ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳಲ್ಲಿ ಏರಿಕೆ!

ಅಲ್ಪ ಸಮಯದ ನಂತರ  ಕಲ್ಯಾಣ ಕರ್ನಾಟಕ ಭಾಗಗಳಾದ ಕಲಬುರಗಿ, ಬೀದರ್, ಮತ್ತು ಕೊಪ್ಪಳದಲ್ಲಿ ಕೊರೋನಾ ಕೇಸ್ ಗಳು ಹೆಚ್ಚಾಗಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಮತ್ತೆ ಕೊರೋನಾ ಸೋಂಕು ಪ್ರಕರಣಗಳಲ್ಲಿ ಏರಿಕೆ!

ಕಲಬುರಗಿ: ಅಲ್ಪ ಸಮಯದ ನಂತರ  ಕಲ್ಯಾಣ ಕರ್ನಾಟಕ ಭಾಗಗಳಾದ ಕಲಬುರಗಿ, ಬೀದರ್, ಮತ್ತು ಕೊಪ್ಪಳದಲ್ಲಿ ಕೊರೋನಾ ಕೇಸ್ ಗಳು ಹೆಚ್ಚಾಗಿವೆ.

ಡಿಸೆಂಬರ್ 14ರಿಂದ 20ರ ವರೆಗೆ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದೆ,  ಬೀದರ್ ನಲ್ಲಿ ಡಿಸೆಂಬರ್ 10 ರಂದು 69 ಸಕ್ರಿಯ ಪ್ರಕರಣಗಳು ದಾಖಲಾಗಿದ್ದು, ಡಿಸೆಂಬರ್ 10 ರಿಂದ 20 ರವರೆಗೆ 31 ಪ್ರಕರಣಗಳು ವರದಿಯಾಗಿವೆ.

ಕಳೆದ ಒಂದು ವಾರದಲ್ಲಿ 56 ಪಾಸಿಟಿವ್ ಪ್ರಕರಣಳು ಪತ್ತೆಯಾಗಿದ್ದು, ಅದರಲ್ಲಿ 28 ಮಂದಿ ಚೇತರಿಸಿಕೊಂಡಿದ್ದಾರೆ.
ಕಲಬುರಗಿಯಲ್ಲಿ 173 ಪಾಸಿಟಿವ್ ಕೇಸ್ ಗಳಲ್ಲಿ 151 ಮಂದಿ ಸುಧಾರಿಸಿಕೊಂಡಿದ್ದಾರೆ.

ಕೊಪ್ಪಳದಲ್ಲಿ 66 ಪಾಸಿಟಿವ್ ಕೇಸ್ ಪತ್ತೆಯಾಗಿದ್ದು,  23ಮಂದಿ ಚೇತರಿಸಿಕೊಂಡಿದ್ದಾರೆ. ಇದರ ಹೊರತಾಗಿ ಕೋರೊನಾದಿಂದ ಓರ್ವ ರೋಗಿ ಸಾವನ್ನಪ್ಪಿದ್ದಾರೆ. ರಾಯಚೂರಿನಲ್ಲಿ ಕೊರೋನಾ ಪಾಸಿಟಿವ್ ಕೇಸ್ ಗಳು ಕಡಿಮೆಯಾಗಿವೆ. ಸಕ್ರಿಯ ಪ್ರಕರಣಗಳ ಸಂಖ್ಯೆಯು 122 ಕ್ಕೆ ಇಳಿದ ನಂತರ, ಕಳೆದ ವಾರ ರಾಯಚೂರಿನಿಂದ ಸಾವು ಸಂಭವಿಸಿದೆ.

ಕಳೆದ ಮೂರು ವಾರಗಳಲ್ಲಿ ಜಿಲ್ಲೆಯು ಅಪಘಾತ ಮುಕ್ತವಾಗಿತ್ತು. ಸಕಾರಾತ್ಮಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಳ್ಳಾರಿಯಲ್ಲಿ ಸ್ವಲ್ಪ ಸುಧಾರಣೆ ತೋರಿಸಿದ್ದಾರೆ. ಒಟ್ಟು 139 ಜನರಿಗೆ ಪಾಸಿಟಿವ್ ಕಂಡು ಬಂದಿದ್ದರೇ ವಾರದಲ್ಲಿ ಚೇತರಿಕೆಯ ಸಂಖ್ಯೆ 140 ಆಗಿದೆ.ಯಾದಗಿರಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 48 ಇದ್ದು, ಈ ಭಾಗದಲ್ಲೇ ಅತಿ ಕಡಿಮೆಯಾಗಿದೆ, ಕಳೆದ ವಾರದಲ್ಲಿ 43 ಪಾಸಿಟಿವ್ ಪ್ರಕರಣಗಳು ಕಂಡು ಬಂದಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com