ಬೆಂಗಳೂರು: 1 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ, ಇಬ್ಬರು ನೈಜೀರಿಯ ಪ್ರಜೆಗಳ ಸೆರೆ

 ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಪೋಲೀಸರು ಅವರಿಂದ ಎಂಡಿಎಂಎ ಟ್ಯಾಬ್ಲೆಟ್ ಮತ್ತು ಪುಡಿ ಸೇರಿದಂತೆ 1 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಆರೋಪಿಗಳಿಂದ ವಶಕ್ಕೆ ಪಡೆಯಲಾದ ಡ್ರಗ್ಸ್ ಗಳ ಪರಿಶೀಲನೆ ನಡೆಸುತ್ತಿರುವ ಪೋಲೀಸರು
ಆರೋಪಿಗಳಿಂದ ವಶಕ್ಕೆ ಪಡೆಯಲಾದ ಡ್ರಗ್ಸ್ ಗಳ ಪರಿಶೀಲನೆ ನಡೆಸುತ್ತಿರುವ ಪೋಲೀಸರು

ಬೆಂಗಳೂರು: ನೈಜೀರಿಯಾ ಮೂಲದ ಇಬ್ಬರು ಡ್ರಗ್ ಪೆಡ್ಲರ್ ಗಳನ್ನು ಬಂಧಿಸಿದ ಪೋಲೀಸರು ಅವರಿಂದ ಎಂಡಿಎಂಎ ಟ್ಯಾಬ್ಲೆಟ್ ಮತ್ತು ಪುಡಿ ಸೇರಿದಂತೆ 1 ಕೋಟಿ ಮೌಲ್ಯದ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಡಾನ್‍ಚುಕ್ಸ್ ಒಕೇಕೆ ಅಲಿಯಾಸ್ ಟಾಮ್‍ಟಾಮ್ ಅಲಿಯಾಸ್ ಡೊಮೆನ್‍ಕ್ಯೂ (39) ಮತ್ತು ಸೆಲೆಸ್ಟೈನ್ ಅಂಗೂವಾ ಅಲಿಯಾಸ್ ಒಮೇಮಾ (40)  ಎಂದು ಗುರುತಿಸಲಾಗಿದೆ.

ದಾಳಿಯ ಸಮಯದಲ್ಲಿ 3,300 ಎಂಡಿಎಂಎ, ಎಕ್ಟಾಸಿ ಟ್ಯಾಬ್ಲೆಟ್‌ಗಳು ಮತ್ತು 600 ಗ್ರಾಂ ಎಕ್ಟಾಸಿ ಪೌಡರ್, ಅಪರಾಧಕ್ಕೆ ಬಳಸಿದ ಒಂದು ಹೈ ಎಂಡ್ ಕಾರನ್ನು ವಶಪಡಿಸಿಕೊಳ್ಳಲಾಗಿದೆ

ಪ್ರಾಥಮಿಕ ತನಿಖೆಯಿಂದ ಇವರಿಬ್ಬರು ಯುಕೆ ಯ ಡ್ರಗ್ ಜಾಲದ ಮೂಲಕ ಲೀಡ್ಸ್ ನಿಂದ ನಿಷೇಧಿತ ಡ್ರಗ್ಸ್ ಗಳನ್ನು ಪಡೆಯುತ್ತಿದ್ದಾರೆ ಮತ್ತು ಅದನ್ನು ವಿದ್ಯಾರ್ಥಿಗಳಿಗೆ ಮತ್ತು ಟೆಕ್ಕಿಗಳಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಬೈಯಪ್ಪನಹಳ್ಳಿ ಹಾಗೂ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com