್ಟಿ ದಂಪತಿ ಹಾಗೂ ಇಬ್ಬರು ಚಿಕ್ಕ ಮಕ್ಕಳು ಮನೆಯಲ್ಲಿದ್ದದ್ದಾಗಿ ತಿಳಿದುಬಂದಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಉಪ್ಪಿನಂಗಡಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com